IPL Most Catches: ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರು ಯಾರು? ವಿರಾಟ್ ಎಷ್ಟನೇ ಸ್ಥಾನದಲ್ಲಿದ್ದಾರೆ?
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭಾಗವಹಿಸುತ್ತಿರುವ ಆಟಗಾರರು ಈಗಾಗಲೇ ತಾಲೀಮು ನಡೆಸಿದ್ದಾರೆ. ಈ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಕದನ ರೋಚಕತೆ ಹೆಚ್ಚಿಸಿದೆ. ಈ ಶ್ರೀಮಂತ ಲೀಗ್‌ನಲ್ಲಿ ವಿಶ್ವದ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ವಿಶ್ವ ಮಟ್ಟದಲ್ಲಿ ತಮ್ಮ ವಿಶಿಷ್ಠ ಶೈಲಿಯ ಆಟದಿಂದ ಗುರುತಿಸಿಕೊಂಡಿರುವ ಆಟಗಾರರು, ಈಗ ಫ್ರಾಂಚೈಸಿ ಪರ ಮಿಂಚಿ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಈ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎಷ್ಟು ಇಂಪಾರ್ಟೆಂಟ್ ಅಷ್ಟೇ ಫೀಲ್ಡಿಂಗ್ ಸಹ ಮಹತ್ವದಾಗಿದೆ. ಎದುರಾಳಿ ಬ್ಯಾಟರ್‌ಗಳ ರಣ ತಂತ್ರವನ್ನು ಅರಿತು, ಅವರು ಚೆಂಡು ಬಾರಿಸುವ ದಿಕ್ಕಿನಲ್ಲಿ ನಿಂತು ಅವರ ರನ್ ದಾಹಕ್ಕೆ ತಡೆಯೊಡ್ಡುವುದು ಹಾಗೂ ಅವರನ್ನು ಪೆವೆಲಿಯನ್‌ಗೆ ಅಟ್ಟುವುದು ಫೀಲ್ಡರ್‌ಗಳ ಜವಾಬ್ದಾರಿ. ಬ್ಯಾಟರ್‌ಗಳನ್ನು ಫೀಲ್ಡರ್‌ಗಳು ಹೇಗೆ ಔಟ್ ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದ್ದರೆ, ಅದಕ್ಕೆ ಉತ್ತರ ತಮ್ಮ ಫೀಲ್ಡಿಂಗ್ ಕ್ಷಮತೆಯ ಮೂಲಕ. ಸೂಪರ್ ಮ್ಯಾನ್ ರೀತಿ ಫೀಲ್ಡಿಂಗ್ ಮಾಡಿ ತಂಡದ ಗೆಲುವಿನಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುವ ಆಟಗಾರರು ತಂಡದ ಜಯದಲ್ಲಿ ಮಿಂಚಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರ ಯಾರು?
ಐಪಿಎಲ್ ಇತಿಹಾಸದಲ್ಲಿ ಸ್ಟಾರ್ ಆಟಗಾರರು ತಮ್ಮ ಅಮೋಗ ಫೀಲ್ಡಿಂಗ್ ಶಕ್ತಿಯಿಂದಲೇ ಪಂದ್ಯದ ಗತಿಯನ್ನೇ ಬದಲಿಸಿದ್ದಾರೆ. ಈ ಪಟ್ಟಿಯಲ್ಲಿ ಎದ್ದು ಕಾಣುವ ಮೊದಲ ಹೆಸರು ವಿರಾಟ್ ಕೊಹ್ಲಿ. ಇವರ ಫಿಟ್ನೆಸ್ ಹಾಗೂ ಫೀಲ್ಡಿಂಗ್ ಸ್ಕಿಲ್‌ಗಳನ್ನು ನೋಡಿರುವ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಒಂದೇ ಫ್ರಾಂಚೈಸಿ ಪರ 252 ಪಂದ್ಯಗಳನ್ನು ಆಡಿರುವ ಹೆಗ್ಗಳಿಕೆಯನ್ನು ಹೊಂದಿರುವ ವಿರಾಟ್, ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದಿರುವ ಆಟಗಾರ. ಇವರ ಬುಟ್ಟಿಯಲ್ಲಿ ಸದ್ಯ 114 ಕ್ಯಾಚ್‌ಗಳು ಇವೆ. ಸುರೇಶ್ ರೈನಾ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಇವರು 109 ಕ್ಯಾಚ್‌ಗಳನ್ನು ಪಡೆದಿದ್ದಾರೆ.
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರ ಮುಂಬೈ ಕಿರನ್ ಪೋಲಾರ್ಡ್. ಇವರು ತಾವಾಡಿದ 189 ಐಪಿಎಲ್ ಪಂದ್ಯಗಳಲ್ಲಿ 103 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್‌ಗೆ ಐದು ಬಾರಿ ಐಪಿಎಲ್ ಮುಕುಟ ತೊಡಿಸಿರುವ ಆಟಗಾರ ರೋಹಿತ್ ಶರ್ಮಾ ಸಹ ಈ ಪಟ್ಟಿಯಲ್ಲಿ ಇವರು ಸಹ 101 ಕ್ಯಾಚ್‌ಗಳನ್ನು ಪಡೆದಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಆಟಗಾರರ ಪಟ್ಟಿ
| ಆಟಗಾರ | ತಂಡ | ಪಂದ್ಯ | ಕ್ಯಾಚ್ |
| ವಿರಾಟ್ ಕೊಹ್ಲಿ | ಆರ್‌ಸಿಬಿ | 252 | 114 |
| ಸುರೇಶ್ ರೈನಾ | ಸಿಎಸ್‌ಕೆ, ಜಿಎಲ್ | 205 | 109 |
| ಕಿರನ್ ಪೋಲಾರ್ಡ್ | ಮುಂಬೈ | 189 | 103 |
| ರವೀಂದ್ರ ಜಡೇಜಾ | ಸಿಿಎಸ್‌ಕೆ, ಜಿಎಲ್, ಕೊಚ್ಚಿ, ಆರ್‌ಆರ್ | 240 | 103 |
| ರೋಹಿತ್ ಶರ್ಮಾ | ಡಿಸಿಎಚ್, ಎಂಐ | 257 | 101 |
| ಶಿಖರ್ ಧವನ್ | ಡಿಿಸಿ, ಡಿಸಿಎಚ್, ಮುಂಬೈ, ಪಂಜಾಬ್,ಎಸ್‌ಆರ್‌ಎಚ್, | 222 | 99 |
| ಎಬಿಡಿ ವಿಲಿಯರ್ಸ್ | ಡಿಸಿಿ, ಆರ್‌ಸಿಬಿ | 184 | 90 |
| ಡೇವಿಡ್ ವಾರ್ನರ್ | ಡಿಸಿ, ಎಸ್‌ಆರ್‌ಎಚ್ | 184 | 86 |
| ಮನೀಶ್ ಪಾಂಡೆ | ಡಿಸಿ, ಕೆಕೆಆರ್, ಎಲ್‌ಎಸ್‌ಜಿ, ಮುಂಬೈ, ಪುಣೆ, ಆರ್‌ಸಿಬಿ, ಎಸ್‌ಆರ್‌ಎಚ್ | 171 | 83 |
| ಫಾಫ್ ಡುಪ್ಲೇಸಿಸ್ | ಸಿಎಸ್‌ಕೆ, ಆರ್‌ಸಿಬಿ,ಪುಣೆ | 145 | 81 |
| ಡೇ್ವೇನ್ ಬ್ರಾವೋ | ಸಿಎಸ್‌ಕೆ, ಜಿಿಎಲ್, ಮುಂಬೈ | 161 | 80 |
| ಡೇವಿಿಡ್ ಮಿಲ್ಲರ್ | ಜಿಟಿ, ಪಂಜಾಬ್, ಆರ್‌ಆರ್ | 130 | 75 |
| ಅಕ್ಷರ್ ಪಟೇಲ್ | ಡೆಲ್ಲಿ, ಪಂಜಾಬ್ | 150 | 72 |
| ಅಜಿಂಕ್ಯ ರಹಾನೆ | ಸಿಎಸ್‌ಕೆ, ಡಿಸಿ, ಕೆಕೆಆರ್, ಮುಂಬೈ, ಪುಣೆ, ಆರ್‌ಆರ್ | 185 | 70 |
| ಹಾರ್ದಿಕ್ ಪಾಂಡ್ಯ | ಗುಜರಾತ್, ಮುಂಬೈ | 137 | 69 |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications