Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇರಾನಿ ಕಪ್: ಸರ್ಫರಾಜ್ ಭರ್ಜರಿ ಶತಕ: ಸೌರಾಷ್ಟ್ರ ವಿರುದ್ಧ ರೆಸ್ಟ್ ಆಫ್ ಇಂಡಿಯಾಗೆ ಭರ್ಜರಿ ಮುನ್ನಡೆ

Irani Cup 2022: Rest Of India vs Saurashtra, Day 1 Highlights Rajkot

ಇರಾನಿ ಕಪ್‌ನಲ್ಲಿ ಸೌರಾಷ್ಟ್ರ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳು ಮುಖಾಮುಖಿಯಾಗಿದ್ದು ಇಂದು ಮೊದಲ ದಿನದಾಟ ನಡೆದಿದೆ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿರುವ ಸೌರಾಷ್ಟ್ರ ಹೀನಾಯ ಪ್ರದರ್ಶನ ನೀಡಿದ್ದು ಕನಿಷ್ಠ ಮೊತ್ತಕ್ಕೆ ವಿಕೆಟ್ ಕಳೆದುಕೊಂಡಿದೆ. ನಂತರ ಬ್ಯಾಟಿಂಗ್ ನಡೆಸಿರುವ ರೆಸ್ಟ್ ಆಫ್ ಇಂಡಿಯಾ ತಂಡ ಯುವ ಆಟಗಾರ ಸರ್ಫರಾಜ್ ಖಾನ್ ಅವರ ಅದ್ಭುತ ಪ್ರದರ್ಶನದಿಂದಾಗಿ ಅತ್ಯುತ್ತಮ ಸ್ಥಿತಿಯಲ್ಲಿದೆ.

ಟಾಸ್ ಗೆದ್ದ ಹನುಮ ವಿಹಾರಿ ನೇತೃತ್ವದ ರೆಸ್ಟ್ ಆಫ್ ಇಂಡಿಯಾ ತಂಡ ಮೊದಲಿಗೆ ಸೌರಾಷ್ಟ್ರ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ರೆಸ್ಟ್ ಆಫ್ ಇಂಡಿಯಾ ತಂಡ ಸೌರಾಷ್ಟ್ರಕ್ಕೆ ಆಘಾತದ ಮೇಲೆ ಆಘಾತ ನೀಡಿತು. ತಂಡದ ಮೊತ್ತಡ 5 ರನ್‌ಗಳಾಗುವಷ್ಟರಲ್ಲಿಯೇ ತಂಡ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರವೂ ಈ ಕುಸಿತ ಮುಂದುವರಿಯುತ್ತಲೇ ಸಾಗಿತು. ಅಂತಿಮವಾಗಿ ಸೌರಾಷ್ಟ್ರ ತಂಡ 98 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ರೆಸ್ಟ್ ಆಫ್ ಇಂಡಿಯಾ ಪರವಾಗಿ ಮುಕೇಶ್ ಕುಮಾರ್ 4 ವಿಕೆಟ್ ಪಡದು ಮಿಂಚಿದರೆ ಕುಲ್ದೀಪ್ ಸೇನ್ ಹಾಗೂ ಉಮ್ರಾನ್ ಮಲಿಕ್ ತಲಾ ಮೂರು ವಿಕೆಟ್ ಸಂಪಾದಿಸಿದರು.

ನಂತರ ಬ್ಯಾಟಿಂಗ್ ಆರಂಭಿಸಿದ ರೆಸ್ಟ್ ಆಫ್ ಇಂಡಿಯಾದ ಆರಂಭ ಕೂಡ ಕಳಪೆಯಾಗಿತ್ತು. ಅಗ್ ಮೂವರು ಆಟಗಾರರನ್ನು 18 ರನ್‌ಗಳಿಸುವಷ್ಟರಲ್ಲಿ ತಂಡ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ನಾಯಕ ಹನುಮವಿಹಾರಿ ಹಾಗೂ ಸರ್ಫರಾಜ್ ಖಾನ್ ಅದ್ಭುತ ಜೊತೆಯಾಟ ನೀಡಿದ್ದಾರೆ. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 187ರನ್‌ಗಳ ಜೊತೆಯಾಟವನ್ನು ನೀಡಿದ್ದು ಎರಡನೇ ವಿಕೆಟ್‌ಗೆ ಕ್ರೀಸ್ ಕಾಯ್ದಿರಿಸಿದ್ದಾರೆ. ಸರ್ಫರಾಜ್ ಖಾನ್ ಅಜೇಯ 125 ರನ್‌ಗಳಿಸಿದ್ದು ಹನುಮ ವಿಹಾರಿ ಅಜೇಯ 62 ರನ್‌ಗಳಿಸಿದ್ದಾರೆ. ಈ ಮೂಲಕ ಮೊದಲ ದಿನದಾಟದಲ್ಲಿಯೇ ರೆಸ್ಟ್ ಆಫ್ ಇಂಡಿಯಾ 107 ರನ್‌ಗಳ ಮುನ್ನಡೆ ಸಾಧಿಸಿದೆ.

ಸೌರಾಷ್ಟ್ರ ಪ್ಲೇಯಿಂಗ್ XI: ಹಾರ್ವಿಕ್ ದೇಸಾಯಿ, ಸ್ನೆಲ್ ಪಟೇಲ್ (ವಿಕೆಟ್ ಕೀಪರ್), ಚೇತೇಶ್ವರ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾಡ, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಜಯದೇವ್ ಉನದ್ಕತ್ (ನಾಯಕ), ಧರ್ಮೇಂದ್ರಸಿನ್ಹ್ ಜಡೇಜಾ, ಪಾರ್ಥ್ ಭುತ್, ಚೇತನ್ ಸಕರಿಯಾ
ಬೆಂಚ್: ಕಮಲೇಶ್ ಮಕ್ವಾನಾ, ಕುಶಾಂಗ್ ಪಟೇಲ್, ಸಮರ್ಥ ವ್ಯಾಸ್, ಕಿಶನ್ ಪರ್ಮಾರ್, ವಿಶ್ವರಾಜ್ ಜಡೇಜಾ

ರೆಸ್ಟ್ ಆಫ್ ಇಂಡಿಯಾ ಪ್ಲೇಯಿಂಗ್ XI: ಮಯಾಂಕ್ ಅಗರ್ವಾಲ್, ಅಭಿಮನ್ಯು ಈಶ್ವರನ್, ಯಶ್ ಧುಲ್, ಹನುಮ ವಿಹಾರಿ (ನಾಯಕ), ಸರ್ಫರಾಜ್ ಖಾನ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಜಯಂತ್ ಯಾದವ್, ಸೌರಭ್ ಕುಮಾರ್, ಮುಖೇಶ್ ಕುಮಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್
ಬೆಂಚ್: ಪ್ರಿಯಾಂಕ್ ಪಾಂಚಾಲ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಉಪೇಂದ್ರ ಯಾದವ್, ಅರ್ಜನ್ ನಾಗ್ವಾಸ್ವಾಲಾ, ಯಶಸ್ವಿ ಜೈಸ್ವಾಲ್

Story first published: Saturday, October 1, 2022, 18:25 [IST]
Other articles published on Oct 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+