
ಆರಂಭದಿಂದಲೇ ರೆಸ್ಟ್ ಆಫ್ ಇಂಡಿಯಾ ಹಿಡಿತದಲ್ಲಿ ಪಂದ್ಯ
ಆದರೆ ಇತ್ತ ರೆಸ್ಟ್ ಆಫ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಗಳಿಸುವ ಮೂಲಕ ಪಂದ್ಯದ ಮೇಲೆ ಆರಂಭದಿಂದಲೇ ಹಿಡಿತವನ್ನು ಸಾಧಿಸಲುವಲ್ಲಿ ಯಶಸ್ವಿಯಾಗಿತ್ತು. ಸರ್ಫರಾಜ್ ಖಾನ್ ಅವರ ಅಮೋಘ ಶತಕ ಹಾಗೂ ನಾಯಕ ಹನುಮ ವಿಹಾರಿಯವರ 82 ರನ್‌ಗಳ ಕೊಡುಗೆಯ ಕಾರಣದಿಂದಾಗಿ 374 ರನ್‌ಗಳನ್ನು ಗಳಿಸಿ ಉತ್ತಮ ಮೊತ್ತಡ ಮುನ್ನಡೆ ಸಾಧಿಸಲುವಲ್ಲಿ ಯಶಸ್ವಿಯಾಗಿತ್ತು.

ಕೆಳ ಕ್ರಮಾಂಕದ ಭರ್ಜರಿ ಬ್ಯಾಟಿಂಗ್
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಯಶಸ್ವಿಯಾಗಿದೆ. ಅಗ್ರ ಕ್ರಮಾಂಕ ಮತ್ತೊಮ್ಮೆ ವೈಫಲ್ಯ ಅನುಭವಿಸಿದರೂ ಕೆಳ ಕ್ರಮಾಂಕದ ಆಟಗಾರರಿಂದ ಅಮೋಘ ಹೋರಾಟ ಬಂದಿದೆ. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶೆಲ್ಡನ್ ಜಾಕ್ಸನ್, ಅರ್ಪಿತ್ ವಸವಡ, ಪ್ರೇರಕ್ ಮಂಕಡ್ ಹಾಗೂ ನಾಯಕ ಜಯದೇವ್ ಉನಾದ್ಕಟ್ ಅವರಿಂದ ಅದ್ಭುತ ಅರ್ಧ ಶತಕಗಳು ಬಂದಿದ್ದು ತಂಡ ಹೋರಾಟವನ್ನು ಚಾಲ್ತಿಯಲ್ಲಿಟ್ಟಿದೆ. ನಾಲ್ಕನೇ ದಿನದಾಟದಲ್ಲಿ ಎಷ್ಟು ಮೊತ್ತವನ್ನು ಗುರಿಯಾಗಿ ನೀಡಿ ನಂತರ ಅದನ್ನು ಯಾವ ರೀತಿಯಾಗಿ ರಕ್ಷಣೆ ಮಾಡಿಕೊಳ್ಳಲಿದೆ ಎಂಬುದು ಈಗ ಉಳಿದಿರುವ ಕುತೂಹಲವಾಗಿದೆ.

ಇತ್ತಂಡಗಳ ಆಡುವ ಬಳಗ
ಸೌರಾಷ್ಟ್ರ ಪ್ಲೇಯಿಂಗ್ XI: ಹಾರ್ವಿಕ್ ದೇಸಾಯಿ, ಸ್ನೆಲ್ ಪಟೇಲ್ (ವಿಕೆಟ್ ಕೀಪರ್), ಚೇತೇಶ್ವರ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾಡ, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಜಯದೇವ್ ಉನದ್ಕತ್ (ನಾಯಕ), ಧರ್ಮೇಂದ್ರಸಿನ್ಹ್ ಜಡೇಜಾ, ಪಾರ್ಥ್ ಭುತ್, ಚೇತನ್ ಸಕರಿಯಾ
ಬೆಂಚ್: ಕಮಲೇಶ್ ಮಕ್ವಾನಾ, ಕುಶಾಂಗ್ ಪಟೇಲ್, ಸಮರ್ಥ ವ್ಯಾಸ್, ಕಿಶನ್ ಪರ್ಮಾರ್, ವಿಶ್ವರಾಜ್ ಜಡೇಜಾ
ರೆಸ್ಟ್ ಆಫ್ ಇಂಡಿಯಾ ಪ್ಲೇಯಿಂಗ್ XI: ಮಯಾಂಕ್ ಅಗರ್ವಾಲ್, ಅಭಿಮನ್ಯು ಈಶ್ವರನ್, ಯಶ್ ಧುಲ್, ಹನುಮ ವಿಹಾರಿ (ನಾಯಕ), ಸರ್ಫರಾಜ್ ಖಾನ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಜಯಂತ್ ಯಾದವ್, ಸೌರಭ್ ಕುಮಾರ್, ಮುಖೇಶ್ ಕುಮಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್
ಬೆಂಚ್: ಪ್ರಿಯಾಂಕ್ ಪಾಂಚಾಲ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಉಪೇಂದ್ರ ಯಾದವ್, ಅರ್ಜನ್ ನಾಗ್ವಾಸ್ವಾಲಾ, ಯಶಸ್ವಿ ಜೈಸ್ವಾಲ್


Click it and Unblock the Notifications












