ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಇಂದಿನಿಂದ (ಮಂಗಳವಾರ) ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ಮತ್ತು ರಣಜಿ ಚಾಂಪಿಯನ್ ಮುಂಬೈ ನಡುವೆ ಐತಿಹಾಸಿಕ ಪಂದ್ಯ ಆರಂಭವಾಗಿದೆ.
ಇರಾನ್ ಕಪ್ ಪಂದ್ಯದಲ್ಲಿ ಟಾಸ್ ಗೆದ್ದ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಅಜಿಂಕ್ಯಾ ರಹಾನೆ ಅವರು ಮುನ್ನಡೆಸುತ್ತಿರುವ ರಣಜಿ ಚಾಂಪಿಯನ್ ಮುಂಬೈ ತಂಡ ಬ್ಯಾಟಿಂಗ್ ಆರಂಭಿಸಿದೆ. ಔಟ್ ಫೀಲ್ಡ್ ಒದ್ದೆಯಾಗಿದ್ದರಿಂದ ಟಾಸ್ ತಡವಾಗಿದೆ.

ಲಕ್ನೋದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಇರಾನಿ ಕಪ್ ಪಂದ್ಯದಲ್ಲಿ ಸ್ಟಾರ್ ಕ್ರಿಕೆಟಿಗರಾದ ಪೃಥ್ವಿ ಶಾ, ಸರ್ಫರಾಜ್ ಖಾನ್, ಶ್ರೇಯಶ್ ಅಯ್ಯರ್ ಮುಂಬೈ ತಂಡದ ಪರ ಆಡುತ್ತಿದ್ದಾರೆ. ಧ್ರುವ ಜುರೆಲ್, ಇಶಾನ್ ಕಿಶನ್ ರೆಸ್ಟ್ ಆಫ್ ಇಂಡಿಯಾ ತಂಡದಿಂದ ಕಣಕ್ಕೀಳಿಯಲಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿರುವ ಸ್ಟಾರ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಕೂಡ ಈ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರಳಿದ್ದಾರೆ. ಈ ಪಂದ್ಯದ ಪ್ರದರ್ಶನದ ಮೇಲೆ ಅವರ ಸ್ಥಾನ ಟೀಮ್ ಇಂಡಿಯಾದಲ್ಲಿ ನಿರ್ಧಾರವಾಗಲಿದೆ.
ಸೋಮವಾರ ಇರಾನಿ ಕಪ್ ಪಂದ್ಯಕ್ಕಾಗಿ ಬಾಂಗ್ಲಾದೇಶ ವಿರುದ್ದದ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಸರ್ಫರಾಜ್ ಖಾನ್, ಧ್ರುವ ಜುರೆಲ್ ಮತ್ತು ಯಶ್ ದಯಾಳ್ ಅವರನ್ನು ಬಿಸಿಸಿಐ ಬಿಡುಗಡೆ ಮಾಡಿರುವ ಬಗ್ಗೆ ಮಾಹಿತಿ ನೀಡಿತ್ತು. ಮುಂಬೈ 30 ಬಾರಿ ಇರಾನಿ ಕಪ್ ಗೆದ್ದಿದ್ದರೆ, ರೆಸ್ಟ್ ಆಫ್ ಇಂಡಿಯಾ 14 ಬಾರಿ ಪ್ರಶಸ್ತಿಯನ್ನು ವಶಪಡಿಸಿಕೊಂಡಿದೆ.
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ಆರಂಭವಾಗಿರುವ ಮುಂಬೈ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವಿನ ಇರಾನಿ ಕಪ್ ಪಂದ್ಯವೂ ಅಕ್ಟೋಬರ್ 1 ರಿಂದ 5 ರವರೆಗೆ ಉಭಯ ತಂಡಗಳ ನಡುವೆ ಮೆಗಾ ಫೈಟ್ ನಡೆಯಲಿದೆ. ಪ್ರತಿದಿನ ಬೆಳಗ್ಗೆ 9:30 ಗಂಟೆಗೆ ಆರಂಭವಾಗಲಿದ್ದು, ಭಾರತದಲ್ಲಿ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ನೇರ ಪ್ರಸಾರವನ್ನು ಸ್ಪೋರ್ಟ್ಸ್ 18 ನೆಟ್‌ವರ್ಕ್ ಚಾನೆಲ್‌ಗಳಲ್ಲಿ ವಿಕ್ಷೀಸಬಹುದಾಗಿದೆ.
ಮುಂಬೈ: ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ(ನಾಯಕ), ಸರ್ಫರಾಜ್ ಖಾನ್, ಹಾರ್ದಿಕ್ ತಮೋರ್(ವಿಕೆಟ್ ಕೀಪರ್), ಸಿದ್ಧೇಶ್ ಲಾಡ್, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ರಾಯ್ಸ್ಟನ್ ಡಯಾಸ್, ಮೋಹಿತ್ ಅವಸ್ತಿ.
ರೆಸ್ಟ್ ಆಫ್ ಇಂಡಿಯಾ: ಋತುರಾಜ್ ಗಾಯಕ್ವಾಡ್ (ನಾಯಕ), ದೇವದತ್ ಪಡಿಕ್ಕಲ್, ಅಭಿಮನ್ಯು ಈಶ್ವರನ್, ಸಾಯಿ ಸುದರ್ಶನ್, ರಿಕಿ ಭುಯಿ, ಧ್ರುವ ಜುರೆಲ್(ವಿಕೆಟ್ ಕೀಪರ್), ಮಾನವ್ ಸುತಾರ್, ರಾಹುಲ್ ಚಹರ್, ಯಶ್ ದಯಾಳ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.