Irani Cup 2023: ಕುಸಿದ ಮಧ್ಯಪ್ರದೇಶಕ್ಕೆ ಯಶ್ ದುಬೆ, ಹರ್ಷ್ ಗಾವ್ಲಿ ಆಸರೆ

ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ಮೊದಲ ಇನ್ನಿಂಗ್ಸ್‌ನಲ್ಲಿ 484 ರನ್‌ಗಳಿಗೆ ಆಲೌಟ್ ಆಗಿದೆ. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದೆ.
ಮೊದಲನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 381 ರನ್ ಗಳಿಸಿದ್ದ ಶೇಷ ಭಾರತ ತಂಡ ಎರಡನೇ ದಿನ ಬೇಗನೆ ವಿಕೆಟ್‌ಗಳನ್ನು ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ ದ್ವಿಶತಕ (213), ಅಭಿಮನ್ಯು ಈಶ್ವರನ್ (154) ಶತಕ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ದೊಡ್ಡ ಇನ್ನಿಂಗ್ಸ್ ಆಡಲಿಲ್ಲ.
ಯಶ್ ದುಲ್ ಮಾತ್ರ 55 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಬಾಬಾ ಇಂದ್ರಜಿತ್ 19, ಉಪೇಂದ್ರ ಯಾದವ್ 14 ರನ್ ಗಳಿಸಿದರು. ಸೌರಭ್ ಕುಮಾರ್, ಮುಖೇಶ್ ಕುಮಾರ್, ಅತೀತ್ ಶೇಠ್ ಶೂನ್ಯಕ್ಕೆ ಔಟಾದರು.
ನಂತರ ಬ್ಯಾಟಿಂಗ್ ಆರಂಭಿಸಿದ ಮಧ್ಯಪ್ರದೇಶಕ್ಕೆ ಆರಂಭಿಕ ಆಘಾತ ಎದುರಾಯಿತು. ಹಿಮಾಂಶು ಮಂತ್ರಿ 1 ರನ್ ಗಳಿಸಿ ಔಟಾದರು, ಅರ್ಹಮ್ ಅಕ್ವಿಲ್ ಶೂನ್ಯಕ್ಕೆ ಔಟಾದರು, ಶುಭಂ ಶರ್ಮಾ 4 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. 15 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಯಶ್ ದುಬೆ, ಹರ್ಷ್ ಗಾವ್ಲಿ ಆಸರೆ
ನಂತರ ಬ್ಯಾಟಿಂಗ್‌ಗೆ ಬಂದ ಹರ್ಷ್ ಗಾವ್ಲಿ ಮತ್ತು ಯಶ್ ದುಬೆ ಅತ್ಯುತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 4ನೇ ವಿಕೆಟ್‌ಗೆ 98 ರನ್ ಗಳಿಸುವ ಮೂಲಕ ಆಸರೆಯಾದರು.
ಹರ್ಷ್ ಗಾವ್ಲಿ ಅಜೇಯ 47 ರನ್ ಗಳಿಸಿದರೆ, ಯಶ್ ದುಬೆ ಅಜೇಯ 53 ರನ್ ಗಳಿಸುವ ಮೂಲಕ ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ನವದೀಪ್ ಸೈನಿ 2 ವಿಕೆಟ್ ಪಡೆದರೆ, ಮುಕೇಶ್ ಕುಮಾರ್ 1 ವಿಕೆಟ್ ಪಡೆದುಕೊಂಡರು.

ಉಭಯ ತಂಡಗಳ ಆಡುವ ಬಳಗ
ಮಧ್ಯಪ್ರದೇಶ: ಹಿಮಾಂಶು ಮಂತ್ರಿ (ನಾಯಕ), ಹರ್ಷ್ ಗಾವ್ಲಿ, ಅಮನ್ ಸೋಲಂಕಿ, ಶುಭಂ ಎಸ್ ಶರ್ಮಾ, ಅರ್ಹಮ್ ಅಕ್ವಿಲ್, ಯಶ್ ದುಬೆ, ಸರನ್ಶ್ ಜೈನ್, ಅಂಕಿತ್ ಕುಶ್ವಾ, ಕುಮಾರ್ ಕಾರ್ತಿಕೇಯ, ಅನುಭವ್ ಅಗರ್ವಾಲ್, ಅವೇಶ್ ಖಾನ್.
ಶೇಷ ಭಾರತ : ಮಯಾಂಕ್ ಅಗರ್ವಾಲ್ (ನಾಯಕ), ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಬಾಬಾ ಇಂದ್ರಜಿತ್, ಮುಖೇಶ್ ಕುಮಾರ್, ಉಪೇಂದ್ರ ಯಾದವ್, ಪುಲ್ಕಿತ್ ನಾರಂಗ್, ಸೌರಭ್ ಕುಮಾರ್, ಅತಿತ್ ಶೇತ್, ನವದೀಪ್ ಸೈನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications