Ban vs Ire: ಶಕೀಬ್ ಮತ್ತೊಂದು ಆಲ್‌ರೌಂಡರ್ ಪ್ರದರ್ಶನ: ಐರ್ಲೆಂಡ್ ವಿರುದ್ಧ ಸರಣಿ ಗೆದ್ದ ಬಾಂಗ್ಲಾ
ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಐರ್ಲೆಂಡ್ ತಂಡ ಏಕದಿನ ಸರಣಿಯ ಬಳಿಕ ಟಿ20 ಸರಣಿಯಲ್ಲಿಯೂ ಹಿನ್ನಡೆ ಅನುಭವಿಸಿದೆ. ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡ ತವರಿನಲ್ಲಿ ತಾನೆಷ್ಟು ಬಲಿಷ್ಠ ಎಂಬುದನ್ನು ಮತ್ತೆ ಸಾರಿದೆ. ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿದ್ದು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ಬಾಂಗ್ಲಾದೇಶ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಸ್ಪೋಟಕ ಪ್ರದರ್ಶನ ನೀಡಿತು. ಮಳೆಯಿಂದಾಗಿ 17 ಓವರ್‌ಗಳಿಗೆ ಕಡಿತವಾದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಬರೊಬ್ಬರಿ 202-3 ರನ್‌ಗಳನ್ನು ಗಳಿಸಿತು. ಲಿಟನ್ ದಾಸ್ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸಿದ್ದು 41 ಎಸೆತಗಳಲ್ಲಿ 83 ರನ್‌ಗಳ ಕೊಡುಗೆ ನೀಡಿದರು. ರೋನಿ ತಾಲೀಕ್‌ದಾರ್ 44 ರನ್ ಶಕೀಬ್ ಅಲ್ ಹಸನ್ 38 ರನ್‌ಗಳ ಕೊಡುಗೆ ನೀಡಿ ಮಿಂಚಿದರು.

ಬಾಂಗ್ಲಾದೇಶ ತಂಡ ನೀಡಿದ ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಆರಂಭದಿಂದಲೇ ಮುಗ್ಗರಿಸಲು ಆರಂಭಿಸಿತ್ತು. ತಂಡದ ಬಹುತೇಕ ಎಲ್ಲಾ ಆಟಗಾರರು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾಗಿದ್ದು ಕೆಳ ಕ್ರಮಾಂಕದ ಆಟಗಾರ ಕರ್ಟಿಸ್ ಕ್ಯಾಂಫರ್ ಮಾತ್ರ 30 ಎಸೆತಗಳಲ್ಲಿ 50 ರನ್‌ಗಳಿಸಿ ತಂಡಕ್ಕೆ ಒಂದು ಹಂತದಲ್ಲಿ ನೆರವಾದರು. ಆದರೆ ಇದು ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಕಾಗಲಿಲ್ಲ. ಅಂತಿಮವಾಗಿ ನಿಗದಿತ 17 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 125 ರನ್‌ಗಳಿಸಿದ ಐರ್ಲೆಂಡ್ ತಂಡ 77 ರನ್‌ಗಳ ಅಂತರದ ಭಾರಿ ಸೋಲು ಕಂಡಿದೆ.
ಇನ್ನು ಬಾಂಗ್ಲಾದೇಶ ತಂಡದ ಪರವಾಗಿ ಮತ್ತೊಮ್ಮೆ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದು ನಾಯಕ ಶಕೀಬ್ ಅಲ್ ಹಸನ್. ಮೊದಲಿಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದ ಶಕೀಬ್ ಬೌಲಿಂಗ್‌ನಲ್ಲಿ ಐದು ವಿಕೆಟ್ ಕಿತ್ತು ಅಬ್ಬರಿಸಿದರು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇನ್ನು ಟಸ್ಕಿನ್ ಅಹ್ಮದ್ ಕೂಡ ಮೂರು ವಿಕೆಟ್ ಸಂಪಾದಿಸಿದರು.
ಇನ್ನು ಅದಕ್ಕೂ ಮುನ್ನ ಬಾಂಗ್ಲಾದೇಶ ಹಾಗೂ ಐರ್ಲೆಂಡ್ ತಂಡಗಳು ಏಕದಿನ ಸರಣಿಯಲ್ಲಿಯೂ ಪರಸ್ಪರ ಕಾದಾಟ ನಡೆಸಿದೆ. ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ತಂಡ 2-0 ಅಂತರದಿಂದ ಸರಣಿ ವಶಕ್ಕೆ ಪಡೆದುಕೊಂಡಿತ್ತು. ಒಂದು ಪಂದ್ಯ ಮಳೆಗೆ ಆಹುತಿಯಾಗಿತ್ತು.
ಬಾಂಗ್ಲಾದೇಶ ಆಡುವ ಬಳಗ: ಲಿಟ್ಟನ್ ದಾಸ್ (ವಿಕೆಟ್ ಕೀಪರ್), ರೋನಿ ತಾಲುಕ್ದಾರ್, ನಜ್ಮುಲ್ ಹೊಸೈನ್ ಶಾಂಟೋ, ಶಮೀಮ್ ಹೊಸೈನ್, ತೌಹಿದ್ ಹೃದಯ್, ಶಕೀಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್
ಬೆಂಚ್: ಶೋರಿಫುಲ್ ಇಸ್ಲಾಂ, ರಿಶಾದ್ ಹೊಸೈನ್, ಜಾಕರ್ ಅಲಿ
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್ (ನಾಯಕ), ರಾಸ್ ಅಡೈರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಕರ್ಟಿಸ್ ಕ್ಯಾಂಫರ್,
ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಗ್ರಹಾಂ ಹ್ಯೂಮ್, ಬೆಂಜಮಿನ್ ವೈಟ್
ಬೆಂಚ್: ಕ್ರೇಗ್ ಯಂಗ್, ಮ್ಯಾಥ್ಯೂ ಹಂಫ್ರೀಸ್, ಥಾಮಸ್ ಮೇಯಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications