For Quick Alerts
ALLOW NOTIFICATIONS  
For Daily Alerts
 

ರಿಂಕು ಸಿಂಗ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಯುವ ಆಟಗಾರ ಹೇಳಿದ್ದಿಷ್ಟು!

ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ವಿಶೇಷ ಪ್ರದರ್ಶನ ನೀಡಿ ಗಮನಸೆಳೆದಿದ್ದು ಯುವ ಆಟಗಾರ ರಿಂಕು ಸಿಂಗ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿಯೇ ರಿಂಕು ಸಿಂಗ್ ಮ್ಯಾಚ್ ವಿನ್ನಿಂಗ್ಪ್ರದರ್ಶನ ನೀಡಿದ್ದು ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವ ಕೂಡ ಪಡೆದುಕೊಂಡಿದ್ದಾರೆ.

ಈ ಪಂದ್ಯದಲ್ಲಿ 13ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ರಿಂಕು ಸಿಂಗ್ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ್ದರು. ಅದರಲ್ಲೂ ಮೊದಲ 15 ಎಸೆತಗಳಲ್ಲಿ 15 ರನ್‌ಗಳನ್ನು ಮಾತ್ರವೇ ಗಳಿಸಿದ್ದರು. ಆದರೆ ಇನ್ನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ರಿಂಕು ಸಿಂಗ್ ಅಬ್ಬರದ ಪ್ರದರ್ಶನ ನೀಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ಈ ಪಂದ್ಯದಲ್ಲಿ ರಿಂಕು 21 ಎಸೆತಗಳಲ್ಲಿ 38 ರನ್ ಬಾರಿಸಿ ಗಮನಸೆಳೆದರು. ಹೀಗಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 185/5 ರನ್‌ಗಳಿಸಲು ಶಕ್ತವಾಗಿತ್ತು.

IRE vs IND: Rinku Singh reaction after MOM performance in 2nd T20I against Ireland

ಈ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ರಿಂಕು ಸಿಂಗ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಪದಾರ್ಪಣಾ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ದೊರೆಯದ ಕಾರಣ ಈ ಪಂದ್ಯದಲ್ಲಿ ಬ್ಯಾಟಿಂಗ್‌ನ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ.

"ಬಹಳ ಸಂತಸವಾಗುತ್ತಿದೆ. ಇದು ನನ್ನ ಎರಡನೇ ಪಂದ್ಯ. ಇಲ್ಲಿ ಬ್ಯಾಟಿಂಗ್ ನಡೆಸಲು ನಾನು ಕಾತರದಿಂದ ಕಾಯುತ್ತಿದ್ದೆ. ಐಪಿಎಲ್‌ನಲ್ಲಿ ನಾನು ಏನು ಮಾಡಿದ್ದೆನೋ ಅದನ್ನೇ ಇಲ್ಲಿಯೂ ಮಾಡಲು ಬಯಸಿದ್ದೆ. ಖಂಡಿತಾ ನಾನು ನನ್ನ ನಾಯಕನ ಮಾತನ್ನು ಕೇಳುತ್ತೇನೆ" ಎಂದು ಹೇಳಿದ್ದಾರೆ ಟೀಮ್ ಇಂಡಿಯಾದ ಯುವ ಆಟಗಾರ ರಿಂಕು ಸಿಂಗ್.

"ಬಹಳ ಖುಷಿಯಿದೆ. ಕಳೆದ 10 ವರ್ಷಗಳಿಂದ ನಾನು ಕಠಿಣವಾದ ಪರಿಶ್ರಮಪಡುತ್ತಿದ್ದೇನೆ. ಇಂಥಾ ಪ್ರದರ್ಶನದಿಂದಾಗಿ ನಾನು ಪಟ್ಟ ಪ್ರರಿಶ್ರಮಕ್ಕೆ ಬೆಲೆ ಬಂದಿದೆ. ಇಲ್ಲಿ ನಾನು ಮೊದಲ ಬಾರಿಗೆ ಬ್ಯಾಟಿಂಗ್ ನಡೆಸಿದ್ದೇನೆ.ಇದಕ್ಕಿಂತ ಸಂತಸದ ಕ್ಷಣವಿಲ್ಲ" ಎಂದಿದ್ದಾರೆ ರಿಂಕು ಸಿಂಗ್.

ಇನ್ನು ಈ ಪಂದ್ಯದಲ್ಲಿ ಭಾರತ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರವಾಗಿ ಋತುರಾಜ್ ಗಾಯಕ್ವಾಡ್ 58 ರನ್‌ಗಳ ಕೊಡುಗೆ ನೀಡಿದರೆ ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ 40 ರನ್‌ಗಳ ಕೊಡುಗೆ ನೀಡಿ ಗಮನಸೆಳೆದರು. ರಿಂಕು ಸಿಂಗ್ 38 ರನ್ ಹಾಗೂ ಶಿವಂ ದುಬೆ 22 ರನ್‌ಗಳ ಕೊಡುಗೆ ನೀಡಿದ್ದಾರೆ.

ನಂತರ ಬೌಲಿಂಗ್‌ನಲ್ಲಿಯೂ ಟೀಮ್ ಇಂಡಿಯಾ ಬೌಲರ್‌ಗಳ ಪ್ರದರ್ಶನ ಗಮನಸೆಳೆದಿದೆ. ಐರ್ಲೆಂಡ್ ಪರವಾಗಿ ಅಂಡ್ರ್ಯೂ ಬಾಲ್ಬರ್ನೈ ಹೊರತುಪಡಿಸಿದರೆ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಬಲ್ಬರ್ನೈ 51 ಎಸೆತಗಳಲ್ಲಿ 72 ರನ್‌ಗಳನ್ನು ಬಾರಿಸಿ ಕೊನೆಯ ಹಂತದವರೆಗೂ ಸಾಕಷ್ಟು ಹೋರಾಟ ನಡೆಸಿದರು. ಆದರೆ ಅವರಿಗೆ ಮತ್ತೊಂದು ತುದಿಯಲ್ಲಿ ಅಗತ್ಯ ನೇರವು ದೊರೆಯಲಿಲ್ಲ. ಹೀಗಾಗಿ ಐರ್ಲೆಂಡ್ ತಂಡ 152 ರನ್‌ಗಳಿಗೆ ಆಲೌಟ್ ಆಗಿತ್ತು.

Story first published: Monday, August 21, 2023, 8:55 [IST]
Other articles published on Aug 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+