T20 World Cup 2024: ಟಿ20 ವಿಶ್ವಕಪ್‌ಗೆ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಐರ್ಲೆಂಡ್
ಇದೇ ಜೂನ್ 1ರಿಂದ ಜೂನ್ 29ರವರೆಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ-ಆತಿಥ್ಯದಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಭಾರತ ಸೇರಿದಂತೆ ವಿಶ್ವದಾದ್ಯಂತದ ಕ್ರಿಕೆಟ್ ಪ್ರೇಮಿಗಳು ಮತ್ತೊಂದು ಕ್ರಿಕೆಟ್ ಹಬ್ಬಕ್ಕೆ ಕಾತರರಾಗಿದ್ದಾರೆ.
ಇದೀಗ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಆರಂಭಿಕ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ನಾಯಕತ್ವದ 15 ಸದಸ್ಯರ ತಂಡವನ್ನು ಐಲೆಂಡ್ ಮಂಗಳವಾರ, ಮೇ 7ರಂದು ಪ್ರಕಟಿಸಿದೆ.

ಐರ್ಲೆಂಡ್ ತನ್ನ ಮುಂಬರುವ ಕ್ರಿಕೆಟ್ ಪಂದ್ಯಾವಳಿಗಾಗಿ ಮೂರು ಟಿ20 ತಂಡಗಳನ್ನು ಪ್ರಕಟಿಸಿದೆ. ಇವುಗಳಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿ, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಒಳಗೊಂಡ ತ್ರಿಕೋನ ಸರಣಿ ಮತ್ತು 2024ರ ಟಿ20 ವಿಶ್ವಕಪ್ ಸೇರಿವೆ.
ಐರ್ಲೆಂಡ್‌ನ 14 ಆಟಗಾರರು ಎಲ್ಲಾ ಮೂರು ಟಿ20 ತಂಡಗಳಲ್ಲಿ ಕಾಣಿಸಿಕೊಂಡಿದ್ದರೆ, ವೇಗಿ ಜೋಶ್ವಾ ಲಿಟಲ್ ಟಿ20 ವಿಶ್ವಕಪ್ ತಂಡಕ್ಕೆ ಮಾತ್ರ ಸೇರ್ಪಡೆಯಾಗಿದ್ದಾರೆ. ಭಾರತ, ಪಾಕಿಸ್ತಾನ, ಯುಎಸ್ಎ ಮತ್ತು ಕೆನಡಾದೊಂದಿಗೆ ಟಿ20 ವಿಶ್ವಕಪ್ ಪಂದ್ಯಾವಳಿಯ ಎ ಗುಂಪಿನಲ್ಲಿ ಐರ್ಲೆಂಡ್ ಸ್ಥಾನ ಪಡೆದಿದೆ.
ಐರ್ಲೆಂಡ್ ಟಿ20 ತಂಡವು ಅನುಭವಿ ಹೆಸರುಗಳಾದ ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ ಮತ್ತು ಜಾರ್ಜ್ ಡಾಕ್ರೆಲ್ ಅವರನ್ನು ಒಳಗೊಂಡಿದೆ. ಅಲ್ಲದೆ ಬ್ಯಾಟಿಂಗ್ ವಿಭಾಗವು ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ರಾಸ್ ಅಡೈರ್ ಮತ್ತು ಕರ್ಟಿಸ್ ಕ್ಯಾಂಫರ್ ಅವರಿಂದ ಮತ್ತಷ್ಟು ಬಲಗೊಂಡಿದೆ.
ಎಡಗೈ ವೇಗಿ ಜೋಶ್ವಾ ಲಿಟಲ್ ಜೊತೆಗೆ ಮಾರ್ಕ್ ಅಡೈರ್ ವೇಗದ ದಾಳಿಯನ್ನು ಮುನ್ನಡೆಸಲಿದ್ದರೆ, ಗ್ರಹಾಂ ಹ್ಯೂಮ್, ಕರ್ಟಿಸ್ ಕ್ಯಾಂಫರ್, ಬ್ಯಾರಿ ಮೆಕಾರ್ಥಿ ಮತ್ತು ಕ್ರೇಗ್ ಯಂಗ್ ಇತರ ವೇಗದ ಬೌಲಿಂಗ್ ಆಯ್ಕೆಗಳಾಗಿವೆ. ಪ್ರಮುಖ ಲೆಗ್ ಸ್ಪಿನ್ನರ್ ಬೆನ್ ವೈಟ್ ಮತ್ತು ಆಲ್‌ರೌಂಡರ್ ಗರೆಥ್ ಡೆಲಾನಿ ಟಿ20 ವಿಶ್ವಕಪ್‌ಗೆ ಐರ್ಲೆಂಡ್ ತಂಡದ ಸ್ಪಿನ್ನರ್‌ಗಳಾಗಿದ್ದಾರೆ.
ಐರ್ಲೆಂಡ್ ತಂಡವು 2009ರಿಂದ ಎಲ್ಲಾ ಪುರುಷರ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿದೆ. 2009ರ ತಮ್ಮ ಚೊಚ್ಚಲ ಪಂದ್ಯಾವಳಿಯಲ್ಲೇ ಸೂಪರ್ 8 ಹಂತಕ್ಕೆ ತಲುಪಿತ್ತು.
ಪಾಕಿಸ್ತಾನ ಟಿ20 ಸರಣಿ ಮತ್ತು ತ್ರಿಕೋನ ಸರಣಿಗೆ ಐರ್ಲೆಂಡ್ ತಂಡ
ಪಾಲ್ ಸ್ಟಿರ್ಲಿಂಗ್ (ನಾಯಕ), ಮಾರ್ಕ್ ಅಡೈರ್, ರಾಸ್ ಅಡೈರ್, ಆಂಡ್ರ್ಯೂ ಬಾಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆನ್ ವೈಟ್, ಕ್ರೇಗ್ ಯಂಗ್.
2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಐರ್ಲೆಂಡ್ ತಂಡ
ಪಾಲ್ ಸ್ಟಿರ್ಲಿಂಗ್ (ನಾಯಕ), ಮಾರ್ಕ್ ಅಡೈರ್, ರಾಸ್ ಅಡೇರ್, ಆಂಡ್ರ್ಯೂ ಬಾಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ವಾ ಲಿಟಲ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆನ್ ವೈಟ್, ಕ್ರೇಗ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications