
ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಪ್ರವಾಸಕ್ಕಾಗಿ ಕ್ರಿಕೆಟ್ ಐರ್ಲೆಂಡ್ ತನ್ನ ತಂಡವನ್ನು ಇಂದು ಪ್ರಕಟಿಸಿದೆ. ಬಾಂಗ್ಲಾದೇಶ ಪ್ರವಾಸದಲ್ಲಿ ಮೂರು ಮಾದರಿಯಲ್ಲಿಯೂ ಆಡಲಿರುವ ಆಂಡಿ ಬಲ್ಬಿರ್ನೈ ನೇತೃತ್ವದ ಐರ್ಲೆಂಡ್ ತಂಡ ಬಳಿಕ ಶ್ರೀಲಂಕಾಗೆ ಪ್ರವಾಸ ಕೈಗೊಂಡು ಟೆಸ್ಟ್ ಹಾಗೂ ಏಕದಿನ ಪಂದ್ಯವನ್ನಾಡಲಿದೆ. ಒಟ್ಟು ಐದು ತಂಡಗಳನ್ನು ಐರ್ಲೆಂಡ್ ಪ್ರಕಟಿಸಿದೆ
ಜಿಂಬಾಬ್ವೆಯ ಮಾಜಿ ಅಂತಾರಾಷ್ಟ್ರೀಯ ವಿಕೆಟ್‌ಕೀಪರ್ ಬ್ಯಾಟರ್ ಪೀಟರ್ ಮೂರ್ ಐರ್ಲೆಂಡ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ಅವರನ್ನು ಎರಡು ಟೆಸ್ಟ್ ಸರಣಿಗಳಿಗೂ ಆಯ್ಕೆ ಮಾಡಲಾಗಿದೆ. ಮೂರ್ ಈ ಹಿಂದೆ ಬಾಂಗ್ಲಾದೇಶದಲ್ಲಿ ಆಡಿದ ಅನುಭವವನ್ನು ಹೊಂದಿದ್ದು ನವೆಂಬರ್ 2018 ರಲ್ಲಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿದ್ದಾಗ ಅಜೇಯ 63 ರನ್ ಮತ್ತು 83 ರನ್ ಗಳಿಸಿದ್ದರು. ಟೆಸ್ಟ್ ಮಾದರಿಗೆ ಐರ್ಲೆಂಡ್ ತಂಡದಲ್ಲಿ 10 ಹೊಸ ಆಟಗಾರರು ಆಯ್ಕೆಯಾಗಿದ್ದು ಪದಾರ್ಪಣೆಗೆ ಕಾಯುತ್ತಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಗ್ರಹಾಂ ಹ್ಯೂಮ್, ಮ್ಯಾಥ್ಯೂ ಹಂಫ್ರೀಸ್, ಜೋಶ್ ಲಿಟಲ್, ಆಂಡ್ರ್ಯೂ ಮ್ಯಾಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ ಮತ್ತು ಬೆನ್ ವೈಟ್.
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೈರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಮ್ಯಾಥ್ಯೂ ಹಂಫ್ರೀಸ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಎಲ್ ಹ್ಯಾರಿ ಟೆಕ್ಟರ್, ಎಲ್. ವೈಟ್ ಮತ್ತು ಕ್ರೇಗ್ ಯಂಗ್.
ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೈರ್, ಕರ್ಟಿಸ್ ಕ್ಯಾಂಫರ್, ಮುರ್ರೆ ಕಮಿನ್ಸ್, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಮ್ಯಾಥ್ಯೂ ಹಂಫ್ರೀಸ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕ್‌ಕಾರ್ಥಿ, ಜೇಮ್ಸ್ ಮೆಕಲ್ಲಮ್, ಪಿಜೆ ಮೂರ್, ಬೆನ್‌ಕನ್ ಟೆಕ್ಟರ್ ವೈಟ್
ಶ್ರೀಲಂಕಾ ಟೆಸ್ಟ್ ಸರಣಿಗೆ ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಕರ್ಟಿಸ್ ಕ್ಯಾಂಫರ್, ಮುರ್ರೆ ಕಮಿನ್ಸ್, ಜಾರ್ಜ್ ಡಾಕ್ರೆಲ್, ಮ್ಯಾಥ್ಯೂ ಫೋಸ್ಟರ್, ಗ್ರಹಾಂ ಹ್ಯೂಮ್, ಮ್ಯಾಥ್ಯೂ ಹಂಫ್ರೀಸ್,
ಆಂಡ್ರ್ಯೂ ಮ್ಯಾಕ್‌ಬ್ರೈನ್, ಬ್ಯಾರಿ ಮೆಕ್‌ಕಾರ್ಥಿ, ಜೇಮ್ಸ್ ಮೆಕ್‌ಕಲಮ್, ಪಿಜೆ ಮೂರ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ ಮತ್ತು ಬೆನ್ ವೈಟ್.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಕರ್ಟಿಸ್ ಕ್ಯಾಂಫರ್, ಮರ್ರೆ ಕಮಿನ್ಸ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಫೋಸ್ಟರ್,
ಗ್ರಹಾಂ ಹ್ಯೂಮ್, ಮ್ಯಾಥ್ಯೂ ಹಂಫ್ರೀಸ್, ಆಂಡ್ರ್ಯೂ ಮ್ಯಾಕ್‌ಬ್ರೈನ್, ಕಾನರ್ ಓಲ್ಫರ್ಟ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ ಮತ್ತು ಕ್ರೇಗ್ ಯಂಗ್