T20 World Cup 2026: ಐರ್ಲೆಂಡ್ ತಂಡ ಪ್ರಕಟ: ಪಾಲ್ ಸ್ಟಿರ್ಲಿಂಗ್ ನಾಯಕ
ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಟಿ20 ವಿಶ್ವಕಪ್ 2026ಗೆ ಐರ್ಲೆಂಡ್ ತಂಡವನ್ನು ಪ್ರಕಟಿಸಿದೆ. ಐರ್ಲೆಂಡ್ ತಂಡವನ್ನು ಈ ಬಾರಿ 35 ವರ್ಷದ ಪಾಲ್ ಸ್ಟಿರ್ಲಿಂಗ್ ಮುನ್ನಡೆಸುತ್ತಿದ್ದಾರೆ. ಲೋರ್ಕನ್ ಟಕರ್ ಅವರಿಗೆ ಉಪನಾಯಕನ ಸ್ಥಾನವನ್ನು ನೀಡಲಾಗಿದೆ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ.
ಐರ್ಲೆಂಡ್ ಪ್ರಕಟಿಸಿರುವ 15 ಜನರ ತಂಡದಲ್ಲಿ ಅನುಭವಿ ಆಟಗಾರರು ಇದ್ದಾರೆ. 2024ರ ಟಿ20 ವಿಶ್ವಕಪ್ ಆಡಿರುವ 12 ಮಂದಿ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿದೆ. ಟಿಮ್ ಟೆಕ್ಟರ್, ಬೆನ್ ಕಾಲೀಟ್ಜ್ ಮತ್ತು ಮ್ಯಾಥ್ಯೂ ಹಂಫ್ರೀಸ್ ಚೊಚ್ಚಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಆಡಲಿದ್ದಾರೆ. ಈ ಆಟಗಾರರು ಐರ್ಲೆಂಡ್ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಭಾರತ, ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿದ್ದರಿಂದ ಸ್ಪಿನ್ ಬೌಲರ್‌ಗಳಿಗೂ ಮಣೆ ಹಾಕಲಾಗಿದೆ.

ಐರ್ಲೆಂಡ್ ರಾಷ್ಟ್ರೀಯ ಆಯ್ಕೆದಾರ ಆಂಡ್ರ್ಯೂ ವೈಟ್ ತಂಡ ಪ್ರಕಟಿಸಿದ ಬಳಿಕ ಮಾತನಾಡಿದರು. "2022ರ ಐಸಿಸಿ ಟಿ20 ವಿಶ್ವಕಪ್ ನಮ್ಮ ತಂಡದ ಪಾಲಿಗೆ ಸ್ಮರಣೀಯ. ಕಳೆದ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ನಾವು ಸ್ಥಿರ ಪ್ರದರ್ಶನ ನೀಡಲಿಲ್ಲ. ನಾವು ಹಿಂದೆ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚು ಪಂದ್ಯಗಳನ್ನು ಆಡಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.
ಬಿ ಗುಂಪಿನಲ್ಲಿ ಸ್ಥಾನ
ಐರ್ಲೆಂಡ್ 2009ರಲ್ಲಿ ನಡೆದ ಎರಡನೇ ಆವೃತ್ತಿಯ ಟಿ20 ವಿಶ್ವಕಪ್‌ನಿಂದಲೂ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಈ ತಂಡ ಸೆಮಿಫೈನಲ್ ಹಂತವನ್ನೂ ಒಮ್ಮೆಯೂ ಪ್ರವೇಶಿಸಿಲ್ಲ. ಈ ಬಾರಿ ಐರ್ಲೆಂಡ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ತಂಡದಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮತ್ತು ಓಮನ್ ಕೂಡ ಸ್ಥಾನ ಪಡೆದಿವೆ. ಲೀಗ್ ಹಂತದಲ್ಲಿ ಐರ್ಲೆಂಡ್ ನಾಲ್ಕು ಪಂದ್ಯಗಳನ್ನು ಆಡಲಿದೆ. ಐರ್ಲೆಂಡ್ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಮಾರ್ಕ್ ಅಡೈರ್, ರಾಸ್ ಅಡೈರ್, ಬೆನ್ ಕಾಲೀಟ್ಜ್, ಕರ್ಟಿಸ್ ಕ್ಯಾಂಪರ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಮ್ಯಾಥ್ಯೂ ಹಂಫ್ರೀಸ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ಲೋರ್ಕನ್ ಟಕರ್, ಬೆನ್ ವೈಟ್, ಕ್ರೇಗ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications