Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭ್ಯಾಸ ಪುನರಾರಂಭದತ್ತ ಮೊದಲ ಹೆಜ್ಜೆಯಿಟ್ಟ ಐರ್ಲೆಂಡ್ ಕ್ರಿಕೆಟ್ ತಂಡ

Ireland cricket team takes first step towards resumption of training

ಡಬ್ಲಿನ್, ಜೂನ್ 8: ಕಟ್ಟುನಿಟ್ಟಾದ ಆರೋಗ್ಯ ಮಾರ್ಗಸೂಚಿಗಳೊಂದಿಗೆ ಐರ್ಲೆಂಡ್ ಕ್ರಿಕೆಟ್ ತಂಡದ ಆಟಗಾರರು ಅಭ್ಯಾಸ ಪುನರಾರಂಭಿಸಿದ್ದಾರೆ. ಇದರಿಂದ ಐರ್ಲೆಂಡ್‌ ತಂಡದ ಇಂಗ್ಲೆಂಡ್ ಪ್ರವಾಸ ಸಾಧ್ಯತೆಯೂ ಹೆಚ್ಚಾಗಿದೆ. ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಐರ್ಲೆಂಡ್, ಅಲ್ಲಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವುದರಲ್ಲಿದೆ.

ಐರ್ಲೆಂಡ್ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸ ಸರಣಿ ಅಸಲಿಗೆ ಜುಲೈ 30ರಂದು ಆರಂಭಗೊಳ್ಳುವುದರಲ್ಲಿತ್ತು. ಆದರೆ ಕ್ರಿಕೆಟ್ ಐರ್ಲೆಂಡ್ ಮತ್ತು ಇಂಗ್ಲೆಂಡ್ & ವೇಲ್ಸ್ ಕ್ರಿಕೆಟ್ ಬೋರ್ಡ್, 3 ಪಂದ್ಯಗಳ ಈ ಏಕದಿನ ಸರಣಿಯನ್ನು ಸೆಪ್ಟೆಂಬರ್‌ಗೆ ಮುಂದೂಡಲು ಚಿಂತನೆ ನಡೆಸುತ್ತಿದೆ.

'ನಾವು ಇಂಗ್ಲೆಂಡ್-ಐರ್ಲೆಂಡ್ ಸರಣಿಯ ಬಗ್ಗೆ ಇನ್ನೂ ಚರ್ಚೆ ನಡೆಸುತ್ತಿದ್ದೇವೆ,' ಎಂದು ಕ್ರಿಕೆಟ್ ಐರ್ಲೆಂಡ್‌ನ ಉನ್ನತ ಕಾರ್ಯಕ್ಷಮತೆಯ ನಿರ್ದೇಶಕ ರಿಚರ್ಡ್ ಹೋಲ್ಡ್ಸ್‌ವರ್ಥ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಿದ್ಧವಾಗಲು ಹೆಚ್ಚು ಕಾಲಾವಕಾಶ ಅಗತ್ಯವಿದೆ. ಹೀಗಾಗಿ ಅಭ್ಯಾಸ ಪುನರಾರಂಭಿಸುವತ್ತ ನಿರ್ಧಾರ ತಾಳಿದ್ದೇವೆ ಎಂದು ರಿಚರ್ಡ್ ತಿಳಿಸಿದ್ದಾರೆ.

'ಆ ಪಂದ್ಯಗಳಿಗೆ ತಯಾರಾಗಬೇಕಾದರೆ ಅನುಮೋದನೆ ಬರಬೇಕು, ಆರರಿಂದ ಎಂಟು ವಾರಗಳ ಅವಧಿಯು ಲಾಕ್‌ಡೌನ್ ಪ್ರಾರಂಭದಿಂದ ಹಿಡಿದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧವಾಗಲು ಅಗತ್ಯವೆಂದು ನಮಗನ್ನಿಸುತ್ತಿದೆ. ಮುಖ್ಯವಾಗಿ ನಮ್ಮ ಬೌಲರ್‌ಗಳಿಗೆ ಸಿದ್ಧವಾಗಲು ಹೆಚ್ಚು ಕಾಲಾವಕಾಶ ಬೇಕಿದೆ. ಇಂಗ್ಲೆಂಡ್ ತಂಡ ಈಗಾಗಲೇ ಅಭ್ಯಾಸ ಆರಂಭಿಸಿರುವುದರಿಂದ ನಮ್ಮ ತಂಡ ಅದರೆದುರು ಸೋಲಬಾರದು,' ಎಂದು ಹೋಲ್ಡ್ಸ್‌ವರ್ಥ್ ಹೇಳಿದ್ದಾರೆ.

Story first published: Monday, June 8, 2020, 23:52 [IST]
Other articles published on Jun 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+