ಭಾರತವನ್ನು ಎದುರಿಸಲು ಕಾತರರಾಗಿದ್ದೇವೆ ಎಂದ ಐರ್ಲೆಂಡ್ ಕ್ರಿಕೆಟಿಗ
ಭಾರತ ಹಾಗೂ ಐರ್ಲೆಂಡ್ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಗಾಗಿ ಈಗಾಗಲೇ ಜಸ್ಪ್ರೀತ್ ಬೂಮ್ರಾ ನೇತೃತ್ವದ ಟೀಮ್ ಇಂಡಿಯಾ ಐರ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದು ಕೊನೆಯ ಹಂತದ ಸಿದ್ಧತೆ ನಡೆಸುತ್ತಿದೆ. ಈ ಸರಣಿಯ ಹಿನ್ನೆಲೆಯಲ್ಲಿ ಐರ್ಲೆಂಡ್ ತಂಡದ ವಿಕೆಟ್ ಕೀಪರ್ ಲೋರ್ಕಾನ್ ಟಕ್ಕರ್ ಮಾತನಾಡಿದ್ದು ಭಾರತ ತಂಡದ ವಿರುದ್ಧ ಸೆಣೆಸಾಡಲು ಕಾತರನಾಗಿರುವುದಾಗಿ ತಿಳಿಸಿದ್ದಾರೆ.
ಐರ್ಲೆಂಡ್‌ನ ವಿಕೆಟ್‌ಕೀಪರ್ ಲೋರ್ಕನ್ ಟಕರ್ ಈ ಸರಣಿಯ ಕುರಿತಾಗಿ ಮಾತನಾಡಿದ್ದಾರೆ. ಮಲಾಹೈಡ್‌ನಲ್ಲಿ ಭಾರತವನ್ನು ಎದುರಿಸಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ ಎಂದಿರುವ ಅವರು ಕಳೆದ ಬೇಸಿಗೆಯಲ್ಲಿ ಭಾರತದ ವಿರುದ್ಧ ಎರಡು ಶ್ರೇಷ್ಠ ಪಂದ್ಯಗಳನ್ನು ಹೊಂದಿದ್ದೆವು ಎಂದಿದ್ದಾರೆ. ಈ ಬಾರಿ ಭಾರತ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ಆತ್ಮವಿಶ್ವಾಸವನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.

"ಈ ವರ್ಷ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ವಿಶೇಷವಾಗಿ ಟಿ20 ಕ್ರಿಕೆಟ್‌ನಲ್ಲಿ ನಾವು ಉತ್ತಮವಾಗಿ ತಯಾರಿ ನಡೆಸಿದ್ದೇವೆ. ಸ್ಕಾಟ್ಲೆಂಡ್‌ನಲ್ಲಿ ನಾವು ಉತ್ತಮ ಪ್ರದರ್ಶಣ ನಿಡಿ ಬಂದಿದ್ದೇವೆ. ಅಲ್ಲಿ ನಾವು ಮುಂದಿನ ವರ್ಷದ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಹಾಗಾಗಿ ಪ್ರತಿಯೊಬ್ಬ ಆಟಗಾರ ಕೂಡ ಉತ್ಸುಕರಾಗಿದ್ದಾರೆಂದು ನಾನು ಭಾವಿಸುತ್ತೇನೆ. ಕಳೆದ ಬೇಸಿಗೆಯಲ್ಲಿ ನಾವು ಭಾರತದ ವಿರುದ್ಧ ಎರಡು ಉತ್ತಮ ಪಂದ್ಯಗಳನ್ನು ಆಡಿದ್ದೆವು. ಮತ್ತು ಪ್ರತಿಯೊಬ್ಬರೂ ದೊಡ್ಡ ಪೈಪೋಟಿಯನ್ನು ನಿರೀಕ್ಷಿಸುತ್ತಿದ್ದು ಅಭಿಮಾನಿಗಳು ಕೂಡ ಅದಕ್ಕಾಗಿ ಎದುರುನೋಡುತ್ತಿದ್ದಾರೆ" ಎಂದಿದ್ದಾರೆ.
"ಮಲಾಹಿಡ್ ವಿಶೇಷ ಭಾವನೆಯನ್ನು ಉಂಟುಮಾಡುತ್ತದೆ. ವಿಶೇಷವಾಗಿ ದೊಡ್ಡ ತಂಡ ಇಲ್ಲಿಗೆ ಬಂದಾಗ ಆಡುವುದು ವಿಶೇಷ ಅನುಭವ. ಭಾರತಕ್ಕೆ ಇಲ್ಲಿಯೂ ಉತ್ತಮ ಬೆಂಬಲವಿದೆ ಎಂದು ನಮಗೆ ತಿಳಿದಿದೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಹೊಂದುವುದು ಮತ್ತಷ್ಟು ವಿಶೇಷ. ಐರ್ಲೆಂಡ್‌ನಲ್ಲಿ ಕ್ರಿಕೆಟ್‌ಗೆ ಇದರಿಂದ ವಿಶೇಷ ಶಕ್ತಿ ದೊರೆಯಲಿದೆ" ಎಂದಿದ್ದಾರೆ ಟಕ್ಕರ್.
ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಸೋಲು ಕಂಡ ಕಾರಣ ಐರ್ಲೆಂಡ್ ಏಕದಿನ ವಿಶ್ವಕಪ್ 2023ಗೆ ಪ್ರವೇಶ ಪಡೆಯಲು ವಿಫಲವಾಗಿದೆ. ಆದರೆ ಭಾರತ ತಂಡ ಐರ್ಲೆಂಡ್‌ಗೆ ಪೂರ್ಣ ಸಾಮರ್ಥ್ಯದ ತಂಡವನ್ನು ಕಳುಹಿಸಿಲ್ಲ ಎಂಬುದು ಗಮನಾರ್ಹ ಅಂಶ. ಜಸ್ಪ್ರೀತ್ ಬೂಮ್ರಾ ನೇತೃತ್ವದ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿನ ಅವಕಾಶ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಸರನಿ ಸಾಕಷ್ಟು ಕುತೂಹಲ ಮೂಡಿಸಿದೆ.
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications