ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟಿಸಿದ ಐರ್ಲೆಂಡ್

ಡಬ್ಲಿನ್, ಜುಲೈ 11: ಕೊರೊನಾವೈರಸ್ ಭೀತಿಯಿಂದಾಗಿ ನಿಲುಗಡೆಯಾಗಿದ್ದ ಕ್ರಿಕೆಟ್ ಚಟುವಟಿಕೆ ಪುನರಾರಂಭಿಸಲು ಐರ್ಲೆಂಡ್ ಕ್ರಿಕೆಟ್ ನಿರ್ಧರಿಸಿದೆ. ಮುಂದಿನ ತಿಂಗಳು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಐರ್ಲೆಂಡ್ ತಂಡ ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿದೆ. ಈ ಸರಣಿಗಾಗಿ ಐರ್ಲೆಂಡ್ 21 ಆಟಗಾರರ ತಂಡ ಪ್ರಕಟಿಸಿದೆ.
ಇಂಗ್ಲೆಂಡ್-ಐರ್ಲೆಂಡ್ ಮೊದಲ ಏಕದಿನ ಪಂದ್ಯ ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಈ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳುವುದಕ್ಕೋಸ್ಕರ್ ಐರ್ಲೆಂಡ್ ತಂಡ ಜುಲೈ 18ರಂದು ಡಬ್ಲಿನ್‌ನಿಂದ ಪ್ರಯಾಣ ಹೊರಡಲಿದೆ. ಇಂಗ್ಲೆಂಡ್ ತಲುಪಿದ ಬಳಿಕ ಆಟಗಾರರನ್ನು ಏಜಸ್ ಬೌಲ್‌ನಲ್ಲಿನ ಜೈವಿಕ ಸುರಕ್ಷತೆಯಿರುವ ಹೋಟೆಲ್‌ಗೆ ರವಾನಿಸಲಾಗುತ್ತದೆ.
ಏಜಸ್ ಬೌಲ್ ಹೋಟೆಲ್‌ನಲ್ಲಿ ಐರ್ಲೆಂಡ್ ತಂಡ ಆಗಸ್ಟ್ 5ರ ವರೆಗೂ ಇರಲಿದೆ. ಐರ್ಲೆಂಡ್ ತಂಡದಲ್ಲಿರುವವರಲ್ಲಿ 14 ಮಂದಿಯನ್ನು ಸರಣಿಗಾಗಿ ಆರಿಸಲಾಗುತ್ತದೆ. ಆದರೆ ಇನ್ನುಳಿದ 7 ಆಟಗಾರರು ಮೀಸಲು ಅಥವಾ ಹೆಚ್ಚುವರಿ ಆಟಗಾರರಾಗಿ ಇರಲಿದ್ದಾರೆ.
ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ಸಿ), ಪಾಲ್ ಸ್ಟಿರ್ಲಿಂಗ್ (ವಿಸಿ), ಮಾರ್ಕ್ ಅಡೈರ್, ಕರ್ಟಿಸ್ ಕ್ಯಾಂಪರ್, ಪೀಟರ್ ಚೇಸ್, ಗರೆಥ್ ಡೆಲಾನಿ, ಜಾರ್ಜ್ ಡೊಕ್ರೆಲ್, ಜೊನಾಥನ್ ಗಾರ್ತ್, ಟೈರೋನ್ ಕೇನ್, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಜೇಮ್ಸ್ ಮೆಕಲ್ಲಮ್, ಕೆವಿನ್ ಒ'ಬ್ರಿಯೆನ್, ವಿಲಿಯಂ ಪೋರ್ಟರ್‌ಫೀಲ್ಡ್, ಬಾಯ್ಡ್ ರಾಂಕಿನ್, ಸಿಮಿ ಸಿಂಗ್, ಹ್ಯಾರಿ ಟೆಕ್ಟರ್, ಲಾರ್ಕಾನ್ ಟಕರ್, ಗ್ಯಾರಿ ವಿಲ್ಸನ್, ಕ್ರೇಗ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications