Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತಕ್ಕೆ 183 ರನ್‌ಗಳ ಗುರಿಯನ್ನು ನೀಡಿದ ಐರ್ಲೆಂಡ್‌

ಬೆಲ್‌ಫಾಸ್ಟ್: ನಾಯಕ ಲೋರ್ಕನ್ ಟಕರ್ ಹಾಗೂ ಗರೆಥ್ ಡೆಲಾನಿ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಐರ್ಲೆಂಡ್‌ ಮೊದಲ ಟಿ20 ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಟೀಮ್ ಇಂಡಿಯಾಕ್ಕೆ ನೀಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್‌ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಟಿಮ್ ಟೆಕ್ಟರ್, ರಾಸ್ ಅಡೈರ್ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡುವಲ್ಲಿ ಎಡವಿದರು. ಈ ಜೋಡಿ 22 ರನ್‌ ಸೇರಿಸಿತು. ಆರಂಭಿಕ ರಾಸ್‌ ಅಡೈರ್ ಅವರಿಗೆ ಹರ್ಷಿತ್ ರಾಣ ಇನಿಂಗ್ಸ್‌ನ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಖೆಡ್ಡಾ ತೋಡಿದರು. ಹರ್ಷಿತ್ ರಾಣಾ ಅವರು ಎಸೆದ ಶಾರ್ಟ್‌ ಬೌಲ್‌ಗೆ ಉತ್ತರಿಸುವಲ್ಲಿ ಎಡವಿದ ರಾಸ್‌ ಅಡೈರ್ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸ್‌ಗೆ ಕ್ಯಾಚ್‌ ನೀಡಿದರು.

Ireland

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಹ್ಯಾರಿ ಟೆಕ್ಟರ್ ಅವರಿಗೆ ಅರ್ಷದೀಪ್ ಸಿಂಗ್ ಖಾತೆಯನ್ನು ತೆರೆಯಲು ಬಿಡಲೇ ಇಲ್ಲ. ಇವರು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಬೆನ್ ಕಾಲಿಟ್ಜ್ 15 ರನ್‌ ಬಾರಿಸಿದ್ದಾಗ ಶಿವಂ ದುಬೆ ಅವರ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಹೋಗಿ ಪ್ರಸಿದ್ಧ್ ಕೃಷ್ಣ್‌ಗೆ ಕ್ಯಾಚ್‌ ನೀಡಿದರು.

ನಾಯಕನ ಜವಾಬ್ದಾರಿಯುತ ಆಟ

51 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಲೋರ್ಕನ್ ಟಕರ್, ಗರೆಥ್ ಡೆಲಾನಿ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಸಮಯೋಚಿತ ಆಟವನ್ನು ಆಡಿದ ಈ ಜೋಡಿ 44 ಎಸೆತಗಳಲ್ಲಿ 64 ರನ್‌ ಸೇರಿಸಿತು. ಈ ಹಂತದಲ್ಲಿ ಭರ್ಜರಿಯಾಗಿ ಆಡುತ್ತಿದ್ದ ನಾಯಕ ಲೋರ್ಕನ್ ಟಕರ್ ಅವರಿಗೆ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 50 ರನ್‌ ಬಾರಿಸಿ ಔಟ್ ಆದರು.

6ನೇ ವಿಕೆಟ್‌ಗೆ ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್ ಜೋಡಿ 17 ಎಸೆತಗಳಲ್ಲಿ 49 ರನ್‌ ಸೇರಿಸಿ ಅಬ್ಬರಿಸಿತು. 19 ರನ್‌ ಬಾರಿಸಿದ್ದ ಜಾರ್ಜ್ ಡಾಕ್ರೆಲ್ ಅವರಿಗೆ ಅಕ್ಷರ್ ಪಟೇಲ್‌ ಪೆವಿಲಿಯನ್‌ ಹಾದಿ ತೋರಿಸಿದರು. ಗರೆಥ್ ಡೆಲಾನಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 49 ರನ್‌ ಬಾರಿಸಿ ಅರ್ಷದೀಪ್ ಸಿಂಗ್‌ಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಐರ್ಲೆಂಡ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 182 ರನ್ ಸೇರಿಸಿತು. ಭಾರತದ ಪರ ಹರ್ಷಿತ್ ರಾಣಾ 3, ಅರ್ಷದೀಪ್ ಸಿಂಗ್‌, ಅಕ್ಷರ್ ಪಟೇಲ್‌ ಅವರು ತಲಾ 2 ವಿಕಟ್‌ ಕಬಳಿಸಿದರು.

ಶ್ರೇಯಸ್ ಅಯ್ಯರ್ ದಾಖಲೆ

936 ದಿನಗಳ ಅಂತರದ ನಂತರ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಶ್ರೇಯಸ್, ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು. ಮೊದಲ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ ನಂತರ ಶ್ರೇಯಸ್ ಅಯ್ಯರ್ ಈಗ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಬಳಿಕ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ 114 ಟಿ20 ಪಂದ್ಯಗಳನ್ನು ಆಡಿದ ನಂತರ ಅವರು ಈ ಸ್ವರೂಪದಲ್ಲಿ ಭಾರತೀಯ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಈ ದಾಖಲೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿತ್ತು. ಇವರು ಭಾರತದ ಪರ 80 ಟಿ20 ಪಂದ್ಯಗಳನ್ನು ಆಡಿದ ಬಳಿಕ ನಾಯಕತ್ವ ವಹಿಸಿಕೊಂಡಿದ್ದರು.

Story first published: Friday, June 26, 2026, 19:44 [IST]
Other articles published on Jun 26, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+