For Quick Alerts
ALLOW NOTIFICATIONS  
For Daily Alerts
 

2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡ ಐರ್ಲೆಂಡ್

2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಅರ್ಹತೆಯನ್ನು ಐರ್ಲೆಂಡ್ ತಂಡ ಸಂಪಾದಿಸಿದೆ. ಸ್ಕಾಟ್‌ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನ ಯುರೋಪಿಯಲ್ ರೀಜಿನಲ್ ಅರ್ಹತಾ ಸುತ್ತಿನಲ್ಲಿ ಜರ್ಮನಿ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾಗಿದೆ. ಇದು ಐರ್ಲೆಂಡ್ ತಂಡ ಅರ್ಹತೆ ಸಂಪಾದಿಸಲು ಸಾಕಾಗಿದೆ. ಜರ್ಮನಿ ವಿರುದ್ಧದ ಈ ಪಂದ್ಯ ಒಂದೂ ಎಸೆತ ಕಾರಣ ರದ್ದಾಯಿತು.

ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ ತಂಡ ಇದಕ್ಕೂ ಹಿಂದಿನ ನಾಲ್ಕು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ಇಟೆಲಿ, ಡೆನ್ಮಾರ್ಕ್, ಆಸ್ಟ್ರಿಯಾ ಮತ್ತು ಜರ್ಸಿ ತಂಡದ ವಿರುದ್ಧ ಐರ್ಲೆಂಡ್ ಗೆಲುವು ಸಾಧಿಸಿದ ಬಳಿಕ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಕೇವಲ ಒಂದು ಅಂಕದ ಅಗತ್ಯ ಮಾತ್ರವೇ ಇತ್ತು. ಜರ್ಮನಿ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾದ ಕಾರಣ ಎರಡು ತಂಡಗಳು ಕೂಡ ಅಂಕಗಳನ್ನು ಹಂಚಿಕೊಂಡಿದ್ದು ಇದರ ಜೊತೆಗೆ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿದೆ ಐರ್ಲೆಂಡ್.

Ireland qualify for T20 World Cup 2024, after Germany match abandoned

ಐರ್ಲೆಂಡ್ ಅರ್ಹತಾ ಪಂದ್ಯಾವಳಿಯಲ್ಲಿ ಆಡಲು ಇನ್ನೂ ಒಂದು ಪಂದ್ಯ ಬಾಕಿಯಿದೆ. ಜುಲೈ 28 ಶುಕ್ರವಾರದಂದು ಮಧ್ಯಾಹ್ನ 3.30ಕ್ಕೆ ಗ್ರೇಂಜ್ ಕ್ರಿಕೆಟ್ ಕ್ಲಬ್‌ನಲ್ಲಿ ಆತಿಥೇಯ ಸ್ಕಾಟ್‌ಲ್ಯಾಂಡ್ ಅನ್ನು ಐರ್ಲೆಂಡ್ ಎದುರಿಸಲಿದೆ. ಈ ಟೂರ್ನಿಯನ್ನು ಗೆಲ್ಲುವ ತಂಡ ಯಾವುದು ಎಂಬುದನ್ನು ಈ ಅಂತಿಮ ಪಂದ್ಯ ನಿರ್ಧರಿಸಲಿದೆ.

"ನಾವು ಇಂದು ಮುಂದಿನ ವರ್ಷದ T20 ವಿಶ್ವಕಪ್‌ಗೆ ಅರ್ಹತೆ ಪಡೆಯುವ ನಮ್ಮ ಪ್ರಾಥಮಿಕ ಉದ್ದೇಶವನ್ನು ಸಾಧಿಸಿದ್ದೇವೆ ಅದಕ್ಕಾಗಿ ನಾವು ಸಂತೋಷಪಡುತ್ತೇವೆ. ನಾವು ಸ್ಕಾಟ್‌ಲ್ಯಾಂಡ್‌ಗೆ ಸ್ಪಷ್ಟ ಯೋಜನೆ ಮತ್ತು ಆಟದ ಶೈಲಿಯೊಂದಿಗೆ ಬಂದಿದ್ದು ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದೇವೆ ಅದರಿಂದಾಗಿ ನಾವು ಇಲ್ಲಿ ಯಶಸ್ಸು ಸಾಧಿಸಿದ್ದೇವೆ" ಎಂದು ಐರ್ಲೆಂಡ್ ತಂಡದ ನಾಯಕ ಪಾಲ್ ಸ್ಟಿರ್ಲಿಂಗ್ ಹೇಳೀಕೆ ನೀಡಿದ್ದಾರೆ.

"ಇಂದು ನಮ್ಮ ಉದ್ದೇಶ ಈಡೇರಿದ್ದಕ್ಕೆ ಸಂಭ್ರಮಾಚರಣೆ ನಡೆಸಲಿದ್ದೇವೆ, ಆದರೆ ನಾಳೆ ನಡೆಯುವ ಪಂದ್ಯವನ್ನು ಗೆದ್ದು ಟ್ರೋಫಿ ಜಯಿಸುವುದು ನಮ್ಮ ಮುಂದಿನ ಗುರಿ. ಅಲ್ಲದೆ ಮುಂದಿನ ತಿಂಗಳು ಭಾರತದ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿಯೂ ಈ ಗೆಲುವಿನ ಅಭಿಯಾನ ಮುಂದುವರಿಸುವ ವಿಶ್ವಾಸವಿದೆ" ಎಂದಿದ್ದಾರೆ ಸ್ಟಿರ್ಲಿಂಗ್.

ಇನ್ನು ಕಳೆದ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ತಂಡ ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಸೂಪರ್ 12 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದರೆ ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ್ದು ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು.

2024ರ ಟಿ20 ವಿಶ್ವಕಪ್ ಟೂರ್ನಿ ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ಕ್ರಿಕೆಟ್ ಮಂಡಳಿಗಳ ಆತಿಥ್ಯದಲ್ಲಿ ಆಯೋಜನೆಯಾಗಲಿದೆ.

Story first published: Thursday, July 27, 2023, 18:07 [IST]
Other articles published on Jul 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+