Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವ ಚಾಂಪಿಯನ್‌ರಿಗೆ ಮುಖಭಂಗ; ಇತಿಹಾಸ ನಿರ್ಮಿಸಿದ ಐರ್ಲೆಂಡ್‌

ಬೆಲ್‌ಫಾಸ್ಟ್: ಟಿ20 ವಿಶ್ವಚಾಂಪಿಯನ್ ಭಾರತ ತಂಡ ಹಿಂದೆಂದೂ ಕಾಣದ ದಿನವನ್ನು ಭಾನುವಾರ ಕಂಡಿದೆ. ಐರ್ಲೆಂಡ್ ಪ್ರವಾಸದಲ್ಲಿದ್ದ ಭಾರತ ತಂಡ, ಆಡಿದ ಎರಡೂ ಟಿ20 ಪಂದ್ಯಗಳಲ್ಲಿ 1 ರನ್ ಸೋಲು ಅನುಭವಿಸಿದ್ದು, ಸರಣಿಯನ್ನು ಕೈ ಚೆಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಐರ್ಲೆಂಡ್‌ ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಸರಣಿ ಗೆಲುವಿನ ನಗೆ ಬೀರಿದೆ. ಶ್ರೇಯಸ್ ಅಯ್ಯರ್ ಪಡೆಗೆ ಪ್ರವಾಸದಲ್ಲಿ ಮುಖಭಂಗವಾಗಿದೆ.

ಪಂದ್ಯದ ಯಾವುದೇ ಹಂತದಲ್ಲಿ ಟೀಮ್ ಇಂಡಿಯಾ ಹೋರಾಟ ನೀಡುವ ಸೂಚನೆ ನೀಡಲಿಲ್ಲ. ಆರಂಭದಲ್ಲಿ ಟಾಸ್‌ ಗೆದ್ದು ಬೌಲಿಂಗ್ ಮಾಡಿ 154 ರನ್‌ಗಳಿಗೆ ಆತಿಥೇಯ ತಂಡವನ್ನು ಕಟ್ಟಿ ಹಾಕಿದ ಭಾರತ ತಂಡ, ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ವಿಶ್ವದ ಶ್ರೇಷ್ಠ ಬ್ಯಾಟರ್‌ಗಳನ್ನು ಹೊಂದಿರುವ ಭಾರತ ತಂಡದ ಪ್ರವಾಸದಲ್ಲಿ ನೀಡಿರುವ ಪ್ರದರ್ಶನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಐರ್ಲೆಂಡ್‌ ಪ್ರವಾಸದಲ್ಲಿ ಈ ರೀತಿಯ ಪ್ರದರ್ಶನ ನೀಡಿದರೆ, ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತದ ಪ್ರದರ್ಶನ ಹೇಗಿರಲಿದೆ ಎಂಬ ಸಂಶಯ ಅಭಿಮಾನಿಗಳಲ್ಲಿ ಮೂಡಿದೆ.

Ireland Script History

ವಿಶ್ವದ ನಂಬರ್ 1 ಬ್ಯಾಟರ್‌ ಅಭಿಷೇಕ್ ಶರ್ಮಾ ಎರಡನೇ ಟಿ20 ಪಂದ್ಯದಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿ ಸೊನ್ನೆ ಸುತ್ತಿದರು. ಟಿ20 ವಿಶ್ವಕಪ್‌ನ ಸರಣಿ ಶ್ರೇಷ್ಠ ಆಟಗಾರ ಸಂಜು ಸ್ಯಾಮ್ಸನ್‌ ರನ್‌ ಕಲೆ ಹಾಕುವಲ್ಲಿ ಎಡವಿದರು. ಟೀಮ್ ಇಂಡಿಯಾ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದ ಇಶಾನ್‌ ಕಿಶನ್‌ (12) ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.

ಜವಾಬ್ದಾರಿ ಮರೆತ ನಾಯಕ

ಸೂರ್ಯಕುಮಾರ್ ಯಾದವ್ ಅವರ ಸ್ಥಾನದಲ್ಲಿ ತಂಡವನ್ನು ಮುನ್ನಡೆಸಿದ ಶ್ರೇಯಸ್ ಅಯ್ಯರ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. ಟೀಮ್ ಇಂಡಿಯಾ ಆರಂಭಿಕ 2.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 19 ರನ್‌ ಸೇರಿಸಿ ಸಂಕಷ್ಟಕ್ಕೆ ಸಿಲುಕಿತು. ನಾಲ್ಕನೇ ವಿಕೆಟ್‌ಗೆ ಅಕ್ಷರ್ ಪಟೇಲ್ ಹಾಗೂ ತಿಲಕ್‌ ವರ್ಮಾ ಜೋಡಿ ತಂಡಕ್ಕೆ 39 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಹಂತದಲ್ಲಿ 14 ರನ್ ಬಾರಿಸಿದ್ದ ಅಕ್ಷರ್ ಪಟೇಲ್‌ ಔಟ್ ಆದರು.

ಸ್ಪಿನ್ ಬೌಲರ್‌ಗಳಿಗೆ ದೊಡ್ಡ ಹೊಡೆತಗಳನ್ನು ಬಾರಿಸಲು ಹೆಸರುವಾಸಿಯಾಗಿದ್ದ ಶಿವಂ ದುಬೆ ಆಟ 20 ರನ್‌ಗೆ ಸೀಮಿತವಾಯಿತು. ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ತಿಲಕ್ ವರ್ಮಾ 46 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 55 ರನ್ ಬಾರಿಸಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಹರ್ಷಿತ್ ರಾಣಾ 10 ಎಸೆತಗಳಲ್ಲಿ 21 ರನ್‌ ಸಿಡಿಸಿ ಗೆಲುವಿನ ಆಸೆ ತೋರಿಸಿ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 153 ರನ್‌ ಕಲೆ ಹಾಕಿ ಸೋಲು ಕಂಡಿತು.

Story first published: Sunday, June 28, 2026, 22:57 [IST]
Other articles published on Jun 28, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+