ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ ಐರ್ಲೆಂಡ್: ತಂಡ ಪ್ರಕಟ

ಐರ್ಲೆಂಡ್ ತಂಡ ಮುಂದಿನ ಏಪ್ರಿಲ್‌ನಲ್ಲಿ ಶ್ರೀಲಂಕಾಗೆ ಪ್ರವಾಸ ಕೈಗೊಳ್ಳಲಿದ್ದು ಎರಡು ಪಂದ್ಯಗಳ ಟೆಸ್ಟ್ ಸರನಿಯಲ್ಲಿ ಭಾಗಿಯಾಗಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಈ ಸರಣಿಗೆ ಐರ್ಲೆಂಡ್ ತನ್ನ ತಂಡವನ್ನು ಕೂಡ ಇದೀಗ ಪ್ರಕಟಿಸಿ ಸರಣಿಗೆ ಸಜ್ಜಾಗಿದೆ.
ಇತ್ತೀಚೆಗಷ್ಟೇ ಶ್ರೀಲಂಕಾ ತಂಡದ ಅನುಭವಿ ಆಟಗಾರ ಏಂಜಲೋ ಮ್ಯಾಥ್ಯೂಸ್ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಐರ್ಲೆಂಡ್ ತಂಡ ಪ್ರವಾಸ ಕೈಗೊಂಡು ಟೆಸ್ಟ್ ಸರಣಿಯನ್ನಾಡಲು ಸಿದ್ಧವಾಗಿರುವುದು ಲಂಕಾ ಪಡೆಯ ಉತ್ಸಾಹ ಹೆಚ್ಚಿಸಿದಂತಾಗಿದೆ.
ಸದ್ಯ ಶ್ರೀಲಂಕಾ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆಯ ವಿರುದ್ಧ ರೋಮಾಂಚಕಾರಿ ಸೆಣೆಸಾಟದಲ್ಲಿ ಸೋಲು ಅನುಭವಿಸಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದೆ.
ಇನ್ನು ಐರ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವುದಿಲ್ಲ. ಆದರೆ ಮುಂದಿನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಲಂಕಾಗೆ ಉತ್ತಮ ಸಿದ್ಧತೆ ದೊರೆಯಲಿದೆ. ಇನ್ನು ಐರ್ಲೆಂಡ್ ತಂಡಕ್ಕೂ ಈ ಸರಣಿ ಬಹಳ ಮುಖ್ಯವಾಗಿದ್ದು ಕಳೆದ ಆರು ವರ್ಷಗಳಲ್ಲಿ ಐರ್ಲೆಂಡ್ ಕೇವಲ ಮೂರು ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿದೆ.
ಇನ್ನು ಮುಂದಿನ ಮೂರು ಟೆಸ್ಟ್ ಪಂದ್ಯಗಳನ್ನು ಐರ್ಲೆಂಡ್ ತಂಡ ಕೇವಲ ಮೂರು ತಿಂಗಳ ಅಂತರದಲ್ಲಿ ಆಡಲಿದೆ ಎಂಬುದು ಗಮನಾರ್ಹ ಅಂಶ. ಶ್ರೀಲಂಕಾ ಪ್ರವಾಸ ಕೈಗೊಮಡು ಎರಡು ಟೆಸ್ಟ್ ಪಂದ್ಯಗಳನ್ನು ಆಡಿದರೆ ಬಳಿಕ ಇಂಗ್ಲೆಂಡ್ ತಂಡದ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಆಡಲಿದೆ.
ಇನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರನಿಯ ಎರಡು ಪಂದ್ಯಗಳು ಕೂಡ ಗಾಲೆ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಮೊದಲ ಪಂದ್ಯ ಏಪ್ರಿಲ್ 16ರಿಂದ ಆರಂಭವಾದರೆ 2ನೇ ಟೆಸ್ಟ್ ಪಂದ್ಯ ಏಪ್ರಿಲ್ 24ರಿಂದ ಆರಂಭವಾಗಲಿದೆ.
ಐರ್ಲೆಂಡ್ ಸ್ಕ್ವಾಡ್ ಹೀಗಿದೆ: ಆಂಡ್ರ್ಯೋ ಬಲ್ಬಿರ್ನೈ, ಮಾರ್ಕ್ ಅದೈರ್, ಕರ್ಟೀಸ್ ಕ್ಯಾಂಪರ್, ಮರ್ರೆ ಕಮ್ಮಿನ್ಸ್, ಜಾರ್ಜ್ ಡಾಕ್ರೆಲ್, ಫಿನ್ ಹ್ಯಾಂಡ್, ಗ್ರಹಮ್ ಹ್ಯೂಮ್, ಮ್ಯಾಥ್ಯೂ ಹಂಪ್ರೇಸ್, ಟಾಮ್ ಮೇಯ್ಸ್, ಆಂಡ್ರ್ಯೋ ಮ್ಯಾಕ್‌ಬ್ರೈನ್, ಜೇಮ್ಸ್ ಮೆಕ್ಕಲಮ್, ಪಿಜೆ ಮೂರ್, ಹ್ಯಾರಿ ಟೆಕ್ಟರ್, ಲೂರ್ಕೆನ್ ಟಕರ್, ಬೆನ್ ವೈಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications