ಬಾಂಗ್ಲಾದೇಶ vs ಐರ್ಲೆಂಡ್: ಮೊದಲ ಟಿ20 ಪಂದ್ಯದ Live ಸ್ಕೋರ್ ಹಾಗೂ ಆಡುವ ಬಳಗ

ಬಾಂಗ್ಲಾದೇಶ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಟಿ20 ಸರಣಿ ಆರಂಭವಾಗಿದ್ದು ಮೊದಲ ಪಂದ್ಯ ಇಂದು ಚಿತ್ತಗಾಂಗ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಪ್ರವಾಸಿ ಐರ್ಲೆಂಡ್ ತಂಡ ಟಾಸ್ ಗೆದ್ದಿದ್ದು ಆರಂಭದಲ್ಲಿ ಬೌಲಿಂಗ್ ನಡೆಸುವ ನಿರ್ಧಾರ ಮಾಡಿದೆ. ಹೀಗಾಗಿ ಆತಿಥೇಯ ಬಾಂಗ್ಲಾದೇಶ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಲು ಕಣಕ್ಕಿಳಿದಿದೆ.
ಈ ಪಂದ್ಯದಲ್ಲಿ ಬಾಂಗ್ಲಾದೇಶ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿದಿದ್ದ ತಂಡದೊಂದಿಗೆ ಕಣಕ್ಕಿಳಿದಿದೆ. ಮೂವರು ಸ್ಪಿನ್ನರ್‌ಗಳು ಹಾಗೂ ಮೂವರು ವೇಗದ ಬೌಲಿಂಗ್ ಆಯ್ಕೆಯೊಂದಿಗೆ ಬಾಂಗ್ಲಾದೇಶ ಐರ್ಲೆಂಡ್ ವಿರುದ್ಧ ಸೆಣೆಸಾಡಲು ಇಳಿದಿದೆ. ಪಾರ್ಲ್ ಸ್ಟಿರ್ಲಿಂಗ್ ನೇತೃತ್ವದಲ್ಲಿ ಐರ್ಲೆಂಡ್ ಕಣಕ್ಕಿಳಿದಿದ್ದರೆ ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ತಂಡವನ್ನು ಮುನ್ನಡೆಸುತ್ತಿದ್ದಾರೆ.
Live ಸ್ಕೋರ್ ಹೀಗಿದೆ
ಇನ್ನು ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಐರ್ಲೆಂಡ್ ತಂಡ ಟಿ20 ಸರಣಿಗೂ ಮುನ್ನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿತ್ತು. ಮೂರು ಪಂದ್ಯಗಳು ಕೂಡ ಸಿಲ್ಹೆಟ್‌ನಲ್ಲಿ ನಡೆದಿದ್ದು ಸರಣಿಯ ಬಾಂಗ್ಲಾದೇಶ ತಂಡ ಈ ಸರಣಿಯನ್ನು 2-0 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ. ಸರಣಿಯ ಎರಡನೇ ಪಂದ್ಯ ಮಳೆಗೆ ಆಹುತಿಯಾದ ಕಾರಣ ಫಲಿತಾಂಶವಿಲ್ಲದೆ ಪಂದ್ಯ ರದ್ದಾಗಿತ್ತು. ಇನ್ನು ಮೊದಲ ಹಾಗೂ ಕೊನೆಯ ಎರಡು ಪಂದ್ಯಗಳಲ್ಲಿಯೂ ಬಾಂಗ್ಲಾದೇಶ ಭಾರೀ ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿದೆ. ಹೀಗಾಗಿ ಟಿ20 ಸರಣಿಯಲ್ಲಿ ಐರಿಷ್ ಪಡೆಯ ಹೋರಾಟ ಕುತೂಹಲ ಮೂಡಿಸಿದೆ.
ಬಾಂಗ್ಲಾದೇಶ ಆಡುವ ಬಳಗ: ಲಿಟ್ಟನ್ ದಾಸ್ (ವಿಕೆಟ್ ಕೀಪರ್), ರೋನಿ ತಾಲುಕ್ದಾರ್, ನಜ್ಮುಲ್ ಹೊಸೈನ್ ಶಾಂಟೋ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯ್, ಶಮೀಮ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್
ಬೆಂಚ್: ಶೋರಿಫುಲ್ ಇಸ್ಲಾಂ, ಜಾಕರ್ ಅಲಿ, ರಿಶಾದ್ ಹೊಸೈನ್
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್ (ನಾಯಕ), ರಾಸ್ ಅಡೈರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ,
ಮಾರ್ಕ್ ಅಡೇರ್, ಕ್ರೇಗ್ ಯಂಗ್, ಗ್ರಹಾಂ ಹ್ಯೂಮ್, ಬೆಂಜಮಿನ್ ವೈಟ್
ಬೆಂಚ್: ಮ್ಯಾಥ್ಯೂ ಹಂಫ್ರೀಸ್, ಫಿಯಾನ್ ಹ್ಯಾಂಡ್, ಥಾಮಸ್ ಮೇಯಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications