For Quick Alerts
ALLOW NOTIFICATIONS  
For Daily Alerts
 

ಫಿಲ್‌ ಸಾಲ್ಟ್‌ ವೀರಾವೇಶ: ನಾಯಕನಾಗಿ ಬೆಥೆಲ್ ಇತಿಹಾಸ

ಐರ್ಲೆಂಡ್‌ ಪ್ರವಾಸದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ಭರ್ಜರಿ ಪ್ರದರ್ಶನ ನೀಡಿ 4 ವಿಕೆಟ್‌ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ (89 ರನ್‌) ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಇದೇ ಪಂದ್ಯದಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಜಾಕಬ್‌ ಬೆಥೆಲ್‌ ಇತಿಹಾಸವನ್ನು ನಿರ್ಮಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಐರ್ಲೆಂಡ್ ತಂಡದ ಪರ ಆರಂಭಿಕರಾದ ಪಾಲ್ ಸ್ಟಿರ್ಲಿಂಗ್ (34) ಹಾಗೂ ರಾಸ್ ಅಡೈರ್ (26) ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 57 ರನ್‌ ಸೇರಿಸಿತು. ಇನ್ನು ಮೂರನೇ ವಿಕೆಟ್‌ಗೆ ಹ್ಯಾರಿ ಟೆಕ್ಟರ್ ಹಾಗೂ ಲೋರ್ಕನ್ ಟಕರ್ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಪರಿಣಾಮ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಶ್ರಮಿಸಿತು.

Ireland vs England 1st T20 Phil Salt s 89 gives England a 4-wicket win

ಮೂರನೇ ವಿಕೆಟ್‌ಗೆ ಹ್ಯಾರಿ ಟೆಕ್ಟರ್ ಹಾಗೂ ಲೋರ್ಕನ್ ಟಕರ್ ಜೋಡಿ 68 ಎಸೆತಗಳಲ್ಲಿ 123 ರನ್‌ಗಳ ಜೊತೆಯಾಟವನ್ನು ನೀಡಿತು. ಲೋರ್ಕನ್ ಟಕರ್ 36 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ 55 ರನ್ ಬಾರಿಸಿ ಔಟ್ ಆದರು. ಹ್ಯಾರಿ ಟೆಕ್ಟರ್ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 61 ರನ್‌ ಸಿಡಿಸಿ ತಂಡಕ್ಕೆ ಆಧರವಾದರು. ಐರ್ಲೆಂಡ್‌ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 196 ರನ್‌ ಸೇರಿಸಿತು.

ಫಿಲ್‌ ಸಾಲ್ಟ್‌ ಅಬ್ಬರ

ಗುರಿಯನ್ನು ಹಿಂಬಾಲಿಸಿದ ಫಿಲ್ ಸಾಲ್ಟ್‌ ಹಾಗೂ ಜೋಸ್‌ ಬಟ್ಲರ್ (28) ಜೋಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಈ ಜೋಡಿ ಮೊದಲ ವಿಕೆಟ್‌ಗೆ 4.4 ಓವರ್‌ಗಳಲ್ಲಿ 74 ರನ್‌ ಗಳ ಜೊತೆಯಾಟದ ಕಾಣಿಕೆ ನೀಡಿತು. ನಾಯಕ ಜಾಕಬ್‌ ಬೆಥೆಲ್‌ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 24 ರನ್‌ ಸಿಡಿಸಿದರು. ಆಲ್‌ರೌಂಡರ್‌ ಸ್ಯಾಮ್ ಕರನ್‌ 3 ಸಿಕ್ಸರ್ ನೆರವಿನಿಂದ 27 ಕಲೆ ಹಾಕಿದರು. ಇನ್ನು ಆರಂಭಿಕ ಫಿಲ್ ಸಾಲ್ಟ್‌ ತಮ್ಮ ಭರ್ಜರಿ ಫಾರ್ಮ್ ಮುಂದುವರೆಸಿದರು. ಇವರು 10 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ 89 ರನ್‌ ಸಿಡಿಸಿ ಅಬ್ಬರಿಸಿದರು. ಪರಿಣಾಮ ಇಂಗ್ಲೆಂಡ್‌ 17.4 ಓವರ್‌ಗಳಲ್ಲಿ 6 ವಿಕೆಟ್‌ಗಳಲ್ಲಿ 197 ರನ್‌ ಸೇರಿಸಿ ಜಯ ಸಾಧಿಸಿತು.

Ireland vs England 1st T20 Phil Salt s 89 gives England a 4-wicket win

ಬೆಥೆಲ್‌ ಇತಿಹಾಸ

ಇಂಗ್ಲೆಂಡ್ ತಂಡದ ಜಾಕೋಬ್ ಬೆಥೆಲ್ 2014 ರಲ್ಲಿ ಇಂಗ್ಲೆಂಡ್ ಪರ ತಮ್ಮ T20 ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಲ್ಲಿಯವರೆಗೆ ಬೆಥೆಲ್ ಇಂಗ್ಲೆಂಡ್ ಪರ 15 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 314 ರನ್ ಗಳಿಸಿದ್ದು, ಎರಡು ಅರ್ಧಶತಕಗಳು ಸೇರಿವೆ. ಬೆಥೆಲ್‌, ಮಾಂಟಿ ಬೌಡೆನ್ ದಾಖಲೆಯನ್ನು ಅಳಿಸಿ ಹಾಕಿದರು. 21 ವರ್ಷ 329 ದಿನ ವಯಸ್ಸಿನಲ್ಲಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಿ ದಾಖಲೆ ಬರೆದರು. ಈ ಮೂಲಕ 136 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

Story first published: Thursday, September 18, 2025, 8:25 [IST]
Other articles published on Sep 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+