2ನೇ ಟಿ20ಐ : ಐರ್ಲೆಂಡ್ ವಿರುದ್ಧ ಭಾರತಕ್ಕೆ 143ರನ್ ಗಳ ಜಯ


ಡಬ್ಲಿನ್, ಜೂನ್ 29: ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ಇಂದು ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 143ರನ್ ಗಳ ಅಂತರದ ಬೃಹತ್ ಜಯ ದಾಖಲಿಸಿದೆ.
ಐರ್ಲೆಂಡ್ ಚೇಸ್ : ಪಾಲ್ ಸ್ಟರ್ಲಿಂಗ್(0) ಅವರು ಮೊದಲ ಓವರ್ ನಲ್ಲೇ ಸ್ಲಿಪ್ ನಲ್ಲಿದ್ದ ರೈನಾಗೆ ಕ್ಯಾಚಿತ್ತು ಉಮೇಶ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಮತ್ತೊಮ್ಮೆ ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ತಲಾ 3 ವಿಕೆಟ್ ಕಿತ್ತರು. 12.3 ಓವರ್ ಗಳಲ್ಲಿ 70ರನ್ನಿಗೆ ಆಲೌಟ್ ಆಯಿತು. ಉಮೇಶ್ ಯಾದವ್ 2, ಸಿದ್ದಾರ್ಥ್ ಹಾಗೂ ಹಾರ್ದಿಕ್ ತಲಾ 1 ವಿಕೆಟ್ ಗಳಿಸಿದರು.
ಭಾರತದ ಇನ್ನಿಂಗ್ಸ್: ನಾಯಕ ವಿರಾಟ್ ಕೊಹ್ಲಿ ಅವರು ಕೆಎಲ್ ರಾಹುಲ್ ಜತೆ ಇನ್ನಿಂಗ್ಸ್ ಆರಂಭಿಸಿದ್ದು ವಿಶೇಷ. ಆದರೆ, ತಂಡದ ಮೊತ್ತ 22ರನ್ ಆಗಿದ್ದಾಗ ಭಾರಿ ಹೊಡೆತಕ್ಕೆ ಯತ್ನಿಸಿದ ಕೊಹ್ಲಿ ಕ್ಯಾಚಿತ್ತು ಹೊರ ನಡೆದರು. ಕೊಹ್ಲಿ ಗಳಿಸಿದ್ದು 9ರನ್ ಮಾತ್ರ.
ಕೆಎಲ್ ರಾಹುಲ್ 70ರನ್ (36 ಎಸೆತಗಳು, 3 ಬೌಂಡರಿ, 6 ಸಿಕ್ಸರ್), ಸುರೇಶ್ ರೈನಾ 69ರನ್(45ಎಸೆತಗಳು, 5 ಬೌಂಡರಿ, 3 ಸಿಕ್ಸರ್), ಮನೀಶ್ ಪಾಂಡೆ 21ರನ್ (20ಎಸೆತ), ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 4 ಸಿಕ್ಸರ್ ಇದ್ದ 32ರನ್ ಸಿಡಿಸಿ, ತಂಡದ ಮೊತ್ತ 313/4 ಗಳಿಸುವಂತೆ ಮಾಡಿದರು.
ಎರಡನೇ ಟಿ20ಐ ಪಂದ್ಯದಲ್ಲೂ ಟಾಸ್ ಗೆದ್ದ ಐರ್ಲೆಂಡ್ ನಾಯಕ ಗ್ಯಾರಿ ವಿಲ್ಸನ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದೆ. ಕೆಎಲ್ ರಾಹುಲ್, ಉಮೇಶ್ ಯಾದವ್, ಸಿದ್ದಾರ್ಥ್ ಕೌಲ್, ದಿನೇಶ್ ಕಾರ್ತಿಕ್ ಕಣಕ್ಕಿಳಿದಿದ್ದಾರೆ.
ಇದೇ ಮೊದಲ ಬಾರಿಗೆ ಭಾರತ ಮತ್ತು ಐರ್ಲೆಂಡ್ ಟಿ 20 ಸರಣಿ ಆಡುತ್ತಿವೆ. ಇದುವರೆಗೂ ಉಭಯ ತಂಡಗಳು ಟಿ 20ಯಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. 2009ರ ವಿಶ್ವಕಪ್ ಟಿ 20ಯಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಐರ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯವನ್ನು 76ರನ್ ಗಳಿಂದ ಗೆದ್ದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications