Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Irfan Pathan On Virat Kohli: ಸಚಿನ್ ತೆಂಡೂಲ್ಕರ್ ಕೂಡ ಇದೇ ರೀತಿ ಮಾಡುತ್ತಿದ್ದರು!

ಇಂಡಿಯನ್ ಪ್ರೀಮಿಯರ್ ಲೀಗ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲನೇ ಪಂದ್ಯದಲ್ಲೇ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ ಆರ್ ಸಿಬಿ ಗೆಲುವಿಗೆ ಪ್ರಮುಖ ಕಾರಣವಾದರು. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಜೋಫ್ರಾ ಆರ್ಚರ್ ವಿರುದ್ಧ ವಿರಾಟ್ ಕೊಹ್ಲಿ ಆಡಿದ ಇನ್ನಿಂಗ್ಸ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

172 ರನ್‌ಗಳ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ಕೊಹ್ಲಿ ಮತ್ತು ಡುಪ್ಲೆಸಿಸ್ ಅಮೋಘ ಅರ್ಧಶತಕ ಗಳಿಸಿದರು. ಡುಪ್ಲೆಸಿಸ್ 43 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ಸಹಿತ 73 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿ ಮಿಂಚಿದರು. ಫಾಫ್ ಡು ಪ್ಲೆಸಿಸ್ ಜೊತೆಗೂಡಿ ಕೊಹ್ಲಿ 148 ರನ್ ಆರಂಭಿಕ-ವಿಕೆಟ್ ಜೊತೆಯಾಟ ಆಡಿದರು. ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಇನ್ನೂ 22 ಎಸೆತಗಳು ಬಾಕಿ ಇರುವಂತೆಯೇ ಜಯ ತಂದುಕೊಟ್ಟರು.

Irfan Pathan on Virat Kohli

ಐಪಿಎಲ್ 2023ರ ತಮ್ಮ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಆಡಿದ ರೀತಿ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಪಂದ್ಯದ ನಂತರದ ಚರ್ಚೆಯ ಸಂದರ್ಭದಲ್ಲಿ, ಕಳೆದ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಹ್ಯಾರಿಸ್ ರೌಫ್ ವಿರುದ್ಧ ಆಡಿದಂತೆ, ಆರ್ಚರ್ ವಿರುದ್ಧ ಆಡಿದ ಬಗ್ಗೆ ಪಠಾಣ್‌ ಅವರನ್ನು ಪ್ರಶ್ನಿಸಲಾಯಿತು.

ಇದಕ್ಕೆ ಉತ್ತರ ನೀಡಿದ ಪಠಾಣ್ "ಶ್ರೇಷ್ಠ ಆಟಗಾರರು ಹೀಗೆ ಮಾಡುತ್ತಾರೆ. ಸಚಿನ್ ತೆಂಡೂಲ್ಕರ್ ಕೂಡ ಹೀಗೆ ಮಾಡುತ್ತಿದ್ದರು. ಎದುರಾಳಿ ತಂಡದ ದೊಡ್ಡ ಬೌಲರ್‌ಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದರು, ಗ್ಲೆನ್ ಮೆಕ್‌ಗ್ರಾತ್ ಅಥವಾ ಶೇನ್ ವಾರ್ನ್ ವಿರುದ್ಧ ಆಕ್ರಮಣಕಾರಿ ಆಟವಾಡುತ್ತಿದ್ದರು. ಅದನ್ನು ಹಲವು ಬಾರಿ ನೋಡಿದ್ದೇವೆ. ವಿರಾಟ್ ಕೊಹ್ಲಿ ಕೂಡ ಅದೇ ನಿಲುವಿನ ಆಟಗಾರ. ಅದೇ ಕಾರಣಕ್ಕೆ ಸವಾಲನ್ನು ಎದುರಿಸಿದಾಗ ಇನ್ನೂ ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಜೋಫ್ರಾ ಆರ್ಚರ್ ಅವರ ಮೊದಲ ಎಸೆತದಲ್ಲಿ ಕೈಬಿಟ್ಟ ರಿಟರ್ನ್ ಕ್ಯಾಚ್ ಅನ್ನು ಕೈ ಬಿಟ್ಟಿದ ನಂತರ, ಕೊಹ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿದರು. ಜೋಫ್ರಾ ಆರ್ಚರ್ ಗೆ ಒಂದೇ ಪಂದ್ಯದಲ್ಲಿ ಬ್ಯಾಟರ್ ಒಬ್ಬ 28 ರನ್ ಗಳಿಸಿದ್ದು, ಇದೇ ಮೊದಲ ಬಾರಿ. "ಜೋಫ್ರಾ ಆರ್ಚರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಮುಖಾಮುಖಿಯನ್ನು ವೀಕ್ಷಿಸಲು ನಾನು ವೈಯಕ್ತಿಕವಾಗಿ ಉತ್ಸುಕನಾಗಿದ್ದೆ. ವಿರಾಟ್ ಕೊಹ್ಲಿ ಈ ಬಾರಿ ಆ ಸ್ಪರ್ಧೆಯನ್ನು ಗೆದ್ದರು. ಮೊದಲ ಎಸೆತದಲ್ಲಿ ಆರ್ಚರ್ ಗೆ ಅವಕಾಶವಿತ್ತು ಆದರೆ ನಂತರ ಕೊಹ್ಲಿ ಹಿಂದೆ ನೋಡಲಿಲ್ಲ. ಅವರ ಬೌಲಿಂಗ್‌ನಲ್ಲಿ ಎರಡು ಬೌಂಡರಿಗಳು ಮತ್ತು ಸಿಕ್ಸರ್‌ಗಳನ್ನು ಹೊಡೆದರು." ಎಂದು ಹೇಳಿದರು.

Irfan Pathan on Virat Kohli

ಈ ಆವೃತ್ತಿಯಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ

"ವಿರಾಟ್ ಕೊಹ್ಲಿ ಭಾರತದ ಬಹುದೊಡ್ಡ ಸೂಪರ್‌ಸ್ಟಾರ್ ಮತ್ತು ಅವರು ಈಗ ಮಿಂಚುತ್ತಿದ್ದಾರೆ. ಅವರು ರನ್ ಗಳಿಸಲಿಲ್ಲ, ಚೆಂಡನ್ನು ಚೆನ್ನಾಗಿ ಹೊಡೆಯಲಿಲ್ಲ ಎಂದು ಎಲ್ಲರೂ ಸಹಾನುಭೂತಿ ಹೊಂದಿದ್ದರು, ಆದರೆ ಅವರು ಎಲ್ಲವನ್ನೂ ಬಿಟ್ಟು ಮುಂದೆ ಸಾಗಿದ್ದಾರೆ." ಎಂದು ಪಠಾಣ್ ಹೇಳಿದರು.

"ಕಳೆದ ವರ್ಷ ಮತ್ತು ಈ ವರ್ಷದ ನಡುವಿನ ಟಿ20 ಕ್ರಿಕೆಟ್‌ನಲ್ಲಿ ಅವರು ಸರಾಸರಿ 70 ರಲ್ಲಿ ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೊದಲ ಶತಕ ಗಳಿಸಿದರು. ಈ ಐಪಿಎಲ್‌ನಲ್ಲಿ ಆ ಫಾರ್ಮ್‌ ಅನ್ನು ಕಾಯ್ದುಕೊಳ್ಳುತ್ತಾರೆ. ಆರ್‌ಸಿಬಿ ತಂಡಕ್ಕೆ ಮಾತ್ರವಲ್ಲ, ಐಪಿಎಲ್ ಮತ್ತು ಕ್ರಿಕೆಟ್ ಅಭಿಮಾನಿಗಳಿಗೂ ಇದು ದೊಡ್ಡ ಸುದ್ದಿ" ಎಂದು ಇರ್ಫಾನ್ ಪಠಾಣ್ ಹೇಳಿದರು.

Story first published: Monday, April 3, 2023, 15:11 [IST]
Other articles published on Apr 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+