ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಟಿ20 ಕ್ರಿಕೆಟ್‌ನಲ್ಲಿ ಮಿಂಚುವ ತುಡಿತದಲ್ಲಿ ಇರ್ಫಾನ್‌ ಪಠಾಣ್‌!

ಕೋಟಿ ನಿರೀಕ್ಷೆಯಲ್ಲಿ ಭಾರತೀಯ ಕ್ರಿಕೆಟಿಗ..!
Irfan Pathan part of CPL 2019 player draft

ಹೊಸದಿಲ್ಲಿ, ಮೇ 17: ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಮರೆಯಾಗಿರುವ ಭಾರತ ಕ್ರಿಕೆಟ್‌ ತಂಡದ ನಿರ್ಲಕ್ಷಿತ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಮರಳಿ ಟಿ20 ಕ್ರಿಕೆಟ್‌ನಲ್ಲಿ ಮಿಂಚುವ ತುಡಿತ ಹೊಂದಿದ್ದಾರೆ.

ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಂತಹ ಜಾಗತಿಕ ಮಟ್ಟದ ಐಶಾರಾಮಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಇದೀಗ ಇರ್ಫಾನ್‌ ಪಠಾಣ್‌ ಯಾವ ತಂಡಕ್ಕೂ ಬೇಡವಾಗಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕೆಟ್‌ ಕಾಮೆಂಟರಿಯಲ್ಲಿ ಕಾಣಿಸಿಕೊಂಡಿರುವ ಇರ್ಫಾನ್‌, ಇನ್ಮುಂದೆ ಕ್ರಿಕೆಟ್‌ ಆಡುವುದಿಲ್ಲವೇನೋ ಎಂಬುದು ಅವರ ಅಭಿಮಾನಿಗಳ ಲೆಕ್ಕಾಚಾರವಾಗಿತ್ತು.

 ಅಭ್ಯಾಸಕ್ಕೆ ತಡವಾದರೆ 10 ಸಾವಿರ ರೂ. ದಂಡ ವಿಧಿಸುತ್ತಿದ್ದ ಧೋನಿ: ಅಪ್ಟನ್‌ ಅಭ್ಯಾಸಕ್ಕೆ ತಡವಾದರೆ 10 ಸಾವಿರ ರೂ. ದಂಡ ವಿಧಿಸುತ್ತಿದ್ದ ಧೋನಿ: ಅಪ್ಟನ್‌

ಆದರೀಗ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿರುವ 34 ವರ್ಷದ ಬರೋಡಾ ಆಲ್‌ರೌಂಡರ್‌, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌(ಸಿಪಿಎಲ್‌)ನಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿರುವ ಒಟ್ಟು 536 ಮಂದಿ ಆಟಗಾರರ ಪೈಕಿ ಇರ್ಫಾನ್‌ ಏಕಮಾತ್ರ ಭಾರತೀಯ ಆಟಗಾರನಾಗಿರುವುದು ವಿಶೇಷ.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!

ಆದರೆ, ಪಾಲ್ಗೊಳ್ಳಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಭ್ಯಂತರವಿಲ್ಲ ಎಂದು 'ಎನ್‌ಒಸಿ' ನೀಡಿದರಷ್ಟೇ ಇರ್ಫಾನ್‌ಗೆ ಸಿಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಗಲಿದೆ. ಸದ್ಯ ಬಿಸಿಸಿಐ ಭಾರತೀಯ ಆಟಗಾರರಿಗೆ ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳದಂತೆ ಅತ್ಯಂತ ಕಠಿಣ ನೀತಿ ನಿಯಮಗಳನ್ನು ಹೊಂದಿದೆ.

ಸಿಪಿಎಲ್‌ ಟೂರ್ನಿಗೆ ಲಭ್ಯವಿರುವ ಅಟಗಾರರ ಅಂತಿಮ ಪಟ್ಟಿಯನ್ನು ಮೇ 22ರಂದು ಲಂಡನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಇರ್ಫಾನ್‌ ಪಠಾಣ್‌ ಅವರ ಹೆಸರು ಟೂರ್ನಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ.

ಭಾರತ ವಿಶ್ವಕಪ್‌ ತಂಡದಲ್ಲಿ ಇದೊಂದು ಕೊರತೆ ಇದೆ: ಗೌತಮ್‌ ಗಂಭೀರ್‌ಭಾರತ ವಿಶ್ವಕಪ್‌ ತಂಡದಲ್ಲಿ ಇದೊಂದು ಕೊರತೆ ಇದೆ: ಗೌತಮ್‌ ಗಂಭೀರ್‌

ಭಾರತ ಟೆಸ್ಟ್‌ ತಂಡದ ಪರ 100ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಅನುಭವ ಹೊಂದಿರುವ ಇರ್ಫಾನ್‌, 2012ರ ಬಳಿಕ ಭಾರತ ತಂಡವನ್ನು ಟಿ20 ಮಾದರಿಯಲ್ಲಿ ಪ್ರತಿನಿಧಿಸಿಲ್ಲ. ಕಳೆದ ಎರಡು ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲೂ ಅವರಿಗೆ ಯಾವುದೇ ತಂಡಗಳಲ್ಲಿ ಅವಕಾಶ ಲಭ್ಯವಾಗಿಲ್ಲ. 2017ರ ಆವೃತ್ತಿಯಲ್ಲಿ ರೈಸಿಂಗ್‌ ಪುಣೆ ಸೂಪರ್‌ ಜಯಂಟ್ಸ್‌ ತಂಡದ ಪರ ಕೇವಲ ಒಂದು ಪಂದ್ಯವನ್ನಾಡಿದ್ದರು. 2016ರಲ್ಲಿ ಗುಜರಾತ್‌ ಲಯನ್ಸ್‌ ತಂಡವನ್ನು ಪ್ರತಿನಿಧಿಸಿ 4 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

ಸಿಎಸ್‌ಕೆ ಅಭಿಮಾನಿಗಳಿಗೆ ಆಸ್ಟ್ರೇಲಿಯಾದಿಂದ ಸಂದೇಶ ರವಾನಿಸಿದ ವ್ಯಾಟ್ಸನ್‌!ಸಿಎಸ್‌ಕೆ ಅಭಿಮಾನಿಗಳಿಗೆ ಆಸ್ಟ್ರೇಲಿಯಾದಿಂದ ಸಂದೇಶ ರವಾನಿಸಿದ ವ್ಯಾಟ್ಸನ್‌!

ಇತ್ತೀಚೆಗಷ್ಟೇ ಡೋಪಿಂಗ್‌ ಟೆಸ್ಟ್‌ ವೇಳೆ ರಕ್ತದ ಮಾದರಿಯಲ್ಲಿ ನಿಷೇಧಿತ ಮದ್ದಿನ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ವಿಶ್ವಕಪ್‌ ತಂಡದಿಂದ ಹೊರಬಿದ್ದ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌, ಬಾಂಗ್ಲಾದೇಶದ ಸ್ಟಾರ್‌ ಆಲ್‌ರೌಂಡರ್‌ ಶಾಕಿಬ್‌ ಅಲ್‌ ಹಸನ್‌, ಅಫಘಾನಿಸ್ತಾನದ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌, ಇಂಗ್ಲೆಂಡ್‌ ಯುವ ವೇಗಿ ಜೋಫ್ರಾ ಆರ್ಚರ್‌ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಳ್ಳಲಿರುವ ವಿದೇಶಿ ಸೂಪರ್‌ಸ್ಟಾರ್‌ ಆಟಗಾರರಾಗಿದ್ದಾರೆ.

ಧೋನಿ, ರೋಹಿತ್‌ ಜೊತೆಗೂಡಿ ವಿಶ್ವಕಪ್‌ಗೆ ರಣತಂತ್ರ ರಚಿಸಲಿರುವ ಕೊಹ್ಲಿಧೋನಿ, ರೋಹಿತ್‌ ಜೊತೆಗೂಡಿ ವಿಶ್ವಕಪ್‌ಗೆ ರಣತಂತ್ರ ರಚಿಸಲಿರುವ ಕೊಹ್ಲಿ

ಇದೇ ವೇಳೆ ವಿಂಡೀಸ್‌ನ ದೈತ್ಯ ಆಟಗಾರರಾದ ಆಂಡ್ರೆ ರಸೆಲ್‌, ಸುನಿಲ್‌ ನರೇನ್‌, ಶಿಮ್ರಾನ್‌ ಹೆಟ್ಮಾಯೆರ್‌ ಮತ್ತು ಶೇಯ್‌ ಹೋಪ್‌ ಕೂಡ ಸಿಪಿಎಲ್‌ ಕಣದಲ್ಲಿದ್ದಾರೆ.

Story first published: Friday, May 17, 2019, 13:01 [IST]
Other articles published on May 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X