Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ವರ್ಣಭೇದ: ಸಾಮಿ ಆರೋಪಕ್ಕೆ ಬಾಯ್ತೆರೆದ ಪಾರ್ಥಿವ್, ಪಠಾಣ್

Irfan Pathan, Parthiv Patel open up on Darren Sammy’s racism allegations in IPL

ನವದೆಹಲಿ, ಜೂನ್ 8: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಆಡುತ್ತಿದ್ದಾಗ ತಾನು ಮತ್ತು ಶ್ರೀಲಂಕಾ ಆಲ್ ರೌಂಡರ್ ತಿಸರ ಪೆರೆರ ವರ್ಣಭೇದ ನೀತಿ ಎದುರಿಸಬೇಕಾಗಿ ಬಂದಿತ್ತು ಎಂದು ವೆಸ್ಟ್ ಇಂಡೀಸ್ ಮಾಜಿ ಆಟಗಾರ ಡ್ಯಾರೆನ್ ಸಾಮಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ಎಸ್‌ಆರ್‌ಎಚ್‌ನಲ್ಲಿದ್ದಾಗ ನನ್ನನ್ನು ಮತ್ತು ಪೆರೆರ ಅವರನ್ನು 'ಕಾಲು' ಅಂತ ಕರೆಯುತ್ತಿದ್ದರು. ಅದರ ಅರ್ಥವೇನೆಂದು ಗೊತ್ತಾದಾಗ ನನಗೆ ತುಂಬಾ ಕೋಪ ಬಂದಿತ್ತು ಎಂದು ಕೆರಿಬಿಯನ್ ಆಟಗಾರ ಸಮಿ ಮಾಡಿರುವ ಆರೋಪವನ್ನು ಸಾಮಿಯ ಜೊತೆ ಎಸ್‌ಆರ್‌ಎಚ್ ತಂಡದಲ್ಲಿದ್ದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್ ಮತ್ತು ವೇಣುಗೋಪಾಲ್ ರಾವ್ ನಿರಾಕರಿಸಿದ್ದಾರೆ.

'ಇಂಥ (ಅವಹೇಳನಕಾರಿ) ಪದಗಳನ್ನು ಬಳಸಿ ಸಾಮಿಯನ್ನು ಕರೆಯುತ್ತಿದ್ದುದನ್ನು ನಾನು ಕೇಳಿಲ್ಲ,' ಎಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ. ಈಗ ಆಂಧ್ರ ಕ್ರಿಕೆಟ್ ನಿರ್ದೇಶಕರಾಗಿರುವ ವೇಣುಗೋಪಾಲ್ ಕೂಡ, 'ನನಗಿದರ ಬಗ್ಗೆ ಗೋತ್ತೇ ಇಲ್ಲ,' ಎಂದು ಪ್ರತಿಕ್ರಿಯಿಸಿದ್ದಾರೆ.

ಎಸ್‌ಆರ್‌ಎಚ್‌ನಲ್ಲಿ ಇಂಥ ಸಂಗತಿಗಳ ಬಗ್ಗೆ ಚರ್ಚೆ ನಡೆದಿರುವುದರ ಬಗ್ಗೆ ನನಗೂ ಗೊತ್ತಿಲ್ಲ ಎಂದು ಇರ್ಫಾನ್ ಪಠಾಣ್ ಕೂಡ ಹೇಳಿದ್ದಾರೆ. ಆದರೆ ದೇಸಿ ಕ್ರಿಕೆಟ್‌ನಲ್ಲಿ ಕೆಲ ಆಟಗಾರರ ಮೇಲೆ ಜನಾಂಗೀಯ ನಿಂದನೆ ಮಾಡುತ್ತಿದ್ದುದನ್ನು ಕೇಳಿರುವುದಾಗಿ ಪಠಾಣ್ ಹೇಳಿಕೊಂಡಿದ್ದಾರೆ. ಅಂದ್ಹಾಗೆ ವರ್ಣಬೇಧ ನೀತಿಯ ಬಗ್ಗೆ ಆರೋಪಿಸಿರುವ ಸಾಮಿ, ಎಸ್‌ಆರ್‌ಎಚ್‌ ಪರ 2013-14ರಲ್ಲಿ 26 ಪಂದ್ಯಗಳನ್ನಾಡಿದ್ದರು.

Story first published: Tuesday, June 9, 2020, 10:42 [IST]
Other articles published on Jun 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+