ನಿವೃತ್ತಿ ಹೇಳಿದ ಆಟಗಾರರಿಗೆ ವಿದಾಯ ಪಂದ್ಯ: ಪಠಾಣ್ ನೀಡಿದ ಉಪಾಯಕ್ಕೆ ಜೈ ಎಂದ ನೆಟ್ಟಿಗರು

ಟೀಮ್ ಇಂಡಿಯಾದಲ್ಲಿ ಆಡಿದ ಬಹುತೇಕ ಆಟಗಾರರು ವಿದಾಯ ಪಂದ್ಯವಿಲ್ಲದೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಮೈದಾನದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ವಿದಾಯವನ್ನು ಹೇಳುವ ಅವಕಾಶ ಕೆಲವು ಆಟಗಾರರಿಗೆ ಮಾತ್ರವೇ ಲಭಿಸಿದೆ. ಹೀಗಾಗಿ ಈ ವಿಚಾರವಾಗಿ ಬಿಸಿಸಿಐ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 15 ರಂದು ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟಿಗರಾದ ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ನಿವೃತ್ತಿ ಹೇಳಿದ ಬಳಿಕ ಈ ವಿದಾಯ ಪಂದ್ಯದ ಬಗ್ಗೆ ಮತ್ತೊಮ್ಮೆ ಚರ್ಚೆಗಳು ಆರಂಭವಾಗಿದೆ. ಈ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ವಿದಾಯ ಪಂದ್ಯವನ್ನಾಡದೇ ನಿವೃತ್ತಿ ಹೇಳಿದ ಎಲ್ಲಾ ಆಟಗಾರರಿಗೆ ಗೌರವ ನೀಡುವ ಸಲುವಾಗಿ ಅತ್ಯುತ್ತಮ ಸಲಹೆಯೊಂದನ್ನು ನೀಡಿದ್ದಾರೆ. ಇರ್ಫಾನ್ ಪಠಾಣ್ ನೀಡಿದ ಈ ಸಲಹೆಗೆ ಟ್ವಿಟ್ಟರ್‌ನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಇದನ್ನು ಪರಿಗಣಿಸಿ ಎಂದು ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಹಾಗಾದರೆ ಇರ್ಫಾನ್ ಪಠಾಣ್ ನೀಡಿದ ಸಲಹೆಯೇನು? ಬಿಸಿಸಿಐ ಇದನ್ನು ಪರಿಗಣಿಸುತ್ತಾ? ಮುಂದೆ ಓದಿ..

ನಿವೃತ್ತಿ ಹೇಳಿದ ಆಟಗಾರರಿಗೆ ವಿದಾಯ ಪಂದ್ಯ
ಟೀಮ್ ಇಂಡಿಯಾದಲ್ಲಿ ಹಲವಾರು ಕ್ರಿಕೆಟಿಗರು ವಿದಾಯ ಪಂದ್ಯವನ್ನಾಡದೆ ನಿವೃತ್ತಿಯನ್ನು ಹೇಳಿದ್ದಾರೆ. ಅಂತಾ ಎಲ್ಲಾ ಆಟಗಾರರನ್ನು ಸೇರಿಸಿಕೊಂಡು ವಿದಾಯ ಪಂದ್ಯವನ್ನು ಏರ್ಪಡಿಸಬೇಕು ಎಂಬುದು ಇರ್ಫಾನ್ ಪಠಾಣ್ ನೀಡಿದ ಸಲಹೆ. ಈ ಪಂದ್ಯವನ್ನು ಟ್ಯಾರಿಟಿ ಪಂದ್ಯವನ್ನಾಗಿ ಆಯೋಜನೆ ಮಾಡಬಹದು ಎಂದು ಪಠಾಣ್ ಸಲಹೆಯನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ಜೊತೆಗೆ ನಿವೃತ್ತ ಆಟಗಾರರ ತಂಡದ ಪಂದ್ಯ
ವಿದಾಯ ಪಂದ್ಯವನ್ನು ಪಡೆಯದೆ ನಿವೃತ್ತರಾದ ಆಟಗಾರರ ತಂಡ ಹಾಲಿ ಭಾರತೀಗ ಕ್ರಿಕೆಟ್ ತಂಡವನ್ನು ಎದುರಿಸಲಿ ಎಂಬುದು ಇರ್ಫಾನ್ ಪಠಾಣ್ ನೀಡಿದ ಮತ್ತೊಂದು ಸಲಹೆ. ಈ ಸಲಹೆಯನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ. ಈ ಮನವಿಯನ್ನು ಪರಿಗಣಿಸಿದರೆ ಮತ್ತೊಮ್ಮೆ ನೆಚ್ಚಿನ ಆಟಗಾರರನ್ನು ನೋಡಬಹುದು ಎಂಬುದು ಅಭಿಮಾನಿಗಳ ತವಕ.

ತಂಡವನ್ನೂ ಘೋಷಿಸಿದ್ದಾರೆ ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್ ಈ ಸಲಹೆಯನ್ನು ನೀಡಿದ್ದು ಮಾತ್ರವಲ್ಲ. ನಿವೃತ್ತರಾಗಿರುವ ಆಟಗಾರರ ತಂಡವನ್ನೂ ಅವರು ಘೋಷಿಸಿದ್ದಾರೆ. ವಿವಿಎಸ್ ಲಕ್ಷ್ಮಣ್‌ರಿಂದ ಹಿಡಿದು ಸುರೇಶ್ ರೈನಾ ವರೆಗೆ ವಿದಾಯ ಪಂದ್ಯವಿಲ್ಲದೆ ನಿವೃತ್ತಿ ಹೇಳಿದ ಆಟಗಾರರ ಪೂರ್ಣ ಪ್ರಮಾಣದ ತಂಡ ಇದಾಗಿದೆ.

ಪಠಾಣ್ ಹೆಸರಿಸಿದ ತಂಡ
ಪಠಾಣ್ ಹೆಸರಿಸಿದ ತಂಡ ಹೀಗಿದೆ: ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಜಹೀರ್ ಖಾನ್, ಪ್ರಗ್ಯಾನ್ ಒಝಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications