IPL 2023: ಈ ಗೆಲುವಿನ ಶ್ರೇಯಸ್ಸು ಸಂಪೂರ್ಣ ಆತನಿಗೆ ನೀಡಬೇಕು: ಮುಂಬೈ ಗೆಲುವಿನ ಬಳಿಕ ಪಠಾಣ್ ಹೇಳಿಕೆ
ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇಆಫ್‌ನಲ್ಲಿ ಮೊದಲ ಗೆಲುವು ಸಾಧಿಸಿದ್ದು 6 ಟ್ರೋಫಿ ಗೆಲ್ಲುವ ಕನಸಿಗೆ ಮತ್ತಷ್ಟು ಹತ್ತಿರವಾಗಿದೆ. ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ ಇದೀಗ ಕ್ವಾಲಿಫಯರ್ ಪಂದ್ಯಕ್ಕೆ ಸಿದ್ಧವಾಗಿದೆ. ಆದರೆ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಓರ್ವ ಆಟಗಾರನ ಪ್ರದರ್ಶನದ ಬಗ್ಗೆ ಎಲ್ಲೆಡೆಯಿಂದಲೂ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಈ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ದೊಡ್ಡ ಮೊತ್ತದ ಗುರಿಯನ್ನು ನಿಗದಿಪಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಯುವ ಆಟಗಾರ ಆಕಾಶ್ ಮಧ್ವಲ್ ಭಾರೀ ದೊಡ್ಡ ಆಘಾತ ನೀಡಿದರು. ಈ ಆಘಾತದಿಂದ ಚೇತರಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸಾಧ್ಯವಾಗಲೇ ಇಲ್ಲ.

ಈ ಪಂದ್ಯದಲ್ಲಿ ಯುವ ಆಟಗಾರ ಆಕಾಶ್ ಮಧ್ವಲ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ ಐದು ರನ್‌ಗಳನ್ನು ನೀಡಿ 5 ವಿಕೆಟ್ ಪಡೆದುಕೊಂಡು ಅತ್ಯದ್ಭುತ ಬೌಲಿಂಗ್ ದಾಳಿ ನಡೆಸಿದ್ದಾರೆ. ಈ ಅದ್ಭುತ ದಾಳಿಯಿಂದಾಗಿ ಲ್ಕನೋ ಸೂಪರ್ ಜೈಂಟ್ಸ್ ತಂಡ ಯಾವ ಹಂತದಲ್ಲಿಯೂ ತಿರುಗಿ ಬೀಳಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಸಂಪೂರ್ಣ ಶ್ರೇಯಸ್ಸು ಆಕಾಶ್ ಮಧ್ವಲ್‌ಗೆ ಸೇರಬೇಕು ಎಂದಿದ್ದಾರೆ ಇರ್ಫಾನ್ ಪಠಾಣ್.
"ಇಂತಾ ಅತ್ಯಂತ ಒತ್ತಡದ ಪಂದ್ಯದಲ್ಲಿ ಅನ್‌ಕ್ಯಾಪ್‌ಡ್ ಆಟಗಾರನೋರ್ವ ಪ್ರಾಬಲ್ಯಮರೆಯುವುದನ್ನು ನಾವು ಈವರೆಗೆ ಕಂಡಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಆಕಾಶ್ ಮಧ್ವಲ್ 9 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಕ್ವಾಲಿಫಯರ್ ಪಂದ್ಯದಲ್ಲಿ ಆಡುವುದಕ್ಕೆ ಎಲ್ಲಾ ಶ್ರೇಯಸ್ಸು ಆತನಿಗೆ ದೊರೆಯಬೇಕು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್.
ಇನ್ನು ಮತ್ತೋರ್ವ ಮಾಜಿ ಆಟಗಾರ ಮೊಹಮಕ್ಮದ್ ಕೈಫ್ ಕೂಡ ಮಧ್ವಲ್ ಬೌಲಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರ ಬೌಲಿಂಗ್ ಶೈಲಿಗೆ ಮಧ್ವಲ್ ಹೋಲಿಕೆಯಾಗುತ್ತಾರೆ ಎಂದಿದ್ದಾರೆ. "ಆಕಾಶ್ ಬಹಳ ಕಷ್ಟವಾದ ಲೆಂತ್‌ನಲ್ಲಿ ಬೌಲಿಂಗ್ ದಾಳಿ ನಡೆಸುತ್ತಾರೆ. ಅವರ ಬೌಲಿಂಗ್ ಶೈಲಿ ಮೊಹಮ್ಮದ್ ಶಮಿ ರೀತಿಯಲ್ಲೇ ಇದೆ. ಅಂತಿಮ ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂತಾ ಆಟಗಾರ ದೊರೆತಿದ್ದಾರೆ. ಈತ ಬಹಳ ಎಲ್ಲಾ ಪಂದ್ಯಗಳಲ್ಲಿಯೂ ಆಡಬಲ್ಲ ಪರಿಣಾಮಕಾರಿ ಬೌಲರ್ ರೀತಿ ಕಾಣಿಸುತ್ತಿದ್ದಾರೆ" ಎಂದಿದ್ದಾರೆ ಮೊಹಮ್ಮದ್ ಕೈಫ್.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ ತಂಡ 8 ವಿಕೆಟ್ ಕಳೆದುಕೊಂಡು 182 ರನ್‌ಗಳನ್ನು ಗಳಿಸಿತು. ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್ ಹಾಗೂ ನೇಹಲ್ ವಧೇರಾ ಬ್ಯಾಟಿಂಗ್‌ನಲ್ಲಿ ಮಿಂಚಿದ ಪರಿಣಾಮವಾಗಿ ಮುಂಬೈ ಈ ಸವಾಲಿನ ಗುರಿಯನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಂದಿಟ್ಟಿತ್ತು. ನಂತರ ಬೌಲಿಂಗ್‌ನಲ್ಲಿ ಎಲ್‌ಎಸ್‌ಜಿ ತಂಡಕ್ಕೆ ಆಕಾಶ್ ಮಧ್ವಲ್ ಸತತವಾಗಿ ಆಘಾತ ನೀಡುತ್ತಾ ಸಾಗಿದರು. ಈ ಪಂದ್ಯದಲ್ಲಿ ಆಕಾಶ್ ಕೇವಲ ಐದು ರನ್‌ಗಳನ್ನು ನೀಡಿ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ತಮಡದ ಫೀಲ್ಡಿಂಗ್ ಕೂಡ ಈ ಪಂದ್ಯದಲ್ಲಿ ಅತ್ಯದ್ಭುತವಾಗಿದ್ದು ಮೂರು ಆಟಗಾರರು ರನೌಟ್ ಮೂಲಕ ಫೆವಿಲಿಯನ್ ಸೇರಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications