IPL Auction: ಮಿಚೆಲ್ ಸ್ಟಾರ್ಕ್ ದುಬಾರಿ ಆಟಗಾರ ದಾಖಲೆಗೆ ಅಪಾಯ: ಇರ್ಫಾನ್ ಪಠಾಣ ಭವಿಷ್ಯ
ಐಪಿಎಲ್ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ಹರಾಜಿಗೆ ಎಲ್ಲ ತಂಡಗಳು ಭರದ ಸಿದ್ಧತೆಯನ್ನು ನಡೆಸಿವೆ. ಆಟಗಾರರ ಶಾರ್ಟ್ ಲಿಸ್ಟ್ ಸಹ ರೆಡಿ ಆಗಿದೆ. ಹರಾಜಿನಲ್ಲಿ ಯಾವ ಆಟಗಾರರನ್ನು ಟಾರ್ಗೆಟ್ ಮಾಡಬೇಕು ಎಂಬ ಬಗ್ಗೆ ಮಾಲೀಕರು ತಂತ್ರವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಈ ಹರಾಜಿಗೆ ಸಂಬಂಧ ಪಟ್ಟಂತೆ ಹಲವು ಸ್ಟಾರ್ ಆಟಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈಗ ಟೀಮ್ ಇಂಡಿಯಾದ ಮಾಜಿ ಪ್ಲೇಯರ್ ಇರ್ಫಾನ್ ಪಠಾಣ್ ಸಹ ತಮ್ಮ ಅನಿಸಿಕೆ ತಿಳಿಸಿದ್ದಾರೆ.
ಕ್ರಿಕೆಟ್ ತಜ್ಞರು ಹಾಗೂ ಮಾಜಿ ಆಟಗಾರು ಐಪಿಎಲ್ ಹರಾಜಿನಲ್ಲಿ ಯಾವ ತಂಡಗಳು ಯಾವ ಪ್ಲೇಯರ್ ಟಾರ್ಗೆಟ್ ಮಾಡಲಿವೆ ಎಂಬ ಬಗ್ಗೆ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಾರೆ. ಆದರೆ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮಿಚೆಲ್ ಸ್ಟಾರ್ಕ್ ದಾಖಲೆಗೆ ಅಪಾಯ ಇರುವುದಾಗಿ ತಿಳಿಸಿದ್ದಾರೆ.

ಇರ್ಫಾನ್ ಪಠಾಣ್ ಭವಿಷ್ಯ
ಕಳೆದ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಕೊಳ್ಳಲು ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ರೂಪಾಯಿ ಖರ್ಚ ಮಾಡಿದ್ದವು. ಇದು ಐಪಿಎಲ್ ಇತಿಹಾಸದಲ್ಲೇ ಯಾವುದೇ ಆಟಗಾರನ ಮೇಲಿನ ಅತಿ ದೊಡ್ಡ ಬಿಡ್. ಸ್ಟಾರ್ಕ್ ಅವರನ್ನು ಐಪಿಎಲ್‌ನ ದುಬಾರಿ ಆಟಗಾರ ಎಂದು ಕರೆಯಲಾಗುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದ್ದು, ಈ ಬಾರಿಯ ದುಬಾರಿ ಆಟಗಾರ ಯಾರು ಎಂಬ ಪ್ರಶ್ನೆಗೆ ಉತ್ತರ ಲಭಿಸಲಿದೆ. ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರತಿಕ್ರಿಯಿಸಿದ್ದಾರೆ.
ಸ್ಟಾರ್ಕ್ ದಾಖಲೆಗೆ ಅಪಾಯ
ಐಪಿಎಲ್ 2025 ಮೆಗಾ ಹರಾಜಿನ ಬಗ್ಗೆ ಇರ್ಫಾನ್ ಭವಿಷ್ಯ ನುಡಿದಿದ್ದಾರೆ. ಇರ್ಫಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಭವಿಷ್ಯ ನುಡಿದಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಪಠಾಣ್, ಈ ಬಾರಿಯ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ಕೊಳ್ಳಲು ಹಣವನ್ನು ಸುರಿಯಲಾಗುತ್ತದೆ. ಅಲ್ಲದೆ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ರಿಷಭ್ ಪಂತ್ ಮುರಿಯಬಲ್ಲರು ಎಂದು ತಿಳಿಸಿದ್ದಾರೆ. ಇರ್ಫಾನ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಿಷಭ್ ಪಂತ್ ಅವರನ್ನು ಕೊಳ್ಳಲು ಹಲವು ತಂಡಗಳು ಹಣವನ್ನು ಹೂಡಲಿವೆ. ಇವರು ತಂಡಕ್ಕೆ ಬಂದಲ್ಲಿ ಎಕ್ಸ್ ಫ್ಯಾಕ್ಟರ್ ಆಡ್ ಮಾಡುತ್ತಾರೆ. ಇವರು ಒಬ್ಬ ಉತ್ತಮ ನಾಯಕ, ಮಿಡ್ಲ್ ಆರ್ಡರ್ ಬ್ಯಾಟರ್, ಪ್ಲಸ್ ವಿಕೆಟ್ ಕೀಪರ್ ಆಗಿದ್ದರಿಂದ ಇವರಿಗೆ ಬೇಡಿಕೆ ಹೆಚ್ಚಿರುತ್ತದೆ. ಇವರಿಗೆ ಹಣವನ್ನು ಹೂಡಲು ಆರ್‌ಸಿಬಿ, ಸಿಎಸ್‌ಕೆ, ಪಂಜಾಬ್ ತಂಡಗಳು ಅಂಗಳದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆ ಇದೆ. ರಿಷಭ್ ಪಂತ್ ಅವರನ್ನು ಕೊಳ್ಳಲು ಡೆಲ್ಲಿ ಹಣ ಹೂಡುತ್ತದೋ ಇಲ್ಲವೋ ಎಂಬ ಬಗ್ಗೆಯೂ ನಿಖರ ಮಾಹಿತಿ ಇಲ್ಲ.
ಈ ಬಾರಿಯ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದ್ದು, ಅಭಿಮಾನಿಗಳ ಚಿತ್ತ ಕದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications