Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ತಂಡಕ್ಕೆ 2 ಬಾರಿ ಚಾಂಪಿಯನ್‌ ತೊಟ್ಟ ತೊಡಿಸಿದ ಪಾಟಿದಾರ್‌ ಟೀಮ್ ಇಂಡಿಯಾಕ್ಕೆ ಏಕೆ ಬೇಡ? ಕೋಚ್‌ಗೆ ಇರ್ಫಾನ್ ಪಠಾಣ್ ಪ್ರಶ್ನೆ

ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ನೀರಸ ಪ್ರದರ್ಶನ ನೀಡುತ್ತಿದೆ. ಮ್ಯಾಂಚೆಸ್ಟರ್‌ನಲ್ಲಿ ಟೀಮ್ ಇಂಡಿಯಾ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತು. ಟೀಮ್ ಇಂಡಿಯಾ ಸತತ ಮೂರು ಟಿ20 ಪಂದ್ಯಗಳನ್ನು ಸೋತಿದೆ. ಈಗಾಗಲೇ ಐರ್ಲೆಂಡ್ ವಿರುದ್ಧ ಭಾರತ 2-0 ಅಂತರದಿಂದ ಸರಣಿಯನ್ನು ಸೋತಿದೆ. ಈಗ, ಇಂಗ್ಲೆಂಡ್ ವಿರುದ್ಧ ಭಾರತದ ಸೋಲು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಭಾರತದ ಮಾಜಿ ಆಲ್‌ರೌಂಡರ್‌ ಇರ್ಫಾನ್ ಪಠಾಣ್ ತಿಳಿಸಿದ್ದಾರೆ.

ಟೀಮ್ ಇಂಡಿಯಾದಲ್ಲಿ ಸಾಲು ಸಾಲು ಎಡಗೈ ಆಟಗಾರರೇ ಇದ್ದಾರೆ. ಶ್ರೇಯಸ್ ಅಯ್ಯರ್ ಅವರನ್ನು ಹೊರತು ಪಡಿಸಿದರೆ ಉಳಿದ ಟಾಪ್ ಆರ್ಡರ್‌ ಬ್ಯಾಟರ್‌ಗಳು ಎಡಗೈನಿಂದ ಬ್ಯಾಟ್ ಮಾಡುತ್ತಾರೆ. ಇದು ಎದುರಾಳಿಗಳ ಲೆಕ್ಕಾಚಾರವನ್ನು ಸುಲಭಗೊಳಿಸುತ್ತಿದೆ ಎಂದು ಹಲವು ಪಂಡಿತರ ವಾದವಾಗಿದೆ. ಇದೇ ವೇಳೆ ಹಲವರು ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡದಿರುವುದಕ್ಕೆ ಪ್ರಶ್ನೆಗಳನ್ನು ಎತ್ತಿದ್ದಾರೆ.

Rajat Patidar

ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್‌ ಸಹ ಇದಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದಾರೆ. ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ ಸೇರುವುದರಿಂದ ಬ್ಯಾಟಿಂಗ್ ಕ್ರಮಾಂಕದಲ್ಲಿ ವೈವಿಧ್ಯತೆ ಬರುತ್ತದೆ ಎಂದು ಅವರು ತಿಳಿಸಿದ್ದಾರೆ. ಇವರು 19ನೇ ಆವೃತ್ತಿ ಐಪಿಎಲ್‌ನಲ್ಲಿ ಆಡಿದ 14ನೇ ಇನಿಂಗ್ಸ್‌ಗಳಲ್ಲಿ 192ರ ಸ್ಟ್ರೈಕ್ ರೇಟ್‌ನಲ್ಲಿ 501 ರನ್‌ ಕಲೆ ಹಾಕಿದ್ದಾರೆ. ಇವರು ಭರ್ಜರಿ ಪ್ರದರ್ಶನದ ಫಲವಾಗಿಯೂ ಇವರಿಗೆ ಭಾರತ ತಂಡದಲ್ಲಿ ಸ್ಥಾನ ಲಭಿಸಲಿಲ್ಲ. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಈಗ ಭಾರೀ ಪೈಪೋಟಿ ನಡೆಯುತ್ತಿದ್ದು, ಈ ವೇಳೆ ಇವರಿಗೆ ಅವಕಾಶ ನೀಡುವುದು ಕಷ್ಟವಾಗಿದೆ.

ವೈರಲ್ ಪೋಸ್ಟ್‌

ಭಾರತ ಟಿ20 ತಂಡದಲ್ಲಿ ಪ್ರಸ್ತುತ ಎಡಗೈ ಬ್ಯಾಟ್ಸ್‌ಮನ್‌ಗಳ ಸಂಖ್ಯೆಯನ್ನು ಗಮನಿಸಿದರೆ, ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲು ಇದು ಉತ್ತಮ ಅವಕಾಶ. ಮುಂದಿನ ಟಿ20 ವಿಶ್ವಕಪ್‌ಗೆ ಮೊದಲು ಪ್ರಯೋಗ ಮಾಡಲು ಟೀಮ್ ಇಂಡಿಯಾ ಇನ್ನೂ ಸಾಕಷ್ಟು ಸಮಯವನ್ನು ಹೊಂದಿರುವುದರಿಂದ ಅವರಿಗೆ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಇರ್ಫಾನ್ ಪಠಾಣ್ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

ಎಡಗೈ ಬ್ಯಾಟರ್‌ಗಳೇ ಹೆಚ್ಚು

ಟೀಮ್ ಇಂಡಿಯಾದಲ್ಲಿ ಸದ್ಯ ಎಡಗೈ ಬ್ಯಾಟರ್‌ಗಳ ಸಂಖ್ಯೆ ಹೆಚ್ಚಿದೆ. ಆರಂಭಿಕರಾದ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ, ಇಶಾನ್ ಕಿಶನ್‌, ಸೇರಿದಂತೆ ಹಲವು ಆಟಗಾರರು ಇದ್ದಾರೆ. ರಜತ್ ಪಾಟಿದಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದರಿಂದ ಇವರು ಎದುರಾಳಿಗೆ ಕಾಡಬಲ್ಲರು. ಇವರ ಬ್ಯಾಟಿಂಗ್‌ ತಂಡಕ್ಕೆ ಎಕ್ಸ್‌ ಫ್ಯಾಕ್ಟರ್ ಅಗಬಹುದಾಗಿದೆ. ಈಗ ತಂಡದ ಆಡಳಿತವು ರಜತ್ ಪಾಟಿದಾರ್ ಬಗ್ಗೆ ಏನು ಯೋಚಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ಜುಲೈ 7 ರಂದು ನಡೆಯಲಿದೆ.

Story first published: Sunday, July 5, 2026, 20:39 [IST]
Other articles published on Jul 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+