For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ಆಯ್ಕೆಯಾದ ಟಿ.ನಟರಾಜನ್‌ಗೆ ಪಠಾಣ್ ಸಂದೇಶ

Irfan Pathans Message To Natarajan After Maiden India Call-Up

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾರ್ಕರ್‌ಗಳ ಮೇಲೆ ಯಾರ್ಕರ್ ಎಸೆದು ಎದುರಾಳಿಯನ್ನು ಕಂಗೆಡಿಸಿದ ಬೌಲರ್ ಟಿ ನಟರಾಜನ್. ಸನ್‌ರೈಸರ್ಸ್ ಹೈದರಾಬಾದ್‌ ಪರವಾಗಿ ನಟರಾಜನ್ ಅದ್ಭುತ ಯಶಸ್ಸನ್ನು ಸಾಧಿಸಿದರು. ತನ್ನ ಶ್ರೇಷ್ಠ ಪ್ರದರ್ಶನದ ಕಾರಣಕ್ಕೆ ಅದ್ಭುತ ಉಡುಗೊರೆಯನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಗೆ ನಟರಾಜನ್ ಆಯ್ಕೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ನಟರಾಜನ್‌ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಲಹೆಯನ್ನು ನೀಡಿದ್ದಾರೆ. ನಟರಾಜ್ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿರುವ ಇರ್ಫಾನ್ ಪಠಾಣ್ ನಿಮ್ಮ ಕಠಿಣ ಪರಿಶ್ರಮವನ್ನು ಮುಂದಿವರಿಸಿ ಎಂದಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಮೊದಲಿಗೆ ಯುವ ಸ್ಪಿನ್ನರ್ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದರು. ಆದರೆ ವರುಣ್ ಗಾಯಗೊಂಡಿರುವ ಕಾರಣ ಆಸ್ಟ್ರೇಲಿಯಾ ಪ್ರವಾಸವನ್ನು ತಪ್ಪಿಸಿಕೊಂಡಿದ್ದಾರೆ. ಈ ಸ್ಥಾನಕ್ಕೆ ನಟರಾಜ್ ಅವರನ್ನು ಬಿಸಿಸಿಐ ಆಯ್ಕೆ ಮಂಡಳಿ ಸೋಮವಾರ ಆಯ್ಕೆ ಮಾಡಿದೆ.

ಟೀಮ್ ಇಂಡಿಯಾಗೆ ಚೊಚ್ಚಲ ಕರೆ ಬಂದಿರುವ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ನಟರಾಜನ್ ಅವರನ್ನು ಅಭಿನಂದಿಸಿದ್ದಾರೆ. ಟ್ವೀಟ್‌ನಲ್ಲಿ ಅವರು "ಕಠಿಣ ಪರಿಶ್ರಮವನ್ನು ಮುಂದುವರಿಸು, ವಿಶ್ವಾಸವನ್ನು ಕಳೆದುಕೊಳ್ಳಬೇಡ ಎಂಬುದು ನಟರಾಜನ್ ಅವರ ಕಥೆಯಾಗಿದೆ. ಅಭಿನಂದನೆಗಳು ಗೆಳೆಯಾ ನಿಮ್ಮ ಪ್ರಥಮ ಟೀಮ್ ಇಂಡಿಯಾ ಕರೆಗಾಗಿ" ಎಂದು ಪಠಾಣ್ ಟ್ವೀಟ್ ಮಾಡಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಟರಾಜನ್ 16 ವಿಕೆಟ್ ಪಡೆದು ಮಿಂಚಿದ್ದರು. ಯಾರ್ಕರ್ ಹಾಗೂ ಡೆತ್ ಓವರ್‌ನಲ್ಲಿ ನಿಂತ್ರಿತ ದಾಳಿಯ ಕಾರಣಕ್ಕೆ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

Story first published: Tuesday, November 10, 2020, 15:47 [IST]
Other articles published on Nov 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+