ವಿಶ್ವಕಪ್‌ನಲ್ಲಿ ಈತ 8ನೇ ಕ್ರಮಾಂಕದಲ್ಲಿ ಆಡುವುದು ಭಾರತಕ್ಕೆ ಅನಿವಾರ್ಯ ಎಂದ ಇರ್ಫಾನ್ ಪಠಾಣ್
ವಿಶ್ವಕಪ್‌ಗೆ ಟೀಮ್ ಇಂಡಿಯಾದ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ತಂಡ ಮುಂದಿನ ವಿಶ್ವಕಪ್ ಟೂರ್ನಿಗೆ ತಾನು ಸಿದ್ಧ ಎನ್ನುವುದನ್ನು ಸಾರಿದೆ. ಈ ಟೂರ್ನಿಯ ಮೂಲಕ ಟೀಮ್ ಇಂಡಿಯಾ ಆಡುವ ಕ್ರಮಾಂಕದಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ 8ನೇ ಕ್ರಮಾಂಖದ ಬಗ್ಗೆ ಇರ್ಫಾನ್ ಪಠಾಣ್ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಟೀಮ್ ಇಂಡಿಯಾದ 8ನೇ ಕ್ರಮಾಂಕದಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ ಆಡುವುದು ತಂಡಕ್ಕೆ ಅತ್ಯಂತ ಅನಿವಾರ್ಯ ಎಂದಿದ್ದಾರೆ ಇರ್ಪಾನ್ ಪಠಾಣ್. ಅಕ್ಷರ್ ಪಟೇಲ್ ಏಷ್ಯಾಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆಯಾದರೂ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಏಷ್ಯಾಕಪ್‌ನ ಫೈನಲ್ ಪಂದ್ಯದಿಂದ ಅಕ್ಷರ್ ಪಟೇಲ್ ಹೊರಬಿದ್ದಿದ್ದರು.

ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿರುವ ಪ್ರಾಥಮಿಕ 15ರ ಬಳಿಗದಲ್ಲಿ ಅಕ್ಷರ್ ಪಟೇಲ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಏಷ್ಯಾಕೊ್ ಟೂರ್ನಿಯಲ್ಲಿ ಅಕ್ಷರ್ ಗಾಯಕ್ಕೆ ತುತ್ತಾಗಿರುವ ಕಾರಣ ಮೆಗಾ ಟೂರ್ನಿಗೆ ಅವರು ಲಭ್ಯವಾಗಲಿದ್ದಾರೆಯೇ ಎನ್ನುವುದು ಇನ್ನೂ ಕೂಡ ಅನುಮಾನವಾಗಿದೆ. ಹೀಗಾಗಿ ತಂಡ ಮುಖ್ಯ ಟೂರ್ನಿಗೆ ಗುಣಮಟ್ಟದ ಆಟಗಾರನ ಸೇವೆಯನ್ನು ಕಳೆದುಕೊಳ್ಳಲಿದೆಯಾ ಎನ್ನುವ ಆತಂಕ ಉಂಟಾಗಿದೆ.
ಅಕ್ಷರ್ ಪಟೇಲ್ ಬಗ್ಗೆ ಇರ್ಫಾನ್ ಪಠಾಣ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದು 8ನೇ ಕ್ರಮಾಂಕದಲ್ಲಿ ಅವರು ಅತ್ಯುತ್ತಮ ಆಯ್ಕೆ ಎಂದಿದ್ದಾರೆ. ಈ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್, ಮತ್ತು ವಾಶಿಂಗ್ಟನ್ ಸುಂದರ್ ಅವರಿಗಿಂತ ಅಕ್ಷರ್ ಉತ್ತಮ ಆಯ್ಕೆ ಎಂದಿದ್ದಾರೆ. ಅಲ್ಲದೆ ರವೀಂದ್ರ ಜಡೇಜಾ ಅವರಿಗಿಂತಲೂ ಭಿನ್ನವಾದ ಹೊಡೆತಗಳನ್ನು ಅಕ್ಷರ್ ಹೊಂದಿದ್ದಾರೆ ಎಂದು ಹೊಗಳಿದ್ದಾರೆ . ಅಕ್ಷರ್ ಪಟೇಲ್ 34 ಏಕದಿನ ಇನ್ನಿಂಗ್ಸ್‌ಗಳಲ್ಲಿ 20.04 ಸರಾಸರಿಯಲ್ಲಿ 481 ರನ್ ಗಳಿಸಿದ್ದಾರೆ. ಕಳೆದ ವರ್ಷ ಬ್ಯಾಟರ್ ಆಗಿ ಸಾಕಷ್ಟು ಗಮನಾರ್ಹ ಪ್ರದರ್ಶನ ನೀಡಿದ್ದು ಆರು ಇನ್ನಿಂಗ್ಸ್‌ಗಳಲ್ಲಿ 42.00 ಸರಾಸರಿ ಮತ್ತು 120.00 ಸ್ಟ್ರೈಕ್ ರೇಟ್‌ನೊಂದಿಗೆ 168 ರನ್ ಗಳಿಸಿದ್ದಾರೆ.
"ಆತನಿಗೆ ಎರಡ್ಮೂರು ಕಡೆಗಳಿಗೆ ಗಾಯಗಳಾಗಿದೆ. ಆದರೆ ಅದೆಲ್ಲಾ ಎಷ್ಟು ತೀವ್ರವಾಗಿದೆ ಎನ್ನುವುದು ತಿಳಿದಿಲ್ಲ. ಆದರೆ ಅಕ್ಷರ್ ಸಾಕಷ್ಟು ಫಿಟ್ ಆಗಿರುವ ಆಟಗಾರನಾಗಿದ್ದು ಅದರಿಂದ ಅವರು ಶೀಘ್ರವಾಗಿ ಹೊರಬರಲಿದ್ದಾರೆ. ಆತ ಸಂಪೂರ್ಣವಾಗಿ ಫಿಟ್ ಆಗಿ ಕಮ್‌ಬ್ಯಾಕ್ ಮಾಡುವುದು ತಂಡಕ್ಕೆ ಅತ್ಯಂತ ಮಹತ್ವವಾಗಿದೆ. ಯಾಕೆಂದರೆ ನನ್ನ ಪ್ರಕಾರ 8ನೇ ಕ್ರಮಾಂಕದಲ್ಲಿ ಆ ಭಾರತ ತಂಡಕ್ಕೆ ಅತ್ಯಂತ ಅನಿವಾರ್ಯ ಆಟಗಾರ. ಯಾಕಂದರೆ ಶ್ರೀಲಂಕಾದಲ್ಲಿ ಬ್ಯಾಟಿಂಗ್ಗೆ ಸವಾಲಾಗಿರುವ ಪಿಚ್‌ನಲ್ಲಿಯೂ ಅದ್ಭುತವಾದ ಕೌಶಲ್ಯವನ್ನು ಆತ ಪ್ರದರ್ಶಿಸಿದ್ದಾರೆ" ಎಂದಿದ್ದಾರೆ ಇರ್ಫಾನ್ ಪಠಾಣ್.
ಇನ್ನು ಇದೇ ಸಂದರ್ಭದಲ್ಲಿ ಪಿಯೂಷ್ ಚಾವ್ಲಾ ಬಳಿ ಅಕ್ಷರ್ ಪಟೇಲ್ ಗಾಯದಿಂದ ಶೀಘ್ರ ಚೇತರಿಕೆ ಕಾಣದೆ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಯಾರಿಗೆ ಅವಕಾಶ ದೊರೆಯಬಹುದು ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನನ್ನ ಪ್ರಕಾರ ಅಕ್ಷರ್ ಪಟೇಲ್ ಫಿಟ್ ಆಯ್ಕೆಯಾಗದೇ ಇದ್ದರೆ ವಾಶಿಂಗ್ಟನ್ ಸುಂದರ್ ಬದಲಿ ಆಟಗಾರನಾಗಿ ಸೇರಿಕೊಳ್ಳಬಹುದು ಯಾಕೆಂದರೆ ಏಷ್ಯಾಖಪ್ ಫೈನಲ್‌ನಲ್ಲಿ ತಂಡದಲ್ಲೇ ಇಲ್ಲದಿದ್ದರೂ ಬದಲಿ ಆಟಗಾರನಾಗಿ ಬಂದು ನೇರವಾಗಿ ಆತ ಫೈನಲ್‌ನಲ್ಲಿ ಆಡಿದ್ದಾರೆ" ಎಂದಿದ್ದಾರೆ ಪಿಯೂಷ್ ಚಾವ್ಲ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications