ಫೆಬ್ರವರಿಯಲ್ಲಿ ಇರ್ಫಾನ್ ಪಠಾಣ್ ಗೆ ಶಾದಿ ಭಾಗ್ಯ
ವಡೋದರ, ಜ.28: ಟೀಂ ಇಂಡಿಯಾದ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರಿಗೆ ಫೆಬ್ರವರಿಯಲ್ಲಿ 'ಶಾದಿ ಭಾಗ್ಯ' ಸಿಗಲಿದೆ. ಈ ಬಗ್ಗೆ ಬಂದ ವರದಿಗಳನ್ನು ಇರ್ಫಾನ್ ಅವರು ಒಪ್ಪಿಕೊಂಡಿದ್ದಾರೆ. ದಿನಾಂಕ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಈ ಮೂಲಕ ಕಳೆದ ವರ್ಷ ಶುರುವಾದ ಕ್ರಿಕೆಟರ್ಸ್ ಗಳ ಮದುವೆ ಪರ್ವಕ್ಕೆ ಇರ್ಫಾನ್ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ.
ಫೆಬ್ರವರಿಯ ಎರಡನೆ ವಾರದಲ್ಲಿ ವಿವಾಹವಾಗಲು ಸಜ್ಜಾಗಿದ್ದಾರೆ ಎಂದು ದೆಹಲಿ ಟೈಮ್ಸ್ ಇತ್ತೀಚೆಗೆ ವರದಿ ಮಾಡಿತ್ತು. ಇನ್ನೂ ಕೆಲವು ಪತ್ರಿಕೆಗಳಲ್ಲಿ ಪ್ರೇಮಿಗಳ ದಿನ (ಫೆಬ್ರವರಿ 14) ಇರ್ಫಾನ್ ಪಠಾಣ್ ಮದುವೆಯಾಗಲಿದ್ದಾರೆ ಎಂದು ಬರೆಯಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಇರ್ಫಾನ್ ಪಠಾಣ್, 'ನಾನು ವೈಯಕ್ತಿಕ ವಿಷಯವನ್ನು ಹೆಚ್ಚು ಚರ್ಚಿಸಲು ಇಷ್ಟಪಡಲಾರೆ. ನಾನು ಫೆಬ್ರವರಿಯಲ್ಲಿ ಮದುವೆಯಾಗುತ್ತಿರುವ ಸುದ್ದಿಯಲ್ಲಿ ನಿಜವಿದೆ. ಇದಕ್ಕಿಂತ ಹೆಚ್ಚು ತಾನೇನೂ ಹೇಳಲಾರೆ. ಈ ವಿಷಯದ ಕುರಿತು ಕೆಲವೇ ದಿನಗಳಲ್ಲಿ ಹೇಳಿಕೆ ನೀಡುವೆ'ಎಂದಿದ್ದಾರೆ.
ಸೂರತ್‌ನ ಖ್ಯಾತ ಜ್ಯುವೆಲ್ಲರಿಯಲ್ಲಿ ಇರ್ಫಾನ್‌ನ ಭಾವೀ ಪತ್ನಿಗೆ ವಜ್ರದ ನೆಕ್ಲೇಸ್‌ಗೆ ಈಗಾಗಲೇ ಆರ್ಡರ್ ನೀಡಲಾಗಿದೆ. ಫೆಬ್ರವರಿಯ ಎರಡನೆ ವಾರದಲ್ಲಿ ಮದುವೆ ನಡೆಯಲಿದೆ ಎಂಬ ಸುದ್ದಿಯಿದೆ. ಇರ್ಫಾನ್ ವರಿಸಲಿರುವ ಹುಡುಗಿ ಹೆಸರು ಸಫಾ ಎನ್ನಲಾಗಿದೆ. ಸೈಯದ್ ಮುಷ್ತಾಕ್ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಇರ್ಫಾನ್ ಅವರು ಮದುವೆ ಸಿದ್ಧತೆಯಲ್ಲಿ ತೊಡಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications