RIP ಇರ್ಫಾನ್ ಖಾನ್: 200 ರೂಪಾಯಿಯಿಲ್ಲದೆ ಕ್ರಿಕೆಟಿಗನಾಗುವ ಕನಸು ಕೈಬಿಟ್ಟಿದ್ದ ನಟ

ನೈಜ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಹಾಲಿವುಡ್‌ನಲ್ಲೂ ಮಿಂಚುಹರಿಸಿದ ನಟ ಇರ್ಫಾನ್ ಖಾನ್ ಇಂದು ಮೌನವಾಗಿದ್ದಾರೆ. ಕ್ಯಾನ್ಸರ್ ಜೊತೆಗಿನ ಸುಧೀರ್ಘ ಹೋರಾಟದಲ್ಲಿ ಸಾವು ಗೆಲ್ಲಲು ಸಾಧ್ಯವಾಗದ ಇರ್ಫಾನ್ ಖಾನ್ ಕಣ್ಮುಚ್ಚಿದ್ದಾರೆ.
ಆದರೆ ನಟನಾಗುವುದಕ್ಕೂ ಮುನ್ನ ಇರ್ಫಾನ್ ಖಾನ್‌ಗೆ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸಿತ್ತಂತೆ. ಎರಡೇ ಎರಡು ವರ್ಷದ ಹಿಂದೆ ಇರ್ಫಾನ್ ಸಂದರ್ಶನದಲ್ಲಿ ಯೌವ್ವನದಲ್ಲಿ ಪಟ್ಟ ಕನಸು ಮತ್ತು ಅದರ ಪ್ರಯತ್ನದ ಬಗ್ಗೆ ಖಾಸಗೀ ವಾಹಿನಿಯಲ್ಲಿ ಹೇಳಿಕೊಂಡಿದ್ದರು. ಕನಸಿಗೆ ತಣ್ಣೀರು ಎರಚಿದ್ದ ಬಡತನದ ಬಗ್ಗೆ ನಗು ನಗುತ್ತಲೇ ಉತ್ತರಿಸಿದ್ದರು.
ಬೇರೆಯವರಿಗೆ ಬಿಡಿ, ಆಗ ಸ್ವತಃ ಇರ್ಫಾನ್‌ಗೆ ನಾನೋರ್ವ ನಟನಾಗಿ ಮೆರೆದಾಡುತ್ತೇನೆಂಬ ಸಣ್ಣ ಸುಳಿವೂ ಇಲ್ಲದ ಸಮಯವದು. ಆದರೆ 200 ರೂಪಾಯಿ ಹೊಂದಿಸಲು ಸಾಧ್ಯವಾಗದೆ ತಾನು ಕಂಡಿದ್ದ ಬಹುದೊಡ್ಡ ಕನಸನ್ನು ಇರ್ಫಾನ್ ನುಚ್ಚುನೂರು ಮಾಡಿಕೊಂಡಿದ್ದರಂತೆ. ಈ ಬಗ್ಗೆ ವಿವರಿಸಿದ್ದು ಸ್ವತಃ ಇರ್ಫಾನ್.

ಕ್ರಿಕೆಟಿಗನಾಗಲು ತರಬೇತಿ
ನಟನಾಗುವುದಕ್ಕೂ ಮುನ್ನ ಇರ್ಫಾನ್ ಖಾನ್ ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕೆಂದು ಅಂದುಕೊಂಡಿದ್ದರಂತೆ, ಅದಕ್ಕಾಗಿ ತರಬೇತಿಯನ್ನೂ ನಡೆಸುತ್ತಿದ್ದ ಇರ್ಫಾನ್ ಖಾನ್‌ಗೆ ಬಡತನ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಿಡಲಿಲ್ಲ ಎಂದಿದ್ದಾರೆ. ಕ್ರಿಕೆಟ್ ತರಬೇತಿ ಪಡೆಯಲು ಹಣದ ಕೊರತೆಯಿದ್ದ ಕಾರಣ ಇರ್ಫಾನ್ ಆ ಕನಸನ್ನು ಕೈಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.

ಸಿ.ಕೆ ನಾಯ್ಡು ಟೂರ್ನಮೆಂಟ್‌ಗೆ ಆಯ್ಕೆ
ಕ್ರಿಕೆಟ್‌ನಲ್ಲಿ ಇರ್ಫಾನ್ ಎಷ್ಟು ಪ್ರತಿಭೆಯನ್ನು ಹೊಂದಿದ್ದರೆಂದರೆ ಸಿಕೆ ನಾಯ್ಡು ಟೂರ್ನಮೆಂಟ್‌ನಲ್ಲಿ 23 ವರ್ಷದ ಕೆಳಗಿನ ವಿಭಾಗದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು. " ನಾನು ಸಿಕೆ ನಾಯ್ಡು ಟೂರ್ನಮೆಂಟ್‌ಗೆ ಆಯ್ಕೆಯಾಗಿದ್ದೆ. ಆದರೆ ನನ್ನ ಮನೆಯ ಪರಿಸ್ಥಿತಿ ಅದಕ್ಕೆ ಪೂರಕವಾಗಿರಲಿಲ್ಲ, ಆಡಲು ಹೋಗಬೇಕಾದರೆ ಮನೆಯಲ್ಲಿ ಸುಳ್ಳು ಹೇಳಬೇಕಾಗಿತ್ತು. ಹೀಗಾಗಿ ಕ್ರೀಡೆಗೆ ನನಗೆ ಪ್ರೋತ್ಸಾಹ ಸಿಗಲಿಲ್ಲ" ಎಂದು ಇರ್ಫಾನ್ ಇಂಟರ್‌ವ್ಯೂ ಸಂರ್ಭದಲ್ಲಿ ಹೇಳಿಕೊಂಡಿದ್ದರು.

ಟಿಕೆಟ್‌ಗೆ 200 ರೂಪಾಯಿ ಇರಲಿಲ್ಲ
ಕ್ರಿಕೆಟ್‌ಅನ್ನು ಬಿಟ್ಟು ಬಿಡಬೇಲು ಎಂದು ಕಠಿಣ ನಿರ್ಧಾರವನ್ನು ತೆಗೆದುಕೊಂಡ ಸಂದರ್ಭವನ್ನು ಕೂಡ ಇರ್ಫಾನ್ ಹೇಳಿಕೊಂಡಿದ್ದರು. ಟೂರ್ನಮೆಂಟ್‌ಗೋಸ್ಕರ ಇರ್ಪಾನ್ ಖಾನ್ ಜೈಪುರದಿಂದ ಅಜ್ಮೇರ್‌ಗೆ ತೆರಳಬೇಕಿತ್ತಂತೆ, ಅದಕ್ಕಾಗಿ 200-250 ರೂಪಿಯಿ ಅನಿವಾರ್ಯವಾಗಿತ್ತು ಇರ್ಫಾನ್‌ಗೆ. ಆದರೆ ಆ ಹಣವನ್ನು ಹೊಂದಿಸಲು ಇರ್ಫಾನ್ ಖಾನ್ ಕೈಯಿಂದ ಸಾಧ್ಯವಾಗಲಿಲ್ಲ. ಆಗ 'ಇನ್ನು ನನ್ನಿಂದ ಸಾಧ್ಯವಿಲ್ಲ' ಎಂದು ಕ್ರಿಕೆಟ್ ಕನಸನ್ನು ಸಂಪೂರ್ಣವಾಗಿ ಇರ್ಫಾನ್ ಕೈಬಿಟ್ಟಿದ್ದಾಗಿ ಆ ಸಂದರ್ಶನದಲ್ಲೇ ಇರ್ಫಾನ್ ಹೇಳಿದ್ದರು.

ನಟನಾಗದಿದ್ದಿದ್ದರೆ...
ಬಡತನದ ಕಾರಣಕ್ಕೆ ಕನಸೊಂದು ಈಡೇರಿಲ್ಲ ಎಂದು ಇರ್ಫಾನ್ ಖಾನ್ ಅಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ ಕ್ರಿಕೆಟಿಗನಾಗಿ ಇರ್ಫಾನ್ ಖಾನ್ ಅದೆಷ್ಟು ಸಾಧನೆ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಭಾರತೀಯ ಸಿನಿಮಾ ಜಗತ್ತು ಮಾತ್ರ ಬಹುದೊಡ್ಡ ನಟನನ್ನು ನೋಡುತ್ತಲೇ ಇರಲಿಲ್ಲ. ಕೇವಲ ಭಾರತ ಮಾತ್ರವಲ್ಲ ವಿಶ್ವಾದ್ಯಂತ ತನ್ನ ಅಸಾಧಾರಣ ನಟನೆಯ ಮೂಲಕ ಇರ್ಫಾನ್ ಮೂಕವಿಸ್ಮಿತರನ್ನಾಗಿಸಿದ್ದರು. ಇಂದು ಕೊನೆಯುಸಿರೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications