ಅಂದು ರಹಾನೆ, ಇಂದು ಐಯ್ಯರ್: ಅಂತಿಮ ಕ್ಷಣದಲ್ಲಿ ಬಿಸಿಸಿಐ ಆಟಗಾರರನ್ನು ಹೊರಹಾಕುತ್ತಿರುವುದೇಕೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವುದರ ಮೂಲಕ ದಾಖಲೆ ಬರೆದಿದೆ. ಹೌದು, ಸೆಂಚುರಿಯನ್ ಅಂಗಳದಲ್ಲಿ ಹರಿಣಗಳ ವಿರುದ್ಧದ ೧೧೩ ರನ್ ಅಂತರದ ಬೃಹತ್ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಈ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಜಯ ಸಾಧಿಸಿದ ಐತಿಹಾಸಿಕ ದಾಖಲೆಯನ್ನು ಬರೆಯಿತು. ಹೀಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಹೌದು, ವಾಂಡರರ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರುವ ಟೀಮ್ ಇಂಡಿಯಾದ ನಾಯಕತ್ವವನ್ನು ವಿರಾಟ್ ಕೊಹ್ಲಿ ಬದಲು ಕೆಎಲ್ ರಾಹುಲ್ ಹೆಗಲಿಗೆ ಬಿಸಿಸಿಐ ಹಾಕಿದೆ.
ಈ ಪಂದ್ಯ ಆರಂಭಕ್ಕೂ ಮುನ್ನ ಗಾಯದ ಸಮಸ್ಯೆಗೆ ಒಳಗಾದ ಕಾರಣದಿಂದಾಗಿ ವಿರಾಟ್ ಕೊಹ್ಲಿ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಭಾರತ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ನಿರ್ವಹಿಸುತ್ತಿದ್ದು ಉಪನಾಯಕನಾಗಿ ಜಸ್ಪ್ರಿತ್ ಬೂಮ್ರಾ ಕಣಕ್ಕಿಳಿದಿದ್ದಾರೆ. ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೊಳಗಾಗಿರುವ ವಿಚಾರವನ್ನು ಪಂದ್ಯಕ್ಕೆ ಕೆಲ ಸಮಯ ಬಾಕಿ ಇರುವಾಗ ತಿಳಿಸಿದ ಬಿಸಿಸಿಐ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲಿಯೂ ಶ್ರೇಯಸ್ ಐಯ್ಯರ್ ವಿಚಾರವಾಗಿ ಬಿಸಿಸಿಐ ನಡೆದುಕೊಂಡಿರುವ ರೀತಿ ದೊಡ್ಡಮಟ್ಟದಲ್ಲಿ ಬೇಸರ ಹಾಗೂ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವಿರಾಟ್ ಕೊಹ್ಲಿ ವಾಂಡರರ್ಸ್ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಈ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಅವರಿಗೆ ಆಡುವ ಅವಕಾಶ ಲಭಿಸಲಿದೆ ಎಂದು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಊಹಿಸಿದ್ದರು. ಆದರೆ, ತಂಡ ಪ್ರಕಟಿಸುವ ಸಮಯದಲ್ಲಿ ಶ್ರೇಯಸ್ ಐಯ್ಯರ್ ಅವರನ್ನು ಕೈಬಿಟ್ಟ ಬಿಸಿಸಿಐ ಅಭಿಮಾನಿಗಳ ಊಹೆ ಮತ್ತು ನಿರೀಕ್ಷೆಗಳಿಗೆ ತಣ್ಣೀರನ್ನು ಎರಚಿದೆ. ಸದ್ಯ ವಿರಾಟ್ ಕೊಹ್ಲಿ ಸ್ಥಾನಕ್ಕೆ ಹನುಮ ವಿಹಾರಿ ಆಯ್ಕೆಯಾಗಿದ್ದು, ಶ್ರೇಯಸ್ ಐಯ್ಯರ್ ಈ ಪಂದ್ಯದಲ್ಲಿ ಅವಕಾಶ ಸಿಗದೇ ಹೊರಬಿದ್ದಿದ್ದಾರೆ. ಈ ಕುರಿತು ಇದೀಗ ನೆಟ್ಟಿಗರು ಈ ಕೆಳಕಂಡಂತೆ ಪ್ರತಿಕ್ರಿಯಿಸಿದ್ದು ಬಿಸಿಸಿಐ ಅಂತಿಮ ಕ್ಷಣದಲ್ಲಿ ನಿರ್ಧಾರಗಳನ್ನು ಪ್ರಕಟಿಸುವುದರ ಮೂಲಕ ಬೇಜವಾಬ್ದಾರಿ ವರ್ತನೆ ತೋರುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಂತಿಮ ಕ್ಷಣದಲ್ಲಿ ಶ್ರೇಯಸ್ ಐಯ್ಯರ್ ಅಲಭ್ಯತೆ ತಿಳಿಸಿದ ಬಿಸಿಸಿಐ
ನೆಟ್ಟಿಗರು ಬಿಸಿಸಿಐ ವಿರುದ್ಧ ಕೋಪಗೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣ ಅಂತಿಮ ಕ್ಷಣದಲ್ಲಿ ಶ್ರೇಯಸ್ ಐಯ್ಯರ್ ಅವರಿಗೆ ಅನಾರೋಗ್ಯ ಉಂಟಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂಬ ವಿಷಯವನ್ನು ಬಿಸಿಸಿಐ ಪ್ರಕಟಿಸಿದ್ದು. ಹೌದು, ಶ್ರೇಯಸ್ ಐಯ್ಯರ್ ಅವರನ್ನು ದ. ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡದ ಬಿಸಿಸಿಐ ಐಯ್ಯರ್ ಹೊಟ್ಟೆ ನೋವಿಗೆ ಒಳಗಾಗಿದ್ದಾರೆ ಎಂಬ ಕಾರಣವನ್ನು ನೀಡಿತು. ಹೀಗೆ ಬಿಸಿಸಿಐ ಅಂತಿಮ ಕ್ಷಣದಲ್ಲಿ ಕೈಗೊಂಡ ನಿರ್ಧಾರದ ಕುರಿತು ಬೇಸರ ವ್ಯಕ್ತವಾಗುತ್ತಿದ್ದು ಇಂತಹ ಸುದ್ದಿಗಳನ್ನು ಬಿಸಿಸಿಐ ಮೊದಲೇ ಯಾಕೆ ಹಂಚಿಕೊಳ್ಳುವುದಿಲ್ಲ, ಇದರಿಂದ ಬಿಸಿಸಿಐ ಅಭಿಮಾನಿಗಳ ದಿಕ್ಕು ತಪ್ಪಿಸುತ್ತಿದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಿನ್ನೆ ಅಭ್ಯಾಸ ನಡೆಸಿದ್ದ ಐಯ್ಯರ್
ಇನ್ನು ಬಿಸಿಸಿಐ ಶ್ರೇಯಸ್ ಐಯ್ಯರ್ ದ. ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಹೊಟ್ಟೆನೋವಿನ ಕಾರಣದಿಂದಾಗಿ ಅಲಭ್ಯರಾಗಿದ್ದಾರೆ ಎಂದು ಪಂದ್ಯ ಆರಂಭಕ್ಕೂ ಅರ್ಧ ತಾಸಿನ ಮುನ್ನ ಬಿಸಿಸಿಐ ತಿಳಿಸಿದರೆ, ಅತ್ತ ಶ್ರೇಯಸ್ ಐಯ್ಯರ್ ನಿನ್ನೆವರೆಗೂ ಅಭ್ಯಾಸದಲ್ಲಿ ಭಾಗವಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರೇಕ್ಷಕರು ಶ್ರೇಯಸ್ ಐಯ್ಯರ್ ದಿಢೀರನೆ ಅನಾರೋಗ್ಯಕ್ಕೊಳಗಾದ್ರಾ? ಬಿಸಿಸಿಐ ಅಂತಿಮ ವೇಳೆಯಲ್ಲಿ ಈ ರೀತಿ ನಿರ್ಧಾರ ಪ್ರಕಟಿಸುವುದು ಆಟಗಾರರ ಮೇಲೆ ಬೇರೆ ರೀತಿಯ ಪ್ರಭಾವವನ್ನೇದರೂ ಬೀರುತ್ತಿದೆಯಾ ಎಂಬ ಪ್ರಶ್ನೆಯನ್ನು ಹಾಕಿದ್ದಾರೆ. ಇನ್ನು ಶ್ರೇಯಸ್ ಐಯ್ಯರ್ ಇತ್ತೀಚಿಗಷ್ಟೆ ನಡೆದ ಟೀಮ್ ಇಂಡಿಯಾ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ನೃತ್ಯವನ್ನೂ ಮಾಡಿದ್ದ ವಿಡಿಯೋವನ್ನು ಸ್ವತಃ ತಾವೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಈ ಹಿಂದೆ ಅಜಿಂಕ್ಯಾ ರಹಾನೆ ವಿಷಯದಲ್ಲಿಯೂ ಇದೇ ರೀತಿ ನಡೆದುಕೊಂಡಿತ್ತು ಬಿಸಿಸಿಐ
ಬಿಸಿಸಿಐ ಅಂತಿಮ ವೇಳೆಯಲ್ಲಿ ಆಟಗಾರರ ಅಲಭ್ಯತೆಯನ್ನು ಪ್ರಕಟಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಅಜಿಂಕ್ಯಾ ರಹಾನೆಯನ್ನು ಇದೇ ರೀತಿ ಅಂತಿಮ ವೇಳೆಯಲ್ಲಿ ತಂಡದಿಂದ ಹೊರಹಾಕಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications