ಚಾಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು?: ನನ್ನ ಹೊಸ ಜೀವನ ಶುರು ಎಂದ ಚಾಹಲ್!

ಯುಜುವೇಂದ್ರ ಚಹಾಲ್ ಭಾರತ ಕ್ರಿಕೆಟ್ ಕಂಡ ಉತ್ತಮ ಸ್ಪಿನ್ ಬೌಲರ್‌ಗಳಲ್ಲಿ ಓರ್ವರು. 2016ರಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಯುಜುವೇಂದ್ರ ಚಹಲ್ ಸಿಕ್ಕ ಅವಕಾಶವನ್ನು ಪಡೆದುಕೊಳ್ಳುವುದರ ಮೂಲಕ ತಂಡದ ಖಾಯಂ ಸದಸ್ಯನೆಂದು ಗುರುತಿಸಿಕೊಂಡರು. ಇನ್ನು ಯುಜುವೇಂದ್ರ ಚಹಾಲ್ 2020ರಲ್ಲಿ ಧನಶ್ರೀ ವರ್ಮಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವೃತ್ತಿಯಲ್ಲಿ ನೃತ್ಯ ಸಂಯೋಜಕಿಯಾಗಿದ್ದ ಧನಶ್ರೀ ವರ್ಮಾ ಮತ್ತು ಕ್ರಿಕೆಟಿಗ ಯುಜುವೇಂದ್ರ ಚಹಾಲ್ ಇಬ್ಬರೂ ಸಹ ಪರಸ್ಪರ ಪ್ರೀತಿಸಿ ಮದುವೆಯಾದರು.
ಹೀಗೆ ಮದುವೆಯಾದ ನಂತರ ಧನಶ್ರೀ ವರ್ಮಾ ಯುಜುವೇಂದ್ರ ಚಾಹಲ್ ಅವರ ಪತ್ನಿ ಎಂದು ಗುರುತಿಸಿಕೊಂಡು ಖ್ಯಾತಿಯನ್ನು ಪಡೆದದ್ದು ಪ್ರತಿಯೊಬ್ಬರಿಗೂ ತಿಳಿದಿರುವ ಸತ್ಯವೇ. ಹೀಗೆ ಯುಜುವೇಂದ್ರ ಚಾಹಲ್ ಅವರನ್ನು ವಿವಾಹವಾದ ನಂತರ ನಿರೀಕ್ಷೆಗೂ ಮೀರಿದ ಅನುಯಾಯಿಗಳು ಹಾಗೂ ಖ್ಯಾತಿಯನ್ನು ಪಡೆದ ಧನಶ್ರೀ ವರ್ಮಾ ಯುಜುವೇಂದ್ರ ಚಾಹಲ್ ಜತೆ ಹಲವಾರು ವಿದೇಶಿ ಕ್ರಿಕೆಟ್ ಪ್ರವಾಸಗಳನ್ನು ಕೈಗೊಂಡಿದ್ದರು ಹಾಗೂ ಯುಜುವೇಂದ್ರ ಚಾಹಲ್ ಆಡುತ್ತಿದ್ದ ಪಂದ್ಯಗಳಿಗೆ ತೆರಳಿ ತನ್ನ ಪತಿಗೆ ಬೆಂಬಲವನ್ನು ನೀಡುತ್ತಿದ್ದರು.
ಹೀಗೆ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದ ಇಬ್ಬರ ಕುರಿತಾಗಿ ಇಲ್ಲಿಯವರೆಗೂ ಯಾವುದೇ ನಕರಾತ್ಮಕ ಸುದ್ದಿ ಕೇಳಿ ಬಂದಿರಲಿಲ್ಲ. ಇದ್ದರೆ ಈ ಜೋಡಿಯ ಹಾಗೆ ಇರಬೇಕು ಎಂದು ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದ ಈ ಜೋಡಿ ಇದೀಗ ವಿವಾದವೊಂದಕ್ಕೆ ಸಿಲುಕಿದೆ. ಹೌದು, ಯುಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಗಂಭೀರ ವಿಚಾರವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಹೀಗೆ ಸುದ್ದಿಗಳನ್ನು ಹರಡುತ್ತಿರುವ ನೆಟ್ಟಿಗರು ಈ ರೀತಿಯ ಅನುಮಾನ ಹುಟ್ಟಲು ಕಾರಣವನ್ನೂ ಸಹ ನೀಡಿದ್ದು, ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ಹೆಸರು ಬದಲಿಸಿದ ಧನಶ್ರೀ
ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಾಹಲ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುತ್ತಿರುವ ನೆಟ್ಟಿಗರು ಈ ರೀತಿಯ ಅನುಮಾನ ಹುಟ್ಟಲು ಮೊದಲ ಕಾರಣ ಧನಶ್ರೀ ವರ್ಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯ ಹೆಸರಿನಲ್ಲಿದ್ದ ಚಾಹಲ್ ಎಂಬುದನ್ನು ತೆಗೆದುಹಾಕಿದ್ದು ಎನ್ನಲಾಗುತ್ತಿದೆ. ಹೌದು, ಯುಜುವೇಂದ್ರ ಚಾಹಲ್ ಅವರನ್ನು ವಿವಾಹವಾದ ನಂತರ ಧನಶ್ರೀ ಚಾಹಲ್ ಎಂದು ತನ್ನ ಇನ್ಸ್ಟಾಗ್ರಾಮ್ ಖಾತೆಯ ಹೆಸರನ್ನು ಬದಲಿಸಿದ್ದ ಧನಶ್ರೀ ಇದೀಗ ಮತ್ತೆ ತನ್ನ ಇನ್ಸ್ಟಾಗ್ರಾಮ್ ಖಾತೆಯ ಹೆಸರನ್ನು ಧನಶ್ರೀ ವರ್ಮಾ ಎಂದು ಬದಲಿಸಿದ್ದಾರೆ. ಧನಶ್ರೀ ವರ್ಮಾ ಅವರ ಈ ನಡೆ ಸದ್ಯ ದೊಡ್ಡ ಮಟ್ಟದ ಅನುಮಾನ ಮೂಡಿಸಿರುವುದು ಸುಳ್ಳಲ್ಲ.

ಹೊಸ ಜೀವನ ಶುರು ಎಂದ ಚಾಹಲ್
ಇನ್ನು ಧನಶ್ರೀ ವರ್ಮಾ ಒಂದೆಡೆ ತನ್ನ ಇನ್ಸ್ಟಾಗ್ರಾಮ್ ಖಾತೆಯ ಹೆಸರನ್ನು ಬದಲಿಸಿದರೆ, ಮತ್ತೊಂದೆಡೆ ಯುಜುವೇಂದ್ರ ಚಹಲ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'ನ್ಯೂ ಲೈಫ್ ಲೋಡಿಂಗ್' ಎಂಬ ಚಿತ್ರವನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಹೀಗೆ ಹೊರ ಜೀವನ ಶುರು ಎಂಬ ಅರ್ಥದಲ್ಲಿ ಸ್ಟೋರಿ ಹಾಕಿಕೊಂಡಿರುವ ಚಾಹಲ್ ಅವರ ಈ ನಡೆ ಕೂಡ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನವನ್ನು ಮೂಡಿಸಿದೆ.

ನೋವನ್ನು ಶಕ್ತಿಯನ್ನಾಗಿ ಬದಲಾಯಿಸಬೇಕು!
ಇನ್ನು ಒಂದೆಡೆ ಇಬ್ಬರ ದಾಂಪತ್ಯ ಜೀವನದ ಬಗ್ಗೆ ದೊಡ್ಡ ಮಟ್ಟದ ಸುದ್ದಿಗಳು ಹರಿದಾಡುತ್ತಿದ್ದರೆ, ಮತ್ತೊಂದೆಡೆ ಈ ಕುರಿತಾಗಿ ಇಬ್ಬರಲ್ಲಿ ಯಾರೊಬ್ಬರೂ ಸಹ ಈ ಕುರಿತಾಗಿ ಪ್ರತಿಕ್ರಿಯಿಸಲು ಮುಂದಾಗದಿರುವುದು ಅನುಮಾನಗಳನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇನ್ನು ಈ ಸುದ್ದಿಗಳ ನಡುವೆಯೇ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ಧನಶ್ರೀ ಯುವರಾಣಿ ಯಾವಾಗಲೂ ತನ್ನ ನೋವನ್ನು ಶಕ್ತಿಯನ್ನಾಗಿ ಬದಲಾಯಿಸಿಕೊಳ್ಳುತ್ತಾಳೆ ಎಂದು ಬರೆದುಕೊಂಡಿದ್ದಾರೆ. ಧನಶ್ರೀ ಅವರ ಈ ಪೋಸ್ಟ್ ಕೂಡ ಅನುಮಾನ ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications