ಇಶಾ ನಶೆಯಲ್ಲಿ ಹಾರ್ದಿಕ್ ಪಾಂಡ್ಯ? ಡೇಟಿಂಗ್ ಜೋರೋ ಜೋರು

ಲಂಡನ್, ಜುಲೈ 11: ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಯಾರ ಜತೆ ಡೇಟಿಂಗ್ ಮಾಡುತ್ತಿದ್ದಾರೆ? ನಿಜವಾಗಿಯೂ ಹಾರ್ದಿಕ್ ಅವರ ಮನದನ್ನೆ ಯಾರು? ಎಂಬ ವಿಚಾರವಾಗಿ ಜೋರು ಚರ್ಚೆ ನಡೆದಿದೆ. ಬಾಲಿವುಡ್ ನಟಿಯರಾದ ಎಲ್ಲಿ ಅವ್ರಾಮ್, ಊರ್ವಶಿ ರೌಟೆಲಾ ನಂತರ ಈಗ ಇಶಾ ಗುಪ್ತಾ ಹೆಸರು ತಗುಲಿ ಹಾಕಿಕೊಂಡಿದೆ.
ಇಶಾ ಹಾಗೂ ಪಾಂಡ್ಯ ಪ್ರೀತಿಸುತ್ತಿದ್ದಾರೆ. ಆದರೆ, ಸಾರ್ವಜನಿಕವಾಗಿ ಈಗಲೇ ಈ ಬಗ್ಗೆ ಹೇಳಿಕೊಳ್ಳಲು ಬಯಸುತ್ತಿಲ್ಲ. ಹಾರ್ದಿಕ್ ತುಂಬಾ ಇಷ್ಟ, ನನಗಾಗಿ ಮಾಡುವ ಸಣ್ಣ ಸಣ್ಣ ಕೆಲಸವೂ ಇಷ್ಟವಾಗ್ತಿದೆ ಎಂದು ಇಶಾ ಹೇಳಿಕೊಂಡಿದ್ದಾರೆ ಎಂದು ಡಿಎನ್ಎ ವರದಿ ಮಾಡಿದೆ.
ಅಜಯ್ ದೇವಗನ್, ಇಮ್ರಾನ್ ಹಶ್ಮಿ ಅಭಿನಯದ ಬಾದ್ ಶಾಹೋ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಇಶಾ ಸದ್ಯ ಪಲ್ಟನ್ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಇಶಾ ಹಾಗೂ ಹಾರ್ದಿಕ್ ಪಾಂಡ್ಯ ಸಂಬಂಧದ ಬಗ್ಗೆ ಇಂಗ್ಲೆಂಡ್ ಪ್ರವಾಸದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ವರದಿ ಬಂದಿದೆ.
ಈ ಹಿಂದೆ ಇಂಗ್ಲೆಂಡ್ ಪ್ರವಾಸ ಕೈಗೊಂಡು ಭಾರತ ಸೋಲು ಅನುಭವಿಸಿದ್ದಾಗ, ಕ್ರಿಕೆಟರ್ಸ್ ಗಳ ಪತ್ನಿ, ಗರ್ಲ್ ಫ್ರೆಂಡ್ಸ್ ಗಳನ್ನು ಪ್ರವಾಸದ ವೇಳೆ ಕರೆಸಿಕೊಳ್ಳುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ, ನಂತರ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದಂತೆ, ನಿಯಮಾವಳಿಗಳು ಸಡಿಲಗೊಳ್ಳತೊಡಗಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications