IPL ನಿಜಕ್ಕೂ ಸ್ಕ್ರಿಪ್ಟೆಡ್ ಶೋನಾ..? ಚೀರ್ ಲೀಡರ್ ಲವ್ ಅಫೇರ್‌ನಿಂದ ದಾವೂದ್ ಬೆದರಿಕೆವರೆಗೆ ಸ್ಪೋಟಕ ಹೇಳಿಕೆ ನೀಡಿದ ಲಲಿತ್ ಮೋದಿ
ಇಂಡಿಯನ್ ಪ್ರೀಮಿಯರ್ ಲೀಗ್ ಸಂಸ್ಥಾಪಕ ಲಲಿತ್ ಮೋದಿ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಹಲವು ಭಯಾನಕ ಸತ್ಯಗಳನ್ನು ಹರಿ ಬಿಟ್ಟಿದ್ದಾರೆ. ಇದೇ ವೇಳೆ ಐಪಿಎಲ್ ಒಂದು ಸ್ಕ್ರಿಪ್ಟೆಡ್ ಎಂದು ಹೇಳಿದ್ದಾರೆ. ನಾವು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದೆವು. ಐಪಿಎಲ್ ವೇಳೆ ಬೌಂಡರಿ ಸಿಕ್ಸರ್ ಬಾರಿಸಿದ ಮೇಲೆ ಕುಣಿಯುವ ಒಬ್ಬ ಯುವಕಿಯೊಂದಿಗೆ ದಕ್ಷಿಣ ಆಫ್ರಿಕಾದ ಆಟಗಾರ ಮನಸೋತಿರುವುದನ್ನು ಬಹಿರಂಗ ಪಡಿಸಿದ್ದಾರೆ.
ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಲಲಿತ್ ಮೋದಿ, ಇದೆಲ್ಲವೂ ಮೊದಲೇ ಪ್ಲಾನ್ ಮಾಡಿದಂತೆ ನಡೆದಿತ್ತು. ಯಾವುದು ಕೂಡ ಆಕಸ್ಮಿಕವಾಗಿ ಆಗಿದ್ದಲ್ಲ. ಐಪಿಎಲ್ ರೇಟಿಂಗ್ಸ್ ಮತ್ತು ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದ್ದಾಗ, ಟಿಆರ್‌ಪಿ ಹೆಚ್ಚಿಸಲು ನಾವೇ ಬೇಕು ಅಂತ ವಿವಾದಗಳನ್ನು ಸೃಷ್ಟಿಸುತ್ತಿದ್ದೆವು ಎಂದು ಲಲಿತ್ ಮೋದಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದ ಪ್ರಮುಖ ಕ್ರಿಕೆಟ್ ಆಟಗಾರ ಹಾಗೂ ಕ್ಯಾಪ್ಟನ್ ಒಬ್ಬರಿಗೆ ಚೀರ್ ಲೀಡರ್ ಜೊತೆ ಅಫೇರ್ ಇತ್ತು. ಆ ವಿಷಯ ನಮಗೆ ತಿಳಿಯಿತು. ನಾವು ಅದನ್ನು ಮಾಧ್ಯಮಗಳಿಗೆ ಲೀಕ್ ಮಾಡಿದೆವು. ನಮಗೆ ಆ ಹಗರಣದ ಮೂಲಕ ಪ್ರಚಾರ ಬೇಕಿತ್ತಷ್ಟೇ ಎಂದು ಲಲಿತ್ ಮೋದಿ ತಿಳಿಸಿದ್ದಾರೆ. ಅವರಿಬ್ಬರ ನಡುವೆ ಪ್ರೀತಿ ಬೆಳೆಯುವಂತೆ ನಾವು ಸ್ಕ್ರಿಪ್ಟ್ ಮಾಡಿರಲಿಲ್ಲ. ಆದರೆ, ಅದು ದೊಡ್ಡ ಸುದ್ದಿಯಾಗುವಂತೆ ಮಾಧ್ಯಮಗಳಿಗೆ ಲೀಕ್ ಮಾಡಿದ್ದು ನಮ್ಮ ಸ್ಕ್ರಿಪ್ಟ್ ಆಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ.
ದಾವೂದ್ ಇಬ್ರಾಹಿಂ ಕೊಲ್ಲಲು ಯತ್ನಿಸಿದ್ದನು..
ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ತನ್ನನ್ನು ಕೊಲ್ಲಲು ಯತ್ನಿಸಿದ್ದ ಎಂದು ಮೋದಿ ಹೇಳಿಕೊಂಡಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐಗೆ ಮಾತನಾಡಿದ ಲಲಿತ್ ಮೋದಿ, ಈ ಘಟನೆ 2012 ರ ಹಿಂದಿನದ್ದು, ಲಂಡನ್‌ನಲ್ಲಿರುವ ಒಬ್ಬ ಬುಕ್ಕಿ ತನ್ನನ್ನು ಸಂಪರ್ಕಿಸಿದ ಬಗ್ಗೆ ವಿವರಿಸಿದ್ದಾರೆ. ಬುಕ್ಕಿ ತನ್ನನ್ನು ಬೆಳಗಿನ ಜಾವ 3:30 ಕ್ಕೆ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಸಂಪರ್ಕಿಸಿದ್ದಾಗಿ ತಿಳಿಸಿದ್ದಾರೆ.
ಲಲಿತ್ ಮೋದಿ ಅವರು ಇದೇ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ತಮ್ಮ ಅಪಾರ್ಟ್‌ಮೆಂಟ್‌ಗೆ ಬಂದ ಮಧ್ಯವರ್ತಿ ಸ್ಯಾಟಲೈಟ್ ಫೋನ್‌ನಿಂದ ಒಂದು ಸಂಖ್ಯೆಗೆ ಡಯಲ್ ಮಾಡಿದನು. ಇನ್ನೊಂದು ತುದಿಯಲ್ಲಿ ದಾವೂದ್ ಇಬ್ರಾಹಿಂ ಇದ್ದನು. ಫೋನ್ ಸ್ಪೀಕರ್‌ನಲ್ಲಿತ್ತು. ಮತ್ತು ಒಂದು ಧ್ವನಿ "ನಿಮ್ಮ ಕೆಲಸ ಈಗ ಮುಗಿದಿದೆ!" ಎಂದು ಹೇಳಿತು ಮತ್ತು ನಂತರ ಕರೆ ಸಂಪರ್ಕ ಕಡಿತಗೊಂಡಿತು. ಈ ಘಟನೆಯ ನಂತರ, ಮಧ್ಯವರ್ತಿ ಪದೇ ಪದೇ ತಮ್ಮನ್ನು ಸಂಪರ್ಕಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಗಿ ಲಲಿತ್ ಮೋದಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications