ಮಿಷನ್ ಇಂಪಾಸಿಬಲ್ ನಟಿಯ ಅಂದಕ್ಕೆ ಮನಸೋತ ಟೀಮ್ ಇಂಡಿಯಾ ಓಪನರ್?
ಟೀಮ್ ಇಂಡಿಯಾದ ಆಟಗಾರರಿಗೆ ಹಾಗೂ ಬಾಲಿವುಡ್ ನಟ ಹಾಗೂ ನಟಿಯರಿಗೆ ಇನ್ನೆಲ್ಲದ ನಂಟು. ಹಲವು ಆಟಗಾರರು ನಟಿಯರೊಂದಿಗೆ ಡೇಟಿಂಗ್ ಮಾಡಿ ಸುದ್ದಿಯಾದ್ರೆ, ಇನ್ನು ಹಲವರು ಪ್ರೀತೆ ಬಲೆಗೆ ಬಿದ್ದು, ಈಗ ಸಂಸಾರ ಎಂಬ ನೌಕೆಯನ್ನು ಸಾಗಿಸುತ್ತಿದ್ದಾರೆ. ಈ ಬಣ್ಣದ ಲೋಕ ಹಾಗೂ ಕ್ರಿಕೆಟ್‌ಗೆ ಈಗಿನ ಸಂಬಂಧ ಅಲ್ಲ. ಹಿಂದಿನಿಂದಲೂ ಈ ಎರಡೂ ಉದ್ಯಮಗಳ ನಡುವೆ ಪ್ರೀತಿ ಎಂಬುದು ಸೇತುವೆ ಎಂತೆ ಕಾರ್ಯ ನಿರ್ವಹಿಸಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಬಣ್ಣದ ಬೆಡಗಿಯರ ಅಂದಕ್ಕೆ ಮನಸೋತಿದ್ದಾರೆ. ಮೊಹಮ್ಮದ್ ಅಜರುದ್ಧಿನ್, ಸೌರವ್ ಗಂಗೂಲಿ, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಇವರೆಲ್ಲಾರು, ಬಣ್ಣದ ಮೋಹಕ್ಕೆ ತಲೆ ಬಾಗಿದವರೆ. ಈಗ ಸಾಲಿಗೆ ಮತ್ತೊಬ್ಬ ಕ್ರಿಕೆಟ್ ಆಟಗಾರ ಎಂಟ್ರಿ ನೀಡುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ. ಅಂದಹಾಗೆ ಇವರನ್ನು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಹಾಗೂ ಫ್ಯೂಚರ್ ಕ್ಯಾಪ್ಟನ್ ಎಂದೇ ಕರೆಯುತ್ತಾರೆ. ಸದ್ಯ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಿಲ್ ಸ್ಥಿರ ಪ್ರದರ್ಶನ ನೀಡಿದ್ದರು. ಇದೇ ಟೂರ್ನಿಯ ಸೆಮಿಫೈನಲ್‌ನ ಆ ಒಂದು ದೃಶ್ಯ ಈಗ ಸಖತ್ ಸದ್ದು ಮಾಡುತ್ತಿದೆ.

ಗಿಲ್ ಆಟಕ್ಕೆ ಮನಸೋತ್ರಾ ಹಾಲಿವುಡ್ ಬೆಡಗಿ
ಈಗಾಗಲೇ ತಂಡದ ಉಪನಾಯಕನ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಶುಭಮನ್ ಗಿಲ್, ಬೆಳ್ಳಿ ಪರದೆಯ ಮೋಹಕ ನಟಿಗೆ ಮನಸೋತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಶುಭಮನ್ ಗಿಲ್ ಅವರ ಹೆಸರು ಸಚಿನ್ ತೆಂಡೂಲ್ಕರ್ ಅವರ ಮಗಳ ಜೊತೆಗೂ ಹಲವು ಬಾರಿ ತಳಕು ಹಾಕಿಕೊಂಡಿದೆ. ಗಿಲ್ ಈ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿಲ್ಲ. ಆದರೆ ಈಗ ಇವರ ಬಾಳಲ್ಲಿ ಮತ್ತೊಮ್ಮೆ ಪ್ರೀತಿಯ ದೀಪ ಬೆಳಗಿದಂತೆ ಕಾಣುತ್ತಿದೆ. ಅಂದಹಾಗೆ ಶುಭಮನ್ ಗಿಲ್ ಅವರ ಹೆಸರು ತಳಕು ಹಾಕಿಕೊಂಡಿರುವ ಅವನೀತ್ ಕೌರ್ ಜೊತೆಗೆ.
ಅಂದಹಾಗೆ ಅವನೀತ್ ಕೌರ್ ಈಗಾಗಲೇ ಹಿಂದಿಯ ಕಿರುತೆರೆಯ ಮೇಲೆ ಸದ್ದು ಮಾಡಿರುವ ನಟಿ. ಇವರು ರಿಯಾಲಿಟ್ ಶೋಗಳ ಮೂಲಹ ಅಭಿಮಾನಿಗಳ ಮನಕ್ಕೆ ಲಗ್ಗೆ ಇಟ್ಟ ನಟಿ. ಈಗ ಇವರು ಹಾಲಿವುಡ್‌ನಲ್ಲೂ ಸೌಂಡ್ ಮಾಡಲಿದ್ದಾರೆ. ಟ್ರಾಮ್ ಕ್ರೂಸ್ ಅವರ ಮುಂಬರುವ ಚಿತ್ರ ಮಿಷನ್ ಇಂಪಾಸಿಬಲ್‌ನಲ್ಲಿ ತೆರೆಯನ್ನು ಹಂಚಿಕೊಳ್ಳಲಿದ್ದಾರೆ. ಬಹು ನಿರೀಕ್ಷಿತ ಮಿಷನ್ ಇಂಪಾಸಿಬಲ್ ಈ ವರ್ಷ ತೆರೆಗೆ ಅಪ್ಪಳಿಸಲಿದೆ.

ಅವನಿತ್ ಕೌರ್ ಹಾಗೂ ಶುಭಮನ್ ಗಿಲ್ ನಡುವೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿ ವೇಗವಾಗಿ ಹರಿದಾಡುತ್ತಿದೆ. ಇದಕ್ಕೆ ರೆಕ್ಕೆ ಪುಕ್ಕ ಬಂದಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್ ಪಂದ್ಯವನ್ನು ನೋಡಲು ಅವನಿತ್ ಕೌರ್ ಮೈದಾನಕ್ಕೆ ತೆರಳಿದಾಗ. ಇವರು ಮೈದಾನಕ್ಕೆ ಬಂದಾಗಿನ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಕಮೆಂಟ್‌ನಲ್ಲಿ ಹಲವರು ಗಿಲ್ ಗಿಲ್ ಎಂದು ಬರೆದಿದ್ದಾರೆ. ಇನ್ನು ಹಲವರು ಅತ್ತಿಗೆ ಎಂದು ಕರೆದಿದ್ದಾರೆ. ಅವನೀತ್ ಕೌರ್ ಗಿಲ್‌ರನ್ನು ಮೆಚ್ಚಿಸಲು ಆಗಾಗಗ್ಗೆ ಮೈದಾನಕ್ಕೆ ತೆರಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications