For Quick Alerts
ALLOW NOTIFICATIONS  
For Daily Alerts
 

ಭಾರತ vs ದಕ್ಷಿಣ ಆಫ್ರಿಕಾ ಹೈ-ವೋಲ್ಟೇಜ್ ಪಂದ್ಯಕ್ಕೂ ಮಳೆ ಕಾಟವೇ?; ಹೇಗಿದೆ ಕೋಲ್ಕತ್ತಾ ಹವಾಮಾನ ವರದಿ?

ಶನಿವಾರ, ನವೆಂಬರ್ 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಪಂದ್ಯದಲ್ಲಿ ಡಿಎಲ್‌ಎಸ್ ವಿಧಾನದ ಮೂಲಕ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಪಂದ್ಯವು ಮಳೆಯಿಂದ ಕೆಟ್ಟದಾಗಿ ಮೊಟಕುಗೊಂಡ ಮೊದಲ ಪಂದ್ಯವೆನಿಸಿತು.

ಬೆಂಗಳೂರಿನಲ್ಲಿ ಸಂಜೆಯ ನಂತರ, ಎಡೆಬಿಡದೆ ಸುರಿದ ಮಳೆಯಿಂದಾಗಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಚೇಸಿಂಗ್‌ನಲ್ಲಿ ಕೇವಲ 25 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು.

Is Rain Effect On India vs South Africa High-Voltage Match?; How is Kolkata Weather Report?

ಇದೀಗ ಭಾನುವಾರ, ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ಹೈ-ವೋಲ್ಟೇಜ್ ವಿಶ್ವಕಪ್ ಪಂದ್ಯಕ್ಕೆ ಇದೇ ರೀತಿಯ ಮಳೆ ಕಾಟ ಇರುವುದಿಲ್ಲ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಭಾನುವಾರ ಮಧ್ಯಾಹ್ನದ ಕೋಲ್ಕತ್ತಾದ ಹವಾಮಾನ ಮುನ್ಸೂಚನೆಯು ಈ ಕ್ಷಣದಲ್ಲಿ ಮೋಡದಿಂದ ಮಸುಕಾಗಿರಲಿದೆ. ಮಧ್ಯಾಹ್ನ 1.30ರ ಸುಮಾರಿಗೆ ಉಭಯ ತಂಡಗಳು ಟಾಸ್‌ಗೆ ಹೊರಡುವಾಗ ಶೇಕಡಾ 99ರಷ್ಟು ಮೋಡ ಕವಿದಿರುತ್ತದೆ ಮತ್ತು ಶೇಕಡಾ 54 ರಷ್ಟು ಆರ್ದ್ರತೆ ಮತ್ತು ಸುಮಾರು 33 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಹವಾಮಾನ ವರದಿಯ ಪ್ರಕಾರ, ಶೇ.5ರಷ್ಟು ಮಳೆಯಾಗುವ ಸಾಧ್ಯತೆಯೂ ಇದೆ.

ಭಾನುವಾರ ಸಂಜೆಯ ಹೊತ್ತಿಗೆ, ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಮತ್ತು ಆರ್ದ್ರತೆಯ ಮಟ್ಟವು ಶೇಕಡಾ 67ಕ್ಕೆ ಏರಲಿದೆ. ಆದಾಗ್ಯೂ, ಮೋಡ ಕವಿದ ವಾತಾವರಣವು ಸಂಜೆಯ ವೇಳೆಗೆ ಶೇಕಡಾ 46ಕ್ಕೆ ಕಡಿಮೆಯಾಗಲಿದೆ. ಕೋಲ್ಕತ್ತಾದಲ್ಲಿ ಸಂಜೆಯ ನಂತರ ಇಬ್ಬನಿ ಬೀಳುವ ಸಾಧ್ಯತೆಯೂ ಇದೆ.

Is Rain Effect On India vs South Africa High-Voltage Match?; How is Kolkata Weather Report?

ಏರ್ ಕ್ವಾಲಿಟಿ ಇಂಡೆಕ್ಸ್ (AQI) ಸಹ ಕೋಲ್ಕತ್ತಾದಲ್ಲಿ "ಅತ್ಯಂತ ಅನಾರೋಗ್ಯಕರ' ಮಟ್ಟದಲ್ಲಿ 247ರ ಆಸುಪಾಸಿನಲ್ಲಿದೆ. ಇದು ಭಾನುವಾರದಂದು ಆಟವಾಡಲು ಆಟಗಾರರಿಗೆ ಕಷ್ಟವಾಗುತ್ತದೆ.

ಈಡನ್ ಗಾರ್ಡನ್ಸ್‌ನ ಪಿಚ್ ಯಾವುದೇ ನಿರ್ದಿಷ್ಟ ರೀತಿಯ ಬೌಲಿಂಗ್‌ಗೆ ಸಹಾಯಕವಾಗಿಲ್ಲ. ವೇಗದ ಬೌಲರ್‌ಗಳು ಸ್ಪಿನ್ನರ್‌ಗಳಿಗಿಂತ ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ವಿಕೆಟ್‌ಗಳನ್ನು ಪಡೆದಿದ್ದರೆ, ಸ್ಪಿನ್ನರ್‌ಗಳು ಇದುವರೆಗೆ 2023ರ ಐಸಿಸಿ ವಿಶ್ವಕಪ್‌ನಲ್ಲಿ ಉತ್ತಮ ಎಕಾನಮಿ ದರವನ್ನು ಹೊಂದಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಸಂಭಾವ್ಯ ಆಡುವ 11ರ ಬಳಗ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಜೆರಾಲ್ಡ್ ಕೋಟ್ಜಿ.

Story first published: Sunday, November 5, 2023, 10:27 [IST]
Other articles published on Nov 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+