Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏರ್ ಲಿಫ್ಟ್ ಖ್ಯಾತಿಯ ನಟಿ ಜತೆ ಕೋಚ್ ರವಿಶಾಸ್ತ್ರಿ ಡೇಟಿಂಗ್?

Is Team India coach Ravi Shastri dating Nimrat Kaur

ಮುಂಬೈ, ಸೆಪ್ಟೆಂಬರ್ 03: ಬಾಲಿವುಡ್ಡಿಗೂ ಟೀಂ ಇಂಡಿಯಾದ ಆಟಗಾರರಿಗೂ ಇರುವ ಬೆಸುಗೆ, ಬಾಂಧವ್ಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪಟೌಡಿ ಅವರ ಕಾಲದಿಂದ ವಿರಾಟ್ ಕೊಹ್ಲಿ ತನಕ ಈ ಬಾಂಧವ್ಯ ಬೆಳೆದಿದೆ. ಈಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಬಾಲಿವುಡ್ ನಟಿಯೊಬ್ಬರ ಜತೆ ಡೇಟಿಂಗ್ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಮುಂಬೈ ಮಿರರ್ ವರದಿಯಂತೆ 56 ವರ್ಷ ವಯಸ್ಸಿನ ರವಿಶಾಸ್ತ್ರಿ ಅವರು ಏರ್ ಲಿಫ್ಟ್ ಸಿನಿಮಾ ಖ್ಯಾತಿಯ ನಟಿ 36 ವರ್ಷ ವಯಸ್ಸಿನ ನಿಮ್ರತ್ ಕೌರ್ ಅವರ ಜತೆ ಮಧುರ ಸಂಬಂಧ ಹೊಂದಿದ್ದಾರಂತೆ.

ಕಳೆದ ಎರಡು ವರ್ಷಗಳಿಂದ ಇಬ್ಬರು ಡೇಟಿಂಗ್, ಚಾಟಿಂಗ್ ಮಾಡುತ್ತಿದ್ದು, ಇಬ್ಬರು ಕೂಡಾ ಈ ವಿಷಯವನ್ನು ಬಹಿರಂಗ ಪಡಿಸಿಲ್ಲ. ರವಿಶಾಸ್ತ್ರಿ ಅವರು ತಮ್ಮ ಪತ್ನಿ ರಿತು ಅವರಿಂದ ಬೇರ್ಪಟ್ಟು ದಶಕಗಳು ಕಳೆದಿವೆ. 2015 ರಲ್ಲಿ ನಿಮ್ರತ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ ರವಿ ಆವರು ಅಂದಿನಿಮ್ದ್ ತಮ್ಮ ಗೆಳತನವನ್ನು ಉಳಿಸಿಕೊಂಡಿದ್ದಾರೆ. ಜರ್ಮನಿಯ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯ ಕಾರ್ಯಕ್ರಮ ಇದಾಗಿತ್ತು

ರಾಜಸ್ಥಾನ ಮೂಲದ ನಿಮ್ರತ್ ಅವರು ಲಂಚ್ ಬಾಕ್ಸ್, ಏರ್ ಲಿಫ್ಟ್ ನಂಥ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಸದ್ಯ ವೆವ್ ಸೀರೀಸ್ ನಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಇನ್ನು ರವಿಶಾಸ್ತ್ರಿ ಅವರು ಸದ್ಯ ಭಾರತದ ತಂಡದ ಜತೆ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.

Story first published: Monday, September 3, 2018, 16:44 [IST]
Other articles published on Sep 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+