ಭಾರತ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಅಂಗಳಕ್ಕೆ ಇಳಿಯಲು ಸಿದ್ಧವಾಗಿದೆ. ಈ ವೇಳ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಹಾಗೂ ಏಕದಿನ ಸರಣಿಯನ್ನು ಆಡಲಿದೆ. ಇದಾದ ಬಳಿಕ ಭಾರತ ಚಾಂಪಿಯನ್ಸ್ ಟ್ರೋಫಿಗೆ ಪ್ರವಾಸವನ್ನು ಬೆಳೆಸಲಿದೆ. ಈ ಟ್ರೋಫಿಗೂ ಮುನ್ನವೇ ಟೀಮ್ ಇಂಡಿಯಾದಲ್ಲಿ ಕೆಲವು ಬದಲಾವಣೆಗಳನ್ನು ಕಾನಬಹುದು ಎಂದು ಅಂದಾಜಿಸಲಾಗಿದೆ. ಹಾಗಿದ್ದರೆ ಏನೆಲ್ಲಾ ಬದಲಾವಣೆ ಆಗಬಹುದು ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕೈ ಚೆಲ್ಲಿದ್ದಾಗ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಸೋತಾಗ ಮಾಜಿ ಆಟಗಾರರು ಒಂದೇ ಪ್ರಶ್ನೆ ಮಾಡಿದ್ದರು. ಟೀಮ್ ಇಂಡಿಯಾದ ಸಪೋರ್ಟ್ ಸ್ಟಾಫ್ ಏನು ಕೆಲಸ ಮಾಡುತ್ತಿದೆ. ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದರೂ ಏಕೆ ಬ್ಯಾಟಿಂಗ್ ಕೋಚ್ ಮಧ್ಯ ಪ್ರವೇಶಿಸಿ ಅವರಿಗೆ ಸರಿಯಾದ ಟಿಪ್ಸ್ ನೀಡುತ್ತಿಲ್ಲ ಎಂದು ಕಿಡಿ ಕಾರಿದ್ದರು.

ಬಿಸಿಸಿಐ ಇತ್ತೀಚಿಗೆ ರಿವ್ಯೂವ್ ಮಿಟೀಂಗ್ ನಡೆಸಿತು. ಈ ವೇಳೆ ಬಿಸಿಸಿಐ ಮುಂದೆ ಗೌತಮ್ ಗಂಭೀರ್ ಹಾಜರಾಗಿದ್ದರು. ಈ ವೇಳೆ ತಂಡದ ಪ್ರದರ್ಶನ ಇಳಿಮುಖವಾಗಲು ಕಾರಣ ಸಹ ಕೇಳಲಾಯಿತು. ಈ ವೇಳೆ ಭಾರತ ತಂಡಕ್ಕೆ ಹೊಸ ಬ್ಯಾಟಿಂಗ್ ಕೋಚ್ ನೇಮಿಸುವಂತೆ ಕೂಗು ಸಹ ವ್ಯಾಪಕವಾಗಿ ಕೇಳಿ ಬಂದಿವೆ. ಮುಖ್ಯ ಕೋಚ್ ಹೊರತಾಗಿ, ಟೀಮ್ ಇಂಡಿಯಾ ಪ್ರಸ್ತುತ ಅಭಿಷೇಕ್ ನಾಯರ್ ಮತ್ತು ರಯಾನ್ ಟೆನ್ ಡಾಯ್ಚ ರೂಪದಲ್ಲಿ 2 ಸಹಾಯಕ ಕೋಚ್‌ಗಳಿದ್ದಾರೆ.
ಬಿಸಿಸಿಐ ಅಧಿಕಾರಿಗಳು ಮತ್ತು ತಂಡದ ಆಡಳಿತ ಮಂಡಳಿಯ ನಡುವಿನ ಚರ್ಚೆಯ ನಂತರ, ಬ್ಯಾಟಿಂಗ್ ಕೋಚ್ ಬದಲಾವಣೆಗೆ ಮನಸ್ಸು ಮಾಡಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ತನ್ನ ಮಹತ್ವದ ನಿರ್ಧಾರವನ್ನು ಕೈ ಗೊಳ್ಳಬಹುದು. ಇನ್ನು ಗೌತಮ್ ಗಂಭೀರ್ ಸಪೋರ್ಟ್ ಸ್ಟಾಫ್‌ಗಳಿಗೆ ಅಂತಾರಾಷ್ಟ್ರೋಯ ಮಟ್ಟದಲ್ಲಿ ಪ್ರದರ್ಶನ ನೀಡಿದ ಅನುಭವ ಇಲ್ಲ. ಹೀಗಾಗಿ ಇವರ ಬದಲಿಗೆ ಬೇರೆ ಕೋಚ್ ನೇಮಿಸಬೇಕು. ತಂಡದಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಆಟಗಾರರ ದಂಡೇ ಇದೆ. ಕೋಚ್ ತಮ್ಮ ಅನುಭವದ ಆಧಾರದ ಮೇಲೆ ಇವರಿಗೆ ಬ್ಯಾಟಿಂಗ್ ಸಲಹೆ ನೀಡಬೇಕು ಎಂಬುದೇ ಬಿಸಿಸಿಐ ಇರಾದೆ.
ಬಾರ್ಡರ್ ಗವಾಸರ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡುವಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳೇ ಕಾರಣ. ಈ ಸರಣಿಯನ್ನು ಭಾರತ 1-3ರಿಂದ ಕೈ ಚೆಲ್ಲಿತ್ತು. ಹೀಗಾಗಿ ಬ್ಯಾಟಿಂಗ್ ವಿಭಾಗದ ಬಗ್ಗೆ ಟೀಕೆಗಳು ಕೇಳಿ ಬಂದಿವೆ. ಅಲ್ಲದೆ ಬ್ಯಾಟಿಂಗ್ ಕೋಚ್ ಬದಲಾಯಿಸುವ ಕೂಗು ಸಹ ಹೆಚ್ಚಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಕೂರಿಸುವ ಕೆಲಸವನ್ನು ಬಿಸಿಸಿಐ ಮಾಡಲಿದೆ.