ಟಿ20 ವಿಶ್ವಕಪ್ 2024 ರ ಮೊದಲು, ಟೀಮ್ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಕೊನೆಯ ಟಿ20 ಅಂತರಾಷ್ಟ್ರೀಯ ಸರಣಿಯನ್ನು ಆಡಬೇಕಾಗಿತ್ತು, ಅದು ಪೂರ್ಣಗೊಂಡಿದೆ. ಈಗ ಭಾರತೀಯ ಆಟಗಾರರು ವಿಶ್ವಕಪ್‌ಗೆ ತಯಾರಿ ನಡೆಸಲು ಐಪಿಎಲ್ 2024 ಮಾತ್ರ ಬಾಕಿ ಉಳಿದಿದೆ.
ಟೀಮ್ ಮ್ಯಾನೇಜ್ ಮೆಂಟ್ ವಿಶ್ವಕಪ್ ಗೆ ಆಟಗಾರರನ್ನು ಆಯ್ಕೆ ಮಾಡಿದೆಯೇ? ಅಥವಾ ವಿಶ್ವಕ್ಕೆ ಸಂಬಂಧಿಸಿದಂತೆ ಭಾರತ ತಂಡದ ಪ್ಲ್ಯಾನ್ ಏನು ಎಂದು ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ.

ಟಿ20 ವಿಶ್ವಕಪ್ ತಯಾರಿಯ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದಾರೆ. ವಿಶ್ವಕಪ್‌ಗೆ ಸಂಪೂರ್ಣ ತಂಡವನ್ನು ಇನ್ನೂ ಸೆಲೆಕ್ಟ್ ಆಗಿಲ್ಲ. ಆದರೆ 8-10 ಆಟಗಾರರು ಮನಸ್ಸಿನಲ್ಲಿದ್ದಾರೆ. ನಾವು 15 ಸದಸ್ಯರ ತಂಡವನ್ನು ಅಂತಿಮಗೊಳಿಸಿಲ್ಲ. ಆದರೆ ನಾವು 8-10 ಆಟಗಾರರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇವೆ.
ಆದ್ದರಿಂದ ನಾವು ಪರಿಸ್ಥಿತಿಗಳಿಗೆ ಅನುಗುಣವಾಗಿ ನಮ್ಮ ತಂಡದ ಸಂಯೋಜನೆಯನ್ನು ಮಾಡುತ್ತೇವೆ. ವೆಸ್ಟ್ ಇಂಡೀಸ್‌ನಲ್ಲಿ ಪರಿಸ್ಥಿತಿಗಳು ನಿಧಾನವಾಗಿರುತ್ತವೆ, ಆದ್ದರಿಂದ ನಾವು ಅದಕ್ಕೆ ಅನುಗುಣವಾಗಿ ಆಯ್ಕೆ ಮಾಡುತ್ತೇವೆ" ಎಂದು ರೋಹಿತ್ ಹೇಳಿದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವನ್ನು ಭಾರತ ತಂಡ ಆಡಿತು. ನಾಯಕ ರೋಹಿತ್ ಶರ್ಮಾ ಅವರ ಬ್ಯಾಟ್ ಅಬ್ಬರಿಸಿತು. ಈ ಪಂದ್ಯದಲ್ಲಿ ರೋಹಿತ್ 69 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಅಜೇಯ 121 ರನ್ ಗಳಿಸಿದರು.

ಟೀಂ ಇಂಡಿಯಾ ಅತ್ಯಂತ ಸಂಕಷ್ಟದಲ್ಲಿದ್ದಾಗ ರೋಹಿತ್ ಅವರ ಬ್ಯಾಟ್‌ನಿಂದ ಈ ಶತಕ ಮೂಡಿ ಬಂದಿತು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹಿಟ್‌ಮ್ಯಾನ್ ಅವರ 5ನೇ ಶತಕವಾಗಿದೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಒಂದಲ್ಲ, ಎರಡು ಸೂಪರ್ ಓವರ್‌ಗಳ ನಂತರ ಕೊನೆಗೊಂಡಿತು. ಮೊದಲಿಗೆ ಉಭಯ ತಂಡಗಳು ತಲಾ 212 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡವು. ನಂತರ ಮೊದಲ ಸೂಪರ್ ಪಂದ್ಯ ನಡೆಯಿತು. ಮೊದಲ ಸೂಪರ್ ಓವರ್ ಕೂಡ ಟೈನಲ್ಲಿ ಕೊನೆಗೊಂಡಿತು. ಇದರಲ್ಲಿ ಎರಡೂ ತಂಡಗಳು ತಲಾ 16 ರನ್ ಗಳಿಸಿದವು. ನಂತರ ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 11 ರನ್ ಗಳಿಸಿ ಕೇವಲ 1 ರನ್‌ಗೆ ಅಫ್ಘಾನಿಸ್ತಾನವನ್ನು ಆಲೌಟ್ ಮಾಡಿತು.