ICC T20 Rankings: ಇಶಾನ್ ಕಿಶನ್ ನಂಬರ್ 1 ಬ್ಯಾಟರ್, ಅಭಿಷೇಕ್ ಶರ್ಮಾಗೆ 2ನೇ ಸ್ಥಾನ
ಐಸಿಸಿ ಶ್ರೇಯಾಂಕಗಳು ಬುಧವಾರ ಬಿಡುಗಡೆಯಾಗಿವೆ. ಈ ವೇಳೆ ಭಾರೀ ಬದಲಾವಣೆಗಳು ಕಂಡು ಬಂದಿವೆ. ಹಲವು ತಿಂಗಳುಗಳ ಕಾಲ ಐಸಿಸಿ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದ ಅಭಿಷೇಕ್ ಶರ್ಮಾ ಅವರ ಸ್ಥಾನ ಕುಸಿತವಾಗಿದೆ. ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಇಶಾನ್ ಕಿಶನ್ ನೂತನ ನಂಬರ್ ಒನ್ ಬ್ಯಾಟರ್ ಆಗಿ ತಮ್ಮ ಸ್ಥಾನವನ್ನು ಅಲಂಕರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿರುವ ಇಶಾನ್ ಕಿಶನ್, ಪ್ರಸಕ್ತ ವರ್ಷದಲ್ಲಿ ಅಮೋಘ ಲಯವನ್ನು ಹೊಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಇವರು, ಅಲ್ಲಿಂದ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಇವರು 876 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಟಿ20 ಶ್ರೇಯಾಂಕದಲ್ಲಿ ಒಂದು ಸ್ಥಾನ ಬಡ್ತಿ ಪಡೆದಿದ್ದು, ಅಗ್ರಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಏತನ್ಮಧ್ಯೆ, ಅಭಿಷೇಕ್ ಶರ್ಮಾ ಒಂದು ಸ್ಥಾನ ಕುಸಿದಿದ್ದು, ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ರೇಟಿಂಗ್ 869 ಕ್ಕೆ ಇಳಿದಿದೆ. ಆದಾಗ್ಯೂ, ಇಶಾನ್ ಮತ್ತು ಅಭಿಷೇಕ್ ಅವರ ಶ್ರೇಯಾಂಕ ಮತ್ತು ರೇಟಿಂಗ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ, ಆದ್ದರಿಂದ ಇಬ್ಬರು ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನೀಡುವ ಪ್ರದರ್ಶನದ ಆಧಾರದ ಮೇಲೆ ಮತ್ತೆ ಸ್ಥಾನಗಳು ಬದಲಾಗುತ್ತವೆ.
ಅಗ್ರಸ್ಥಾನದಲ್ಲಿದ್ದ ಅಭಿಷೇಕ್ ಶರ್ಮಾ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಇವರು 869 ರೇಟಿಂಗ್ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್ ಇದ್ದು, ನಾಲ್ಕನೇ ಸ್ಥಾನದಲ್ಲಿ ಫಿಲ್ ಸಾಲ್ಟ್, ಇನ್ನು ಐದನೇ ಸ್ಥಾನದಲ್ಲಿ ಪತುಮ್ ನಿಸ್ಸಾಂಕ ಇದ್ದಾರೆ.
ತಿಲಕ್‌ಗೆ 6ನೇ ಸ್ಥಾನ
ಭಾರತದ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ತಿಲಕ್ ವರ್ಮಾ 747 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಜೋಸ್ ಬಟ್ಲರ್ ಒಂದು ಸ್ಥಾನ ಏರಿಕೆ ಕಂಡಿದ್ದು 7ನೇ ಸ್ಥಾನ, ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ 8ನೇ ಸ್ಥಾನ, ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ 9, ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ 10ನೇ ಸ್ಥಾನದಲ್ಲಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಸಂಜು ಸ್ಯಾಮ್ಸನ್ ಶ್ರೇಯಾಂಕದಲ್ಲೂ ಇಳಿಕೆ ಆಗಿದೆ. ಇವರು 5 ಸ್ಥಾನ ಕುಸಿತ ಕಂಡಿದ್ದು, 26ನೇ ಸ್ಥಾನದಲ್ಲಿದ್ದಾರೆ. ಇನ್ನು ಶಿವಂ ದುಬೆ 27ನೇ ಸ್ಥಾನದಲ್ಲಿದ್ದಾರೆ.
ವರುಣ್ ಚಕ್ರವರ್ತಿ ಒಂದು ಸ್ಥಾನ ಕುಸಿತ
ಟೀಮ್ ಇಂಡಿಯಾದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಐರ್ಲೆಂಡ್ ಪ್ರವಾಸದ ಭಾಗವಾಗಿರಲಿಲ್ಲ. ಇವರು ಐಸಿಸಿ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದು 3ನೇ ಸ್ಥಾನದಲ್ಲಿದ್ದಾರೆ. ಇನ್ನು ಪಾಕಿಸ್ತಾನದ ಅಬ್ರಾರ್ ಅಹ್ಮದ್ 2ನೇ ಸ್ಥಾನ ಪಡೆದಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ರಶೀದ್ ಖಾನ್ 753 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂಬರ್ 1 ಸ್ಥಾನ ಪಡೆದಿದ್ದಾರೆ.
ಇನ್ನು ಟಾಪ್ 20 ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ 6, ವೇಗಿ ಅರ್ಷದೀಪ್ ಸಿಂಗ್ 16, ಅಕ್ಷರ್ ಪಟೇಲ್ 19ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications