ದಾಖಲೆಯ ದ್ವಿಶತಕ ಸಿಡಿಸಿ 300 ರನ್‌ಗಳಿಸುವ ಅವಕಾಶ ಕಳೆದುಕೊಂಡೆ ಎಂದ ಇಶಾನ್ ಕಿಶನ್

ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ರನ್ ಮಳೆ ಹರಿಸಿದೆ. ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ದಾಖಲೆಯ ದ್ವಿಶತಕ ಸಿಡಿಸಿದರೆ ವಿರಾಟ್ ಕೊಹ್ಲಿ 72ನೇ ಅಂತಾರಾಷ್ಟ್ರಿಯ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತ ತಂಡ ಬಾಂಗ್ಲಾದೇಶಕ್ಕೆ 410 ರನ್‌ಗಳ ಬೃಹತ್ ಗುರಿ ನಿಗದಿಪಡಿಸಿದೆ.
ಈ ಪಂದ್ಯದ ಬಳಿಕ ಮಾತನಾಡಿದ ದ್ವಿಶತಕ ವೀರ ಇಶಾನ್ ಕಿಶನ್ ತಾನು ಔಟಾಗದೆ ಉಳಿದುಕೊಂಡಿದ್ದರೆ 300 ರನ್‌ಗಳಿಸುವ ಅವಕಾಶವಿತ್ತು ಎಂದಿದ್ದಾರೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ 131 ಎಸೆತಗಳನ್ನು ಎದುರಿಸಿ 210 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. 24 ಬೌಂಡರಿ ಹಾಗೂ 10 ಸಿಕ್ಸರ್‌ಗಳನ್ನು ಒಳಗೊಂಡಿತ್ತು ಈ ಇನ್ನಿಂಗ್ಸ್.

300 ರನ್‌ಗಳಿಸುವ ಅವಕಾಶವಿತ್ತು
ಈ ಸ್ಪೋಟಕ ಇನ್ನಿಂಗ್ಸ್‌ನ ಬಳಿಕ ಮಾತನಾಡಿದ ಇಶಾನ್ ಕಿಶನ್ "ಈ ವಿಕೆಟ್ ಬ್ಯಾಟಿಂಗ್ ಮಾಡಲು ಬಹಳ ಅದ್ಭುತವಾಗಿತ್ತು. ನನ್ನ ಉದ್ದೇಶ ಸ್ಪಷ್ಟವಾಗಿತ್ತು. ಈಗ ದ್ವಿಶತ ಸಿಡಿಸಿದ ದಿಗ್ಗಜ ಆಟಗಾರರ ಜೊತೆಗೆ ನನ್ನ ಹೆಸರು ಕೂಡ ಕೇಳಿಸಿಕೊಳ್ಳಲು ಅದೃಷ್ಟ ಮಾಡಿದ್ದೇನೆ. ನಾನು ವಿಕೆಟ್ ಕಳೆದುಕೊಂಡಾಗ ಇನ್ನು ಕೂಡ 15 ಓವರ್‌ಗಳ ಆಟ ಬಾಕಿಯಿತ್ತು. ಹಾಗಾಗಿ ನಾನು 300 ರನ್‌ಗಳನ್ನು ಗಳಿಸುವ ಅವಕಾಶವೂ ಇತ್ತು" ಎಂದಿದ್ದಾರೆ ಇಶಾನ್ ಕಿಶನ್.

ವಿರಾಟ್ ನೀಡಿದ ಸಲಹೆ
ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಬ್ಯಾಟಿಂಗ್ ಬಗ್ಗೆಯೂ ಇಶಾನ್ ಕಿಶನ್ ಮಾತನಾಡಿದ್ದಾರೆ. ಶತಕದ ಸನಿಹಕ್ಕೆ ಬಂದಾಗ ಕೊಹ್ಲಿ ತಾಳ್ಮೆಯಿಂದ ಆಡುವಂತೆ ಎಚ್ಚರಿಸಿದರು ಎಂದಿದ್ದಾರೆ ಇಶಾನ್ ಕಿಶನ್. "ವಿರಾಟ್ ಅವರ ಜೊತೆಗೆ ಬ್ಯಾಟಿಂಗ್ ನಡೆಸುವಾಗ ಅವರು ನನಗೆ ಯಾವ ಆಟಗಾರನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬೇಕು ಎಂದು ಸಲಹೆ ನೀಡುತ್ತಿದ್ದರು. ಇನ್ನು ನಾನು 95 ರನ್‌ಗಳಿಸಿದ್ದಾಗ ನನ್ನನ್ನು ತಾಳ್ಮೆಯಿಮದ ಆಡುವಂತೆ ಎಚ್ಚರಿಸಿದರು. ಇದ ನನ್ನ ಮೊದಲ ಶತಕ ಎಂದು ನೆನಪಿಸಿದರು" ಎಂದಿದ್ದಾರೆ ಇಶಾನ್ ಕಿಶನ್.

ಬೃಹತ್ ಗುರಿ ನೀಡಿದ ಭಾರತ
ಚಿತ್ತಗಾಂಗ್‌ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರವಾಗಿ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಜೋಡಿ ರನ್ ಮಳೆ ಹರಿಸಿದರು. ಇಶಾನ್ ಕಿಶನ್ ದಾಖಲೆಯ ದ್ವಿಶತಕ ಸಿಡಿಸಿದರೆ ಕೊಹ್ಲಿ ಶತಕದ ಸಾಧನೆ ಮಾಡಿದ್ದಾರೆ. ಈ ಇಬ್ಬರು ಆಟಗಾರರು ಎರಡನೇ ವಿಕೆಟ್‌ಗೆ ಬರೊಬ್ಬರಿ 290 ರನ್‌ಗಳ ಜೊತೆಯಾಟವನ್ನು ನೀಡಿ ಮಿಂಚಿದ್ದಾರೆ. ಬಾಂಗ್ಲಾದೇಶದ ಪ್ರತಿಯೊಬ್ಬ ಬೌಲರ್‌ನನ್ನು ಕೂಡ ದಂಡಿಸಿದರು ಈ ಜೋಡಿ. ಇದರ ಪರಿಣಾಮವಾಗಿ ಈ ಪಂದ್ಯದಲ್ಲಿ ಭಾರತ ಬರೊಬ್ಬರಿ 410 ರನ್‌ಗಳ ಬೃಹತ್ ಗುರಿ ನಿಗದಿಪಡಿಸಿದೆ.

ಇತ್ತಂಡಗಳ ಆಡುವ ಬಳಗ
ಬಾಂಗ್ಲಾದೇಶ: ಅನಾಮುಲ್ ಹಕ್, ಲಿಟನ್ ದಾಸ್ (ನಾಯಕ), ಯಾಸಿರ್ ಅಲಿ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್
ಬೆಂಚ್: ಹಸನ್ ಮಹಮೂದ್, ನೂರುಲ್ ಹಸನ್, ನಸುಮ್ ಅಹ್ಮದ್, ನಜ್ಮುಲ್ ಹೊಸೈನ್ ಶಾಂತೋ
ಟೀಮ್ ಇಂಡಿಯಾ: ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ & ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಬೆಂಚ್: ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications