ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಟಿ20 ವಿಶ್ವಕಪ್‌ನಲ್ಲಿ ಮುಂದುವರಿಸಿದ್ದಾರೆ. ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಇಶಾನ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ನಮೀಬಿಯಾ ವಿರುದ್ಧದ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಧಾರವಾದರು. ಅಲ್ಲದೆ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಶಾನ್ ಕಿಶನ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬ್ಯಾಟ್ ಮಾಡಿದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಇವರಿಗೆ ಆಡುವ ಅವಕಾಶ ಲಭಿಸಿತು. ಈ ಅವಕಾಶವನ್ನು ಬಳಿಸಿಕೊಂಡು ಬಿಗ್ ಇನಿಂಗ್ಸ್ ಕಟ್ಟುತ್ತಾ ಸಾಗಿದರು. ಅಲ್ಲಿಂದ ಇವರನ್ನು ತಂಡ ಕೈ ಬಿಡಲಿಲ್ಲ. ಇವರನ್ನು ಬ್ಯಾಕ್ ಮಾಡುತ್ತಾ ಬಂದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಖದಲ್ಲಿ ಮಂದಹಾಸ ಮೂಡಿಸುವಂತಹ ಆಟವನ್ನು ಇಶಾನ್ ಆಡಿದರು. ನಮೀಬಿಯಾ ಬೌಲರ್‌ಗಳನ್ನು ಪವರ್ ಪ್ಲೇನಲ್ಲಿ ದಂಡಿಸಿದ ಇಶಾನ್ ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿ ಮಿಂಚಿದರು.

ಟಿ20 ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ಎದುರಿಸಿದ 24 ಎಸೆತಗಳಲ್ಲಿ 6 ಎಸೆತವನ್ನು ಬೌಂಡರಿ ಗೆರೆ ದಾಟಿಸಿದರೆ, 5 ಎಸೆತಗಳನ್ನು ಪ್ರೇಕ್ಷಕರ ಗ್ಯಾಲರಿಗೂ ಅಟ್ಟಿದ್ದರು. ಇವರು ಈ ಬಿರುಸಿನ ಆಟದ ಫಲವಾಗಿ ಇವರು 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಂತಿಮವಾಗಿ ಇವರ ಆಟ 61 ರನ್ ಗಳಿಗೆ ಕೊನೆಯಾಯಿತು. ಈ ಮೂಲಕ ಇಶಾನ್ ಕಿಶನ್ ಹಲವು ದಾಖಲೆಗಳನ್ನು ಬರೆದರು.
ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ ಯಾವೊಬ್ಬ ಬ್ಯಾಟರ್ ಅರ್ಧಶತಕ ಬಾರಿಸಿರಲಿಲ್ಲ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಡುತ್ತಿರುವ ಇಶಾನ್ ಕಿಶನ್, ಟಿ20 ವಿಶ್ವಕಪ್ ಇತಿಹಾಸ ಬರೆದರು. ಈ ಸಾಧನೆಯನ್ನು ಮಾಡಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿತ್ತು. ಇವರು ಟಿ20 ವಿಶ್ವಕಪ್‌ನಲ್ಲಿ 45 ರನ್ ಬಾರಿಸಿದ್ದರು.
ಇಂಗ್ಲೆಂಡ್ ವಿರುದ್ಧ, 2007, ಯುವರಾಜ್ ಸಿಂಗ್ - 12 ಎಸೆತಗಳು
ಸ್ಕಾಟ್ಲೆಂಡ್ ವಿರುದ್ಧ, 2021, ಕೆಎಲ್ ರಾಹುಲ್ - 18 ಎಸೆತಗಳು
ಆಸ್ಟ್ರೇಲಿಯಾ ವಿರುದ್ಧ, 2024, ರೋಹಿತ್ ಶರ್ಮಾ - 19 ಎಸೆತಗಳು
ಆಸ್ಟ್ರೇಲಿಯಾ ವಿರುದ್ಧ, 2007, ಯುವರಾಜ್ ಸಿಂಗ್ - 20 ಎಸೆತಗಳು
ನಮೀಬಿಯಾ ವಿರುದ್ಧ, 2026, ಇಶಾನ್ ಕಿಶನ್ - 20 ಎಸೆತಗಳು

ನಮೀಬಿಯಾ ವಿರುದ್ಧದ ಪಂದ್ಯದಲ್ಲಿ, ಇಶಾನ್ ಕಿಶನ್ ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ಬಾರಿಸಿದರು. ಈ ಮೂಲಕ ಮೊದಲ ಆರು ಓವರ್‌ಗಳಲ್ಲಿ ಅರ್ಧಶತಕ ಬಾರಿಸಿದ ಮೂರನೇ ಭಾರತೀಯ ಬ್ಯಾಟರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ಸಾಧನೆಯನ್ನು ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮಾಡಿದ್ದರು.