ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಲು ಸಜ್ಜಾದ ಇಶಾನ್ ಕಿಶನ್: ಬುಚ್ಚಿ ಬಾಬು ಟೂರ್ನಿಯಲ್ಲಿ ಅಬ್ಬರದ ಶತಕ
ಟೀಮ್ ಇಂಡಿಯಾ ಜೆರ್ಸಿ ಮತ್ತೆ ಮೈ ಮೇಲೆ ಹಾಕಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವ ಟೀಮ್ ಇಂಡಿಯಾ ಆಟಗಾರನ ಕನಸಿಗೆ ಪುಷ್ಠಿ ಸಿಕ್ಕಿದೆ. ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ, ಆಯ್ಕೆದಾರರನ್ನು ಒಮ್ಮೆ ತಮ್ಮತ್ತ ನೋಡುವಂತೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ತಮ್ಮಲ್ಲಿ ಇನ್ನು ಕ್ರಿಕೆಟ್ ಸಾಕಷ್ಟಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಟೀಮ್ ಇಂಡಿಯಾದಿಂದ ಬಹುದಿನಗಳ ಕಾಲ ಹೊರಗುಳಿದಿದ್ದ ಪ್ಲೇಯರ್ ಇಶಾನ್ ಕಿಶನ್ ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಝಲಕ್ ತೋರಿಸಿದ್ದಾರೆ. ಜಾರ್ಖಂಡ್ ಪರ ಬ್ಯಾಟ್ ಮಾಡಿದ ಇವರು ಅಮೋಘ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾಗಿದ್ದಾರೆ. ಈ ಮೂಲಕ ಆಯ್ಕೆದಾರರ ಗಮನವನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ.

ಕಮ್‌ಬ್ಯಾಕ್ ಕನಸಿನಲ್ಲಿ ಇಶಾನ್
ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿರುವ ಇಶಾನ್ ಕಿಶನ್‌ಗೆ ಈ ಶತಕ ವಿಶೇಷವಾಗಿದೆ. ಅಲ್ಲದೆ ಜಾರ್ಖಂಡ್ ತಂಡದ ನೆರವಿಗೂ ಬಂದಿದೆ. ಏಕೆಂದರೆ ಈ ಪಂದ್ಯದಲ್ಲಿ ಜಾರ್ಖಂಡ್ ತಂಡದ ಪರ ಯಾವೊಬ್ಬ ಬ್ಯಾಟರ್ ಅರ್ಧಶತಕ ಬಾರಿಸಲು ಸಹ ಸಾಧ್ಯವಾಗಲಿಲ್ಲ. ಒಂದು ತುದಿಯಲ್ಲಿ ವಿಕೆಟ್ ಬೀಳುತ್ತಾ ಇದ್ದರೂ, ಧೃತಿ ಗೆಡದೆ ಬ್ಯಾಟ್ ಮಾಡಿದ ಇಶಾನ್, ಮೂರಂಕಿ ಮುಟ್ಟಿ ಸಂಭ್ರಮಿಸಿದರು.
ಜಾರ್ಖಂಡ್ ಪರ ಅಬ್ಬರ
ಬುಚ್ಚಿ ಬಾಬು ಟೂರ್ನಿ ನಡೆಯುತ್ತಿದೆ. ಸದ್ಯ ಜಾರ್ಖಂಡ್ ವಿರುದ್ಧ ಮಧ್ಯ ಪ್ರದೇಶ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ ತಂಡ 225 ರನ್ ಗಳಿಸಿ, ಆಲೌಟ್ ಆಯಿತು. ಮಧ್ಯ ಪ್ರದೇಶದ ಪರ ಗರಿಷ್ಠ 84 ರನ್‌ಗಳ ಇನಿಂಗ್ಸ್ ಆಡಿದರು. ಅಲ್ಲದೆ ಅರ್ಹಮ್ ಅಕಿಲ್ 57 ರನ್ ಗಳಿಸುವಲ್ಲಿ ಯಶಸ್ವಿಯಾದರು.

ಮೊದಲ ಇನಿಂಗ್ಸ್ ಆರಂಭಿಸಿದ ಜಾರ್ಖಂಡ್‌ನ ಸರದಿ ಬಂತು. ಇಶಾನ್ ಕಿಶನ್ ಹೊರತು ಪಡಿಸಿ ಈ ತಂಡದ ಯಾವುದೇ ಬ್ಯಾಟ್ಸ್ ಮನ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದರು. ತಮ್ಮ ಧಮಾಕೆದಾರ್ ಬ್ಯಾಟಿಂಗ್ ಮುಂದುವರೆಸಿದ ಇಶಾನ್ ಕೇವಲ 86 ಎಸೆತಗಳಲ್ಲಿ ಶತಕ ಪೂರೈಸಿದರು. ಇಶಾನ್, ಎರಡು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು.
ಇಶಾನ್ 114 ರನ್
ಇಶಾನ್ ಕಿಶನ್ 107 ಎಸೆತಗಳನ್ನು ಎದುರಿಸಿ 114 ರನ್ ಕಟ್ಟಿದರು. ಆಗ ಜಾರ್ಖಂಡ್ ತಂಡದ ಒಟ್ಟು ಸ್ಕೋರ್ 252ಕ್ಕೆ ತಲುಪಿತ್ತು. ಈಗ ಎಲ್ಲರ ಚಿತ್ತ ಫಲಿತಾಂಶ ಕಾದು ನೋಡಬೇಕಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮರಳುವ ಆಸೆಯನ್ನು ಹೊಂದಿರುವ ಇಶಾನ್ ಅವರ ಆಸೆಗೆ ಈ ಇನಿಂಗ್ಸ್ ಪುಷ್ಠಿ ನೀಡಿದೆ.
ಸೆಪ್ಟೆಂಬರ್ 19 ರಿಂದ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಇನ್ನು ತಂಡವನ್ನು ಪ್ರಕಟಿಸಿಲ್ಲ. ಮುಂದಿನವಾರದಲ್ಲಿ ಪ್ರಕಟಿಸಬಹುದು. ಇಶಾನ್ ಕಿಶನ್ ಅವರ ಇನ್ನಿಂಗ್ಸ್ ಆಯ್ಕೆದಾರರ ಗಮನ ಸೆಳೆಯಬಹುದು.
ವೈರಲ್ ವಿಡಿಯೋ
ಬುಚ್ಚಿ ಬಾಬು ಟೂರ್ನಿಯಲ್ಲಿ ಇಶಾನ್ ಕಿಶನ್ ಬರೀ ಬ್ಯಾಟಿಂಗ್‌ನಿಂದ ಕಮಾಲ್ ಪ್ರದರ್ಶನ ನೀಡಲಿಲ್ಲ. ಬದಲಿಗೆ ವಿಕೆಟ್ ಕೀಪಿಂಗ್‌ನಲ್ಲೂ ಅಮೋಘ ಪ್ರದರ್ಶನ ನೀಡಿದ್ದಾರೆ. ಮಧ್ಯ ಪ್ರದೇಶ ಬ್ಯಾಟಿಂಗ್ ಮಾಡುವ ವೇಳೆ 74ನೇ ಓವರ್‌ನಲ್ಲಿ ಶುಭಂ ಕುಶ್ವಾಹ ಮಧ್ಯಪ್ರದೇಶ ಪರ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಅತಿವೇಗದಲ್ಲಿ ಬಂದ ಬೌನ್ಸಿ ಚೆಂಡನ್ನು, ಕಟ್ ಶಾಟ್ ಆಡಲು ಯತ್ನಿಸುತ್ತಿದ್ದಾಗ ಬ್ಯಾಟ್ ನ ಅಂಚು ಚೆಂಡಿಗೆ ಬಡಿಯಿತು. ಚೆಂಡು ಗಾಳಿಯಲ್ಲಿ ಚಿಮ್ಮಿದ್ದನ್ನು ಕಂಡು ಇಶಾನ್ ಕ್ಯಾಚ್ ಪಡೆಯಲು ಪ್ರಯತ್ನಿಸಿದರು. ಈ ಕ್ಯಾಚ್ ಪಡೆಯುವುದು ಸಲುಭದ ಮಾತು ಆಗಿರಲಿಲ್ಲ. ಆದರೂ ಇಶಾನ್ ಅಮೋಗ ಕ್ಯಾಚ್ ಪಡೆದರು. ಈ ಕ್ಯಾಚ್ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications