Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸನ್‌ ವಿರುದ್ಧ ಆರ್‌ಸಿಬಿಗೆ ಸೋಲು: ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿತ

ಸಂಘಟಿತ ಆಟದ ಪ್ರದರ್ಶನ ನೀಡಿದ ಸನ್‌ರೈಸರ್ಸ್‌ ಹೈದರಾಬಾದ್‌ 42 ರನ್‌ಗಳಿಂದ ಆರ್‌ಸಿಬಿ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಪಂದ್ಯದಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಆರ್‌ಸಿಬಿ ಆಸೆ ಕುಸಿದಿದೆ. ಭಾರೀ ಅಂತರದಿಂದ ಸೋಲು ಕಂಡಿದ್ದರಿಂದ ಆರ್‌ಸಿಬಿ ರನ್‌ ರೇಟ್‌ ಕಡಿಮೆ ಆಗಿದೆ. ಈ ಸೋಲಿನ ಬಳಿಕ ಆರ್‌ಸಿಬಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 231 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 19.5 ಓವರ್‌ಗಳಲ್ಲಿ 189 ರನ್‌ಗಳೊಗೆ ಆಲೌಟ್ ಆಯಿತು.

Ishan Kishan s 94 Leads SRH to 42-Run Win Over RCB Bengaluru Drop to 3rd

ಸವಾಲಿನ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್‌ಗೆ ಸೊಗಸಾದ ಆಟದ ಪ್ರದರ್ಶನ ನೀಡಿದರು. ಈ ಜೋಡಿ ಪವರ್ ಪ್ಲೇನಲ್ಲಿ ಆರ್ಭಟಿಸಿದರು. ಅಗತ್ಯ ರನ್‌ ರೇಟ್‌ಗೆ ತಕ್ಕಂತೆ ರನ್ ಕಲೆ ಹಾಕಿದ ವಿರಾಟ್, ಸಾಲ್ಟ್‌ ಮೊದಲ ಆರು ಓವರ್‌ಗಳಲ್ಲಿ 72 ರನ್‌ ಸೇರಿಸಿತು. ಉತ್ತಮ ಲಯದಲ್ಲಿದ್ದ ವಿರಾಟ್‌ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 43 ರನ್‌ ಸಿಡಿಸಿದರು.

ದೇವದತ್ ಪಡಿಕ್ಕಲ್‌ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಆಡುವ ಅವಕಾಶವನ್ನು ಪಡೆದ ಮಯಾಂಕ್ ಅಗರ್‌ವಾಲ್‌ ಎರಡನೇ ವಿಕೆಟ್‌ಗೆ ಫಿಲ್‌ ಸಾಲ್ಟ್‌ ಜೊತೆಗೂಡಿ 22 ಎಸೆತಗಳಲ್ಲಿ 40 ರನ್‌ ಸಿಡಿಸಿತು.

ಫಿಲ್‌ ಸಾಲ್ಟ್ ಅರ್ಧಶತಕ

ಗಾಯದ ಸಮಸ್ಯೆಯಿಂದ ಕಳೆದ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದ ಫಿಲ್ ಸಾಲ್ಟ್‌ ಅಬ್ಬರಿಸಿದರು. ಇವರು 32 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ 62 ರನ್‌ ಸಿಡಿಸಿದರು.

ರಜತ್‌ ಪಾಟಿದಾರ್‌ ಹಾಗೂ ಜಿತೇಶ್‌ ಶರ್ಮಾ ಜೋಡಿ 26 ಎಸೆತಗಳಲ್ಲಿ 44 ರನ್‌ ಸಿಡಿಸಿತು. ರಜತ್‌ ಪಾಟಿದಾರ್ 18 ರನ್ ಬಾರಿಸಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ರನ್‌ಔಟ್‌ ಆದರು. ಜಿತೇಶ್‌ ಶರ್ಮಾ 24 ರನ್‌ ಬಾರಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಆರ್‌ಸಿಬಿ ರನ್‌ ಕಲೆ ಹಾಕುವಲ್ಲಿ ವಿಫಲವಾಯಿತು.

ಇಶಾನ್‌ ಕಿಶನ್‌ ಅಬ್ಬರ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್‌ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಅಭಿಷೇಕ್‌ ಶರ್ಮಾ (34) ಹಾಗೂ ಟ್ರಾವಿಸ್‌ ಹೆಡ್‌ (17) ಮೊದಲ ವಿಕೆಟ್‌ಗೆ 4 ಓವರ್‌ಗಳಲ್ಲಿ 54 ರನ್‌ ಸಿಡಿಸಿದರು. ಮೂರನೇ ವಿಕೆಟ್‌ಗೆ ಇಶಾನ್‌ ಕಿಶನ್‌ ಹಾಗೂ ಭರವಸೆಯ ಆಟಗಾರ ಹ್ಯಾನ್ರಿಕ್ ಕ್ಲಾಸೇನ್‌ (24) ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿಯ ಆಟಕ್ಕೆ ಬ್ರೇಕ್‌ ಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ವಿಫಲರಾದರು. ಈ ಜೋಡಿ ಮೂರನೇ ವಿಕೆಟ್‌ಗೆ 27 ಎಸೆತಗಳಲ್ಲಿ 48 ರನ್‌ ಸಿಡಿಸಿದರು.

Ishan Kishan s 94 Leads SRH to 42-Run Win Over RCB Bengaluru Drop to 3rd

ನಾಲ್ಕನೇ ವಿಕೆಟ್‌ಗೆ ಇಶಾನ್‌ ಕಿಶನ್‌ ಹಾಗೂ ಅನಿಕೇತ್ ವರ್ಮಾ (26) ಜೋಡಿ ರನ್‌ ಕಲೆ ಹಾಕಿತು. ಈ ಜೋಡಿ ಸಹ ರನ್‌ ರೇಟ್‌ ಹಿಗ್ಗಿಸುವಲ್ಲಿ ಸಫಲವಾಯಿತು. ಈ ಜೋಡಿ 17 ಎಸೆತಗಳಲ್ಲಿ 48 ರನ್‌ ಸಿಡಿಸಿತು.

ಭರವಸೆಯ ಆಟಗಾರ ಇಶಾನ್‌ ಕಿಶನ್‌ ಆರ್‌ಸಿಬಿ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 48 ಎಸೆತಗಳಲ್ಲಿ ಅಜೇಯ 94 ರನ್‌ ಸಿಡಿಸಿದರು. ಇವರ ಇನಿಂಗ್ಸ್‌ನಲ್ಲಿ 7 ಬೌಂಡರಿ, 5 ಸಿಕ್ಸರ್‌ ಸೇರಿವೆ.

Story first published: Friday, May 23, 2025, 23:50 [IST]
Other articles published on May 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+