Syed Mushtaq Ali Trophy Final: ಜಾರ್ಖಂಡ್‌ಗೆ ಚೊಚ್ಚಲ ಪ್ರಶಸ್ತಿ
ಪುಣೆ: ನಾಯಕ ಇಶಾನ್ ಕಿಶನ್ ಬಾರಿಸಿದ ಶತಕ ಹಾಗೂ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ಜಾರ್ಖಂಡ್ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ 69 ರನ್‌ಗಳಿಂದ ಹರಿಯಾಣ ಮಣಿಸಿ ಚೊಚ್ಚಲ ಬಾರಿಗೆ ಟ್ರೋಫಿಯನ್ನು ಗೆದ್ದು ಇತಿಹಾಸ ಬರೆದಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಶಾನ್ ಕಿಶನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.
ಜಾರ್ಖಂಡ್ ನೀಡಿದ್ದ 263 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಹರಿಯಾಣ ಬ್ಯಾಟರ್‌ಗಳು ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಟೂರ್ನಿಯುದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಅಂಕಿತ್ ಕುಮಾರ್ ಫೈನಲ್ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿ ಔಟ್ ಆದರು. ಇದೇ ಓವರ್‌ನಲ್ಲಿ ಆಶಿಶ್ ಸಿವಾಚ್ ಸಹ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ದೊಡ್ಡ ಮೊತ್ತದ ಬೆನ್ನು ಹತ್ತಿದ್ದ ಹರಿಯಾಣಗೆ ಆರಂಭದಲ್ಲಿ ದೊಡ್ಡ ಪೆಟ್ಟು ಬಿದ್ದಿತು.

3ನೇ ವಿಕೆಟ್‌ಗೆ ಅರ್ಶ್ ರಂಗ (17) ಹಾಗೂ ಯಶ್ವರ್ಧನ್ ದಲಾಲ್ ಜೋಡಿ 35 ರನ್ ಜೊತೆಯಾಟದ ಕಾಣಿಕೆ ನೀಡಿತು. 4ನೇ ವಿಕೆಟ್‌ಗೆ ಯಶ್ವರ್ಧನ್ ಮತ್ತು ನಿಶಾಂತ್ ಸಿಂಧು ಜೋಡಿ ಆರ್ಭಟಿಸಿತು. ಈ ಜೋಡಿ 27 ಎಸೆತಗಳಲ್ಲಿ 67 ರನ್ ಸೇರಿಸಿತು. ನಿಶಾಂತ್ 6 ಬೌಂಡರಿ ನೆರವಿನಿಂದ 31 ರನ್ ಸಿಡಿಸಿ ಔಟ್ ಆದರು. ಯಶ್ವರ್ಧನ್ 22 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿ ಔಟ್ ಆದರು. ಸಮಂತ್ ಜಾಖರ್ ಕೊಂಚ ತಂಡಕ್ಕೆ ಆಧಾರವಾದರು. ಇವರು 17 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ನೆರವಿನಿಂದ 38 ರನ್ ಸಿಡಿಸಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟರ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಅಂತಿಮವಾಗಿ ಹರಿಯಾಣ 18.3 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲೌಟ್ ಆಯಿತು.
ಜಾರ್ಖಂಡ್ ಪರ ಸುಶಾಂತ್ ಮಿಶ್ರಾ, ಬಾಲಕೃಷ್ಣ ತಲಾ ಮೂರು ವಿಕೆಟ್ ಪಡೆದರು ಮಿಂಚಿದರು.
ಇಶಾನ್ ಶತಕ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ತಂಡದ ಆರಂಭಿಕ ವಿರಾಟ್ ಸಿಂಗ್ (2) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. 3 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಇಶಾನ್ ಕಿಶನ್ ಹಾಗೂ ಕುಮಾರ್ ಕುಶಾಗ್ರ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 2ನೇ ವಿಕೆಟ್‌ಗೆ 82 ಎಸೆತಗಳಲ್ಲಿ 177 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಆರಂಭಿಕ ಇಶಾನ್ ಕಿಶನ್ 10 ಸಿಕ್ಸರ್ ಹಾಗೂ 6 ಬೌಂಡರಿ ನೆರವಿನಿಂದ 101 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಕುಮಾರ್ ಕುಶಾಗ್ರ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ 81 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅನುಕೂಲ್ ರಾಯ್ ಅಜೇಯ 40 ಹಾಗೂ ರಾಬಿನ್ ಮಿನ್ಜಾ ಅಜೇಯ 31 ರನ್ ಸಿಡಿಸಿದರು. ಅಂತಿಮವಾಗಿ ಜಾರ್ಖಂಡ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 262 ರನ್ ಕಲೆ ಹಾಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications