IPL 2025 SRH vs RR: ಹೈದರಾಬಾದ್‌ಗೆ ಮೊದಲ ಪಂದ್ಯದಲ್ಲಿ ಭರ್ಜರಿ ಜಯ: ರಾಯಲ್ಸ್‌ಗೆ ನಿರಾಸೆ
ಭರವಸೆಯ ಬ್ಯಾಟರ್ ಇಶಾನ್ ಕಿಶನ್ (106 ರನ್ ಅಜೇಯ) ಬಾರಿಸಿದ ಶತಕ ಹಾಗೂ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ (67 ರನ್) ಇವರುಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ 18ನೇ ಆವೃತ್ತಿಯ ಐಪಿಎಲ್ ನ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 44 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ. ಈ ಮೂಲಕ ಹಾಲಿ ರನ್ನರ್ ಅಪ್ ಸನ್ ತಂಡ ಗೆಲುವಿನ ಶುಭಾರಂಭ ಮಾಡಿದೆ.
ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 286 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 242 ರನ್ ಸೇರಿಸಿ ಅಬ್ಬತಿಸಿತು.

ಭರ್ಜರಿ ಸ್ಟ್ರೈಕ್ ರೇಟ್
ಮೊದಲು ಬ್ಯಾಟ್ ಮಾಡಿದ ಸನ್ ತಂಡದ ಎಲ್ಲ ಬ್ಯಾಟರ್‌ಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದರು. ಪರಿಣಾಮ ತಂಡ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಪ್ರತಿ ಜೊತೆಯಾಟಗಳು ಸಹ ತಂಡದ ರನ್ ವೇಗಕ್ಕೆ ತನ್ನದೇ ಆದ ಕಾಣಿಕೆ ನೀಡಿತು. ಇನ್ನು ಸನ್‌ರೈಸರ್ಸ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳ ಸ್ಟ್ರೈಕ್ ರೇಟ್ 200ಕ್ಕೂ ಹೆಚ್ಚು ಇತ್ತು. ಅಭಿಷೇಕ್ ಶರ್ಮಾ (218 ಸ್ಟ್ರೈಕ್ ರೇಟ್), ಟ್ರಾವಿಸ್ ಹೆಡ್ (216 ಸ್ಟ್ರೈಕ್ ರೇಟ್), ಇಶಾನ್ ಕಿಶನ್ (225 ಸ್ಟ್ರೈಕ್ ರೇಟ್), ನಿತೀಶ್ ಕುಮಾರ್ ರೆಡ್ಡಿ (200 ಸ್ಟ್ರೈಕ್ ರೇಟ್), ಹ್ಯಾನ್ರಿಕ್ ಕ್ಲಾಸೇನ್ (242 ಸ್ಟ್ರೈಕ್ ರೇಟ್) ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು.
ಅಭಿಷೇಕ್ ಶರ್ಮಾ 24, ನಿತೀಶ್ ಕುಮಾರ್ ರೆಡ್ಡಿ 30, ಹೆನ್ರಿಕ್ ಕ್ಲಾಸೇನ್ 34 ರನ್ ಬಾರಿಸಿ ತಂಡಕ್ಕೆ ಆಧಾರವಾದ್ರೆ, ಇಶಾನ್ ಕಿಶನ್ ಅಜೇಯ ಶತಕ ಬಾರಿಸಿದರು. ಇವರು 47 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ ಸೇರಿದಂತೆ ಅಜೇಯ 106 ರನ್ ಸಿಡಿಸಿದರು.

ಕಳಪೆ ಆರಂಭ
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಯಶಸ್ವಿ ಜೈಸ್ವಾಲ್ (1), ರಿಯಾನ್ ಪರಾಗ್ (4), ನಿತೀಶ್ ರಾಣಾ (11) ಜವಾಬ್ದಾರಿ ಮರೆತರು. 50 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸಂಜು ಸ್ಯಾಮ್ಸನ್ ಹಾಗೂ ಧ್ರುವ್ ಜುರೇಲ್ ಆಧಾರವಾದ್ರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾಯಿತು. ಸಂಜು ಸ್ಯಾಮ್ಸನ್ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 66 ರನ್ ಬಾರಿಸಿ ಔಟ್ ಆದರು.
ಧ್ರುವ್ ಜುರೇಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ 70 ರನ್ ಬಾರಿಸಿದರು. ಶ್ರಿಮ್ರೋನ್ ಹೆಟ್ಮೆಯರ್ 42 ರನ್ ಸಿಡಿಸಿದರು. ಶುಭಂ ದುಬೆ ತಮ್ಮ ಚಿಕ್ಕ ಇನಿಂಗ್ಸ್ ಮೂಲಕ ಅಭಿಮಾನಿಗಳಿಗೆ ಮುದ ನೀಡಿದರು. ಇವರು 11 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿ ಆರ್ಭಟಿಸಿದರು.
ಎಸ್‌ಆರ್‌ಎಚ್ ಪರ ಸಮರ್ಜಿತ್ ಸಿಂಗ್, ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications