Ishan Kishan: ಲಂಕಾದಲ್ಲಿ ಇಶಾನ್ ಕಿಶನ್ ರೌದ್ರಾವತಾರ: ಕೋಚ್ ದಾಖಲೆ ಉಡೀಸ್
ಕೊಲಂಬೊ: ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಕ್ಕೆ ಆರಂಭಿಕ ಆಘಾತ ಕಾದಿತ್ತು. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ ಇನ್ನೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಇಶಾನ್ ಕಿಶನ್ ಅಮೋಘ ಬ್ಯಾಟಿಂಗ್ ನಡೆಸಿದರು.
ಪಾಕಿಸ್ತಾನ ಬೌಲರ್‌ಗಳ ತಂತ್ರವನ್ನು ಆರಂಭದಲ್ಲಿ ಅರ್ಥಮಾಡಿಕೊಂಡು ಬ್ಯಾಟ್ ಮಾಡಿದ ಇಶಾನ್, ಬಳಿಕ ತಮ್ಮ ರುದ್ರಾವತಾರ ತಾಳಿದರು. ಪಾಕ್ ತಂಡದ ಸ್ಪಿನ್ ಬೌಲರ್‌ಗಳಿಗೆ ತಕ್ಕ ಪ್ರತಿ ಉತ್ತರ ನೀಡಿದ ಇಶಾನ್ ಕಿಶನ್ ಆರ್ಭಟಿಸಿದರು. ಅಭಿಷೇಕ್ ಶರ್ಮಾ ಬೇಗ ಔಟ್ ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆದರೆ ಇಶಾನ್ ಈ ಅಭಿಮಾನಿಗಳಿಗೆ ಲಂಕಾದಲ್ಲಿ ಮನೋರಂಜಿಸಿದರು.

ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸುವ ಮುನ್ನ ಇಶಾನ್ ಕಿಶನ್ ಅವರಿಗೆ ಈ ತಂಡದಲ್ಲಿ ಸ್ಥಾನ ಲಭಿಸುತ್ತದೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಇದ್ದವು. ಆದರೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಇವರು ನೀಡಿದ ಪ್ರದರ್ಶನ ಆಯ್ಕೆದಾರರ ಗಮನ ಸೆಳೆಯಿತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಜಾರ್ಖಂಡ್ ಗೆಲ್ಲುವಲ್ಲಿ ಇಶಾನ್ ಕಿಶನ್ ಮಹತ್ವದ ಪಾತ್ರವನ್ನು ವಹಿಸಿದರು. ಇವರ ಆಟಕ್ಕೆ ಮನ್ನಣೆ ನೀಡಿದ ಆಯ್ಕೆ ಸಮಿತಿ, ನ್ಯೂಜಿಲೆಂಡ್ ವಿರುದ್ಧ ಹಾಗೂ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದರು.
ಇಶಾನ್ ಕಿಶನ್ ತಂಡಕ್ಕೆ ಕಂ ಬ್ಯಾಕ್ ಮಾಡಿದಾಗಿನಿಂದಲೂ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಈ ವೇಳೆ ಇವರು ಆಡಿದ 7 ಪಂದ್ಯಗಳಲ್ಲಿ 4 ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೈ ಚಳಿ ಬಿಟ್ಟು ಬ್ಯಾಟ್ ಮಾಡಿದ ಇಶಾನ್ ಕಿಶನ್, ಟೀಮ್ ಇಂಡಿಯಾಕ್ಕೆ ಆಧಾರವಾದರು. ಇವರು ತಮ್ಮ ನೈಜ ಆಟವನ್ನು ಆಡಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು.
ಇಶಾನ್ ಅಬ್ಬರ
ಇಶಾನ್ ಕಿಶನ್ ತಮ್ಮ ಬತ್ತಳಿಕೆಯಲ್ಲಿನ ಹಲವು ಹೊಡೆತಗಳನ್ನು ಕೊಲಂಬೊದಲ್ಲಿನ ಸ್ಪಿನ್ ಸ್ನೇಹಿ ಪಿಚ್ ಬಳಿಸಿ ರನ್ ಕಲೆ ಹಾಕಿದರು. ಇವರು ಮಹತ್ವದ ಪಂದ್ಯದಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ 77 ರನ್ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 192 ಆಗಿತ್ತು.
ವಿಶೇಷ ಕ್ಲಬ್‌ನಲ್ಲಿ ಇಶಾನ್ ಎಂಟ್ರಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಇಶಾನ್ ಕಿಶನ್ ತಮ್ಮ ಭರ್ಜರಿ ಇನಿಂಗ್ಸ್ ಮೂಲಕ ದಾಖಲೆ ಬರೆದು, ವಿಶೇಷ ಕ್ಲಬ್‌ಗೆ ಎಂಟ್ರಿ ಪಡೆದರು. ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಮೊದಲ ಅರ್ಧಶತಕ ಬಾರಿಸಿದ ಹೆಗ್ಗಳಿಕೆ ರಾಬಿನ್ ಉತ್ತಪ್ಪ ಅವರಿಗೆ ಸಲ್ಲತ್ತದೆ. ಇವರು ಮೊದಲ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರು. ಇದೇ ವಿಶ್ವಕಪ್‌ನಲ್ಲಿ ಗೌತಮ್ ಗಂಭೀರ್ ಇಂತಹದ್ದೇ ಸಾಧನೆ ಮಾಡಿದ್ದರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸಹ ಸ್ಥಾನ ಪಡೆದಿದ್ದಾರೆ. ಈಗ ಈ ಪಟ್ಟಿಗೆ ಇಶಾನ್ ಕಿಶನ್ ಎಂಟ್ರಿ ಪಡೆದಿದ್ದಾರೆ.
ಕೋಚ್ ದಾಖಲೆ ಉಡೀಸ್
ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಕಾದಾಟದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಇಶಾನ್ ಕಿಶನ್, ಗೌತಮ್ ಗಂಭೀರ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಗೌತಮ್ ಗಂಭಿರ್ 2007ರಲ್ಲಿ 75 ರನ್ ಬಾರಿಸಿದ್ದರು. ಭಾನುವಾರ ಇಶಾನ್ 77 ರನ್ ಸಿಡಿಸಿ ಅಬ್ಬರಿಸಿದ್ದರು. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು 2022ರಲ್ಲಿ ಮೆಲ್ಬೋರ್ನ್‌ನಲ್ಲಿ ಪಾಕ್ ವಿರುದ್ಧ ಅಜೇಯ 82 ರನ್ ಬಾರಿಸಿ ಮಿಂಚಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications