Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 SRH: ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ಸ್ಟಾರ್ ಪ್ಲೇಯರ್‌: ಎಸ್‌ಆರ್‌ಎಚ್‌ ತಂಡಕ್ಕೆ ಹೆಚ್ಚಾಯಿತು ಟೆನ್ಷನ್

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಅಬ್ಬರಿಸಲು ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ತಂಡಗಳು ಈಗಾಗಲೇ ಭರ್ಜರಿ ತಯಾರಿ ನಡೆಸಿವೆ. ಈ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸಹ ಅಭ್ಯಾಸ ಆರಂಭಿಸಿದೆ. ಈ ಪಂದ್ಯದ ವೇಳೆ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್‌ ಒಬ್ಬ ಆರ್ಭಟ ನಡೆಸಿದ್ದಾರೆ. ಇವರ ಆರ್ಭಟವನ್ನು ಕಂಡು ಎಸ್‌ಆರ್‌ಎಚ್‌ ತಂಡದ ಟೆನ್ಷನ್‌ ಹೆಚ್ಚಾಗುತ್ತಿದೆ. ಹಾಗಿದ್ರೆ ಸನ್‌ ತಂಡದ ಚಿಂತೆ ಹೆಚ್ಚಾಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಐಪಿಎಲ್‌ನಲ್ಲಿ ಈಗಾಗಲೇ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಸನ್‌ ಮತ್ತೊಮ್ಮೆ ಈ ಸಾಧನೆ ಮಾಡುವ ತವಕವನ್ನು ಹೊಂದಿದೆ. ಈ ವೇಳೆ ತಂಡ ಐಪಿಎಲ್‌ ಮಗೆ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಿದೆ. ಈ ಆಟಗಾರರು ಈಗ ಇಂಟ್ರಾ-ಸ್ಕ್ವಾಡ್ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದು ಮ್ಯಾನೇಜ್ಮೆಂಟ್‌ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಈ ವೇಳೆ ಸನ್‌ ತಂಡ ಭಾರೀ ಮೊತ್ತವನ್ನು ಖರೀದಿಸಿದ್ದ ಆಟಗಾರನೊಬ್ಬನ ವಿಡಿಯೋವನ್ನು ಹಂಚಿಕೊಂಡಿದೆ.

Ishan Kishan Shines in SRH Intra-Squad Matches Smashes Back-to-Back Explosive Knocks

ಅಭ್ಯಾಸದ ವೇಳೆ ಇಶಾನ್ ಫೈರ್

ಸನ್‌ ರೈಸರ್ಸ್‌ ಮೆಗಾ ಹರಾಜಿನಲ್ಲಿ ಕಿಶನ್ ಅವರನ್ನು 11.25 ಕೋಟಿ ರೂ.ಗೆ ಖರೀದಿಸಿತು. ಇವರು ಸನ್‌ ತಂಡವನ್ನು ಸೇರಿಕೊಳ್ಳುತ್ತಿದ್ದಂತೆ ಆರ್ಭಟಿಸಿದ್ದಾರೆ. ಇವರ ಸ್ಫೋಟಕ ಬ್ಯಾಟಿಂಗ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇಂಟ್ರಾ-ಸ್ಕ್ವಾಡ್ ಎರಡೂ ಪಂದ್ಯಗಳಲ್ಲಿ ಇಶಾನ್ ಕಿಶನ್ ಅಬ್ಬರಿಸಿದ್ದಾರೆ. ಇವರು 23 ಎಸೆತಗಳಲ್ಲಿ 64 ರನ್ ಗಳಿಸಿದರು ಮತ್ತು ನಂತರ ಎರಡನೇ ಅಭ್ಯಾಸ ಪಂದ್ಯದಲ್ಲಿ 30 ಎಸೆತಗಳಲ್ಲಿ 73 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು.

ಮೊದಲ ಅಭ್ಯಾಸ ಪಂದ್ಯದಲ್ಲಿ, ಎಡಗೈ ಬ್ಯಾಟ್ಸ್‌ಮನ್ ಹೈದರಾಬಾದ್‌ನ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಾಣಿಸಿಕೊಂಡ್ರು. ಅಭಿಷೇಕ್‌ ಶರ್ಮಾ 28 ರನ್‌ ಬಾರಿಸಿ ಔಟ್ ಆದರು. ಅಭಿಷೇಕ್ ಔಟಾದ ನಂತರ, ಕಿಶನ್ ಚುರುಕಾದ ಇನ್ನಿಂಗ್ಸ್ ಆಡಿದರು ಮತ್ತು ಅರ್ಧಶತಕ ಗಳಿಸಿದರು. ಇವರು ಮುಂಬೈ ಇಂಡಿಯನ್ಸ್‌ ಪರ 14 ಇನ್ನಿಂಗ್ಸ್‌ಗಳಲ್ಲಿ 320 ರನ್ ಗಳಿಸಿದ್ದರು.

ಟೆನ್ಷನ್‌ ಏಕೆ?

ಸಾಮಾನ್ಯವಾಗಿ ಇಶಾನ್‌ ಕಿಶನ್‌ ಟಾಪ್‌ ಆರ್ಡರ್‌ನಲ್ಲಿ ಆಡುವ ಆಟಗಾರ. ಇವರು ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದ ಪರ ಇನಿಂಗ್ಸ್ ಆರಂಭಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಇವರಿಗೆ ಎಸ್‌ಆರ್‌ಎಚ್‌ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶ ನಿಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಕಾರಣ ಎಸ್‌ಆರ್‌ಎಚ್‌ ತಂಡದಲ್ಲಿ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್ ರೂಪದಲ್ಲಿ ಇಬ್ಬರು ಆರಂಭಿಕರೂ ಈಗಾಗಲೇ ಇದ್ದಾರೆ.

ಐಪಿಎಲ್‌ ಸಾಧನೆ

ಐಪಿಎಲ್‌ನಲ್ಲಿ ಇಶಾನ್‌ ಕಿಶನ್‌ 105 ಪಂದ್ಯಗಳಲ್ಲಿ 2644 ರನ್‌ ಸಿಡಿಸಿದ್ದಾರೆ. 135.87 ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಸಿಡಿಸಿದ್ದಾರೆ. ಈ ವೇಳೆ 16 ಅರ್ಧಶತಕಗಳನ್ನು ಸಿಡಿಸಿದ್ದಾರೆ. 255 ಬೌಂಡರಿ, 119 ಸಿಕ್ಸರ್‌ ಸಿಡಿಸಿ ಅಬ್ಬರಿಸಿದ್ದಾರೆ. ಇವರು ಭಾರತದ ಪರವೂ ಇವರು ಆಡಿದ 27 ಏಕದಿನ ಪಂದ್ಯಗಳಲ್ಲಿ 933 ಸಿಡಿಸಿದ್ದಾರೆ. ನಿದರಲ್ಲಿ ಒಂದು ಶತಕ ಹಾಗೂ 7 ಅರ್ಧಶತಕಗಳು ಸೇರಿವೆ. ಅಲ್ಲದೆ ಇವರು 2 ಟೆಸ್ಟ್‌ ಪಂದ್ಯಗಳಲ್ಲಿ 78 ರನ್‌ ಸಿಡಿಸಿದ್ದಾರೆ. ಅಲ್ಲದೆ ಇವರು ಆಡಿದ 32 ಟಿ20 ಪಂದ್ಯಗಳಲ್ಲಿ 124ರ ಸ್ಟ್ರೈಕ್‌ ರೇಟ್‌ನಲ್ಲಿ 6 ಅರ್ಧಶತಕ ಸೇರಿದಂತೆ 796 ರನ್ ಸಿಡಿಸಿದ್ದಾರೆ.

Story first published: Sunday, March 16, 2025, 19:44 [IST]
Other articles published on Mar 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+