ತಾವೇ ಮಾಡಿದ ತಪ್ಪಿಗೆ ಬೆಲೆ ತೆರುತ್ತಿರುವ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್: ಆಟಗಾರರು ಮಾಡಿದ ತಪ್ಪೇನು ಇಲ್ಲದೆ ಮಾಹಿತಿ
ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟಿ20 ಸರಣಿಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಸ್ಥಾನ ಲಭಿಸದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದವು.
ವೆಸ್ಟ್ ಇಂಡೀಸ್-ಅಮೆರಿಕಾದ ಅತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಅಫ್ಘಾನಿಸ್ತಾನ ವಿರುದ್ಧದ ಸರಣಿ ಪ್ರಾಮುಖ್ಯತೆ ಪಡೆದಿತ್ತು. ಈ ಸರಣಿಯಲ್ಲಿ ಇಬ್ಬರೂ ಸ್ಟಾರ್ ಆಟಗಾರರಿಗೆ ಸ್ಥಾನ ನೀಡದೆ ಇರುವುದು ಇವರನ್ನು ಟೀಮ್ ಮ್ಯಾನೇಜ್ಮೆಂಟ್ ಟಿ20 ವಿಶ್ವಕಪ್ ತಂಡದಿಂದ ಹೊರಗಿಡುವ ಪ್ಲ್ಯಾನ್ ಮಾಡಿಕೊಂಡಿದೆಯಾ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.

ಇಶಾನ್ ಕಿಶನ್ ಟೀಮ್ ಇಂಡಿಯಾದೊಂದಿಗೆ ಒಂದು ವರ್ಷ ಪ್ರಯಾಣಿಸುತ್ತಿದ್ದರು, ಆದ್ದರಿಂದ ಮಾನಸಿಕ ಆಯಾಸದಿಂದ ಅವರು ವಿಶ್ರಾಂತಿಯಲ್ಲಿದ್ದಾರೆ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಶ್ರೇಯಸ್ ಅಯ್ಯರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಇಲ್ಲಿಯವರೆಗೆ ಹೇಳಲಾಗುತ್ತಿತ್ತು. ಆದರೆ ಇದೀಗ ಈ ವಿಚಾರದಲ್ಲಿ ಹೊಸದೊಂದು ಬಹಿರಂಗವಾಗಿದೆ.
ಎಬಿಪಿ ವರದಿಯಂತೆ, ಶಿಸ್ತಿನ ಆಧಾರದ ಮೇಲೆ ಇಬ್ಬರೂ ಅಫ್ಘಾನಿಸ್ತಾನ ಸರಣಿಯಲ್ಲಿ ಆಯ್ಕೆಯಾಗಿಲ್ಲ. ಇಶಾನ್ ಕಿಶನ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ತಮ್ಮ ಹೆಸರನ್ನು ಹಿಂಪಡೆದಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಇಶಾನ್ ತಂಡದೊಂದಿಗೆ ನಿರಂತರವಾಗಿ ಪ್ರಯಾಣಿಸಿದ್ದರು ಅವಕಾಶಗಳು ಅಂದುಕೊಂಡಷ್ಟು ಲಭಿಸಲಿಲ್ಲ. ಈ ಕಾರಣಕ್ಕಾಗಿ, ಇಶಾನ್ ಮಾನಸಿಕ ಆಯಾಸವನ್ನು ಕಾರಣವೆಂದು ಉಲ್ಲೇಖಿಸಿ ಬಿಸಿಸಿಐನಿಂದ ವಿರಾಮ ಕೇಳಿದ್ದರು.
ಇಶಾನ್ ಮಾಜಿ ನಾಯಕ ಎಂಎಸ್ ಧೋನಿ ಜೊತೆ ದುಬೈನಲ್ಲಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಅವರು ಜನಪ್ರಿಯ ಟಿವಿ ರಸಪ್ರಶ್ನೆಯಲ್ಲಿ ಕಾಣಿಸಿಕೊಂಡಿದ್ದರು. ಇದು ಆಯ್ಕೆಗಾರರನ್ನು ಕೆರಳಿಸಿತು ಮತ್ತು ಅಫ್ಘಾನಿಸ್ತಾನ ವಿರುದ್ಧದ T20 ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಲಿಲ್ಲ. ಇದರ ಪರಿಣಾಮವನ್ನು ಟಿ20 ವಿಶ್ವಕಪ್‌ನಲ್ಲೂ ಇಶಾನ್ ಎದುರಿಸಬೇಕಾಗಬಹುದು ಎಂಬ ಸುದ್ದಿಯೂ ಇದೆ.

ರಣಜಿ ಆಡದ ನಿರ್ಧಾರ
ಶ್ರೇಯಸ್ ಅಯ್ಯರ್ ಅವರ ಕಥೆ ಸ್ವಲ್ಪ ವಿಭಿನ್ನವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 41 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡಿ ಫಾರ್ಮ್ ಅನ್ನು ಕಂಡುಕೊಳ್ಳಲು ಆಯ್ಕೆದಾರರು ಸಲಹೆ ನೀಡಿದ್ದರು, ಆದರೆ ಶ್ರೇಯಸ್ ಈ ಸಲಹೆಯನ್ನು ನಿರ್ಲಕ್ಷಿಸಿ ವಿಶ್ರಾಂತಿ ಪಡೆಯುವುದು ಉತ್ತಮ ಎಂದು ಭಾವಿಸಿದ್ದರು.
ಇದರಿಂದಾಗಿ ಟಿ20 ತಂಡದಲ್ಲೂ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಶೀಘ್ರದಲ್ಲೇ ತನ್ನ ತಪ್ಪಿನ ಅರಿವಾದ ಶ್ರೇಯಸ್ ಇದೀಗ ಜನವರಿ 12 ರಿಂದ ಆರಂಭವಾಗಲಿರುವ ರಣಜಿ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.
ಮುಂಬೈನ ಮುಂಬರುವ ಪಂದ್ಯಗಳಲ್ಲಿ ಶಿವಂ ದುಬೆ ಆಡಲು ಸಾಧ್ಯವಿಲ್ಲ. ವಾಸ್ತವವಾಗಿ, ಶಿವಂ ದುಬೆ ಅಫ್ಘಾನಿಸ್ತಾನ ಸರಣಿಯಲ್ಲಿ ಭಾರತೀಯ ತಂಡದ ಭಾಗವಾಗಿದ್ದಾರೆ. ಈ ಸರಣಿಯು ಜನವರಿ 11 ರಿಂದ ಪ್ರಾರಂಭವಾಗಲಿದೆ. ಸರ್ಫರಾಜ್ ಖಾನ್ ಭಾರತ-ಎ ತಂಡದ ಭಾಗವಾಗಿದ್ದಾರೆ. ಈ ಕಾರಣದಿಂದ ಸರ್ಫರಾಜ್ ಖಾನ್ ಕೂಡ ಮುಂಬರುವ ಪಂದ್ಯಗಳಲ್ಲಿ ಆಡುವುದಿಲ್ಲ. ಹೀಗಾಗಿ ಶ್ರೇಯಸ್ ಅಯ್ಯರ್ ವಾಪಸಾತಿ ಮುಂಬೈಗೆ ಶುಭ ಸುದ್ದಿ ಎಂದೇ ಪರಿಗಣಿಸಲಾಗುತ್ತಿದೆ. ಇತ್ತೀಚೆಗೆ, ಶ್ರೇಯಸ್ ಅಯ್ಯರ್ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಭಾಗವಾಗಿದ್ದರು. ಆದರೆ, ಈ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಪ್ರದರ್ಶನ ನಿರಾಶಾದಾಯಕವಾಗಿತ್ತು.
ಮುಂಬೈ ಮತ್ತು ಆಂಧ್ರಪ್ರದೇಶ ನಡುವಿನ ಪಂದ್ಯ ಜನವರಿ 12 ರಿಂದ ನಡೆಯಲಿದೆ. ಎಲೈಟ್ ಗ್ರೂಪ್-ಬಿಯ ಈ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಪ್ರಸ್ತುತ ಎಲೈಟ್ ಗ್ರೂಪ್-ಬಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ. ಮುಂಬೈ ತನ್ನ ಕೊನೆಯ ಪಂದ್ಯದಲ್ಲಿ ಬಿಹಾರವನ್ನು ಸುಲಭವಾಗಿ ಸೋಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications